ರಾತ್ರಿ ಸಿಸಿ ರಸ್ತೆ ಕಳಪೆ ಕಾಮಗಾರಿ -ಗುತ್ತಿಗೆದಾರರ ಜೋತೆ ಶಾಮೀಲು ಶಂಕೆ

ದುರುಗಪ್ಪ ಹೊಸಮನಿ
ಲಿಂಗಸುಗೂರು.ಸೆ.೧೭- ತಾಲ್ಲೂಕಿನ ಸ್ಥಳೀಯ ಬಸ್ ನಿಲ್ದಾಣದ ಬಹಳ ದಿನಗಳಿಂದ ಕಾಮಗಾರಿ ಮಾಡದೆ
ಅಧಿಕಾರಿಗಳ ದ್ವಂದ್ವ ನಿಲುವು ತೊರಿದ ಪರಿಣಾಮವಾಗಿ ಬಸ್ ನಿಲ್ದಾಣದಲ್ಲಿ ನಡೆಯಬೇಕಿದ್ದ ಸಿಸಿ ರಸ್ತೆ ಕಾಮಗಾರಿ ಗುತ್ತಿಗೆದಾರರನಿರ್ಲಕ್ಷ್ಯ ದಿಂದ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಹಲವಾರು ವಿವಿಧ ಸಂಘಟನೆಗಳಿಂದ ಸಾರಿಗೆ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಿದರು.
ಆದರೆ ಅಧಿಕಾರಿಗಳ ಎಡವಟ್ಟಿನಿಂದ ಗುತ್ತಿಗೆದಾರರ ನಿರ್ಲಕ್ಷ್ಯ ದಿಂದ ಕಾಮಗಾರಿ ನಡೆಯದೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಬಸ್ ನಿಲ್ದಾಣದ ಹೊಳ ಸಿಸಿ ರಸ್ತೆ ಅಗಲೀಕರಣಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪ್ರಯಾಣಿಕರಿಗೆ ತೊಂದರೆ ಅನುಭವಿಸುವಂತಾಗಿದೆ ಇದರಿಂದಾಗಿ ಬಸ್ ನಿಲ್ದಾಣದಲ್ಲಿ ಏಳು ತಿಂಗಳ ಹಿಂದೆ ಕಾಮಗಾರಿ ಮಾಡಿ ಸಾರ್ವಜನಿಕರಿಗೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡದೆ ಪ್ರಯಾಣಿಕರ ಜೋತೆ ಚಲ್ಲಾವಾಡುತ್ತಿದ್ದಾರೆ ಎಂದು ಇಂದು ಬೆಳಗ್ಗೆ ಸಂಜೆ ವಾಣಿ ವರದಿಗಾರರೊಂದಿಗೆ ಸಾರ್ವಜನಿಕರು ಪ್ರಯಾಣಿಕರು ಗುತ್ತಿಗೆದಾರರ ಹಾಗೂ ಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಮಕಾವಸ್ಥೆ ಬಸ್ ನಿಲ್ದಾಣಕ್ಕೆ ಸಾರಿಗೆ ಡಿಸಿ ಎಂ ವೆಂಕಟೇಶ್ ಧೀಡಿರ್ ಭೇಟಿ ಲಿಂಗಸುಗೂರು ಪಟ್ಟಣದ ಬಸ್ ನಿಲ್ದಾಣದ ಕಾಮಗಾರಿ ಸ್ಥಳಕ್ಕೆ ಕಲ್ಯಾಣ ಕರ್ನಾಟಕ ಸಾರಿಗೆ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಂ ವೆಂಕಟೇಶ್ ಬೇಟಿ ನೀಡುವ ಮುಖಾಂತರ ನಾಮಕಾವಸ್ಥೆ ಬಸ್ ನಿಲ್ದಾಣದ ಕಾಮಗಾರಿ ಹಗಲು ಹೊತ್ತಿನಲ್ಲಿ ಬೇಟಿ ಮಾಡಿ ಪರಿಶೀಲನೆ ನಡೆಸಿದರು.
ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದರೆ ಪ್ರಯಾಣಿಕರಿಗೆ ತೊಂದರೆ ಆಗದಂತೆ ಸಾರಿಗೆ ಅಧಿಕಾರಿ ಎಂ ವೆಂಕಟೇಶ್ ರವರು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ರಾತ್ರಿ ಯಲ್ಲಿ ಗುತ್ತಿಗೆದಾರರ ಕೈಚಳಕ ಸಿಸಿ ರಸ್ತೆ ಕಾಮಗಾರಿ ಕಳಪೆ ವಿವಿಧ ಸಂಘಟನೆಗಳಿಂದ ಆಕ್ರೋಶ ಬಸ್ ನಿಲ್ದಾಣದ ಸಿಸಿ ಕಾಮಗಾರಿ ರಾತ್ರಿಯ ವೇಳೆ ಯಲ್ಲಿ ಗುತ್ತಿಗೆದಾರರ ಕೈಚಳಕದಿಂದ ಸಿಸಿ ಕಾಮಗಾರಿ ಕಳಪೆ ಕಾಮಗಾರಿ ಮಾಡಿ ಸಾರ್ವಜನಿಕರ ತೇರಿಗೆ ಹಣ ಸಂಪೂರ್ಣವಾಗಿ ಲೂಟಿ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ರಾತ್ರಿ ನಡೆಸಿದ ಸಿಸಿ ರಸ್ತೆ ಕಾಮಗಾರಿ ಪೋಟೋನೆ ಸಾಕ್ಷಿಯಾಗಿದೆ.
ಒಂದು ಕಡೆ ನಾಮಕಾವಸ್ಥೆ ಸಾರಿಗೆ ಡಿಸಿ ಭೇಟಿ ಗುತ್ತಿಗೆದಾರರ ಕಳಪೆ ಕಾಮಗಾರಿಗೆ ಅಧಿಕಾರಿಗಳ ಸಾಥ್
ಲಿಂಗಸುಗೂರು ಬಸ್ ನಿಲ್ದಾಣಕ್ಕೆ ನಿನ್ನೆ ಮಧ್ಯಾಹ್ನ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಂ ವೆಂಕಟೇಶ್ ಬೇಟಿ ನೀಡುವ ದಕ್ಷ ಅಧಿಕಾರಿ ಎಂದು ಬಿಂಬಿಸಿಕೊಳ್ಳುವ ಅಧಿಕಾರಿ ಎಂದರೆ ತಪ್ಪಾಗಲಾರದು ಏಕೆಂದರೆ ಸಾರಿಗೆ ಅಧಿಕಾರಿಗಳು ಗುತ್ತಿಗೆದಾರರ ಜೋತೆ ಕೈಜೋಡಿಸಿ ಕಳಪೆ ಕಾಮಗಾರಿಗೆ ಸಾಥ್ ನೀಡಿದ್ದಾರೆ.
ಮೇಲ್ನೋಟಕ್ಕೆ ಕಂಡು ಬರುತ್ತಿದೆ ಅಧಿಕಾರಿಗಳ ಬೇಜವಾಬ್ದಾರಿತನ ಬೇಟಿ ಯಿಂದ ಇಂದು ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಳಪೆ ಕಾಮಗಾರಿ ಮಾಡಲಾಗುತ್ತದೆ ಎಂದು ದಲಿತ ಸಂಘಟನೆಯ ಮುಖಂಡರು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಗುತ್ತಿಗೆ ಪಡೆದ ಗುತ್ತಿಗೆದಾರರ ಲೈಸೆನ್ಸ್ ರದ್ದು ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಅಧಿಕಾರಿಗಳು ಎಚ್ಚೆತ್ತುಕೊಂಡು ಗುಣಮಟ್ಟದ ಕಾಮಗಾರಿ ಮಾಡಿ ಸಾರ್ವಜನಿಕರಿಗೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡಲು ಮುಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಳಪೆ ಕಾಮಗಾರಿಗೆ ಅಧಿಕಾರಿಗಳು ಗುತ್ತಿಗೆದಾರರಿಗೆ ಸಾತ್ ನೀಡಿದರೆ ಹೋರಾಟಕ್ಕೆ ಹಿಂಜರಿಯುವುದಿಲ್ಲ ಎಂದು ದಲಿತ ಸಂಘಟನೆಯ
ಭೀಮವಾದ ಜಿಲ್ಲಾ ಸಂಘಟನಾ ಸಂಚಾಲಕ ಯಂಕಪ್ಪ ಚಿತ್ತಾಪುರ ತಾಲುಕು ಅಧ್ಯೆಕ್ಷ ನಾಗರಾಜ್ ಹಾಲಬಾವಿ ಮೌನೇಶ್ ಗುಡದನಾಳ ಶರಣಬಸವ ಬಸವರಾಜ ಶಶಿಕುಮಾರ್ ಸೇರಿದಂತೆ ಇತರರು ಎಚ್ಚರಿಕೆ ನೀಡಿದ್ದಾರೆ.