ರಾತ್ರಿ ಬಟ್ಟೆ ವ್ಯಾಪಾರ/ಕೊವಿಡ್ ನೀತಿ ಉಲ್ಲಂಘನೆ, ಅಂಗಡಿ ಮಾಲಿಕ ಸೇರಿ ಇಬ್ಬರ ಬಂಧನ

ಶಹಾಪುರ:ಮೇ.16:ಲಾಕ್ ಡೌನ್ ನೀತಿ ಉಲ್ಲಂಘಸಿ.ರಾತ್ರಿ ಬಟ್ಟೆ ವ್ಯಾಪಾರ ಮಾಡುವ ಅಮಗಡಿ ಮಾಲಿಕ ಮತ್ತು ಸಾಹಾಯಕ ಇಬ್ಬರು ಪೋಲಿಸ್ ಅಥಿತಿಗಳಾದ ಘಟನೆ ಶಹಾಪುರ ನಗರದಲ್ಲಿ ಮೇ, 13 ರಂದು ನಡೆದಿದೆ. ಲಾಕ್ ಡೌನ್ ನೀತಿ. ಹಿನ್ನಲೆಯಲ್ಲಿ ನಗರದ್ಯಾಂತ ಅಂಗಡಿ ಮುಗ್ಗಟ್ಟುಗಳು ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿ ಹೊರತು ಪಡಿಸಿ,ಎಲ್ಲಾಅಂಗಡಿ ಮುಚ್ಚಲು ಕಟ್ಟುನಿಟ್ಟಿನ ಆದೇಶ ಮಾಡಿದ್ದರೂ. ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿರುವ ರಾಜಾಸ್ಥಾನಿ ಮೂಲದಃ ಮಾಹಾಲಕ್ಷ್ಮಿ ಫ್ಯಾಶನ್ ಬಟ್ಟೆ ಅಂಗಡಿ ರಾತ್ರಿ ವ್ಯವಹಾರ ಮಾಡುತ್ತಿದ್ದಾಗ ಸಿಕ್ಕಿ ಬಿದಿದ್ದಾರೆ.ಮೇ.13ರಂದು ನಗರ ಸಭೆ ಸಿಬ್ಬಂದಿಯವರು ರಾತ್ರಿ ಗಸ್ತಿನಲ್ಲಿದ್ದಾಗ ಈ ಬಟ್ಟೆ ಅಂಗಡಿಯಲ್ಲಿ ಜನ ಸೇರಿದ್ದನ್ನು ಗಮನಿಸಿದ್ದರು. ಸುಮಾರು 11 ಗಂಟೆ ಸುಮಾರಿಗೆ ಬಟ್ಟೆ ದುಖಾನ ತೆರೆದ ಕಾರಣ ಒಳಗಡೆ ಹೋದ ನಗರಸಭೆ ಸಿಬ್ಬಂದಿಯರಾದ ಶರಣು, ಆನಂದ. ಅಂಗಡಿ ಮುಚ್ಚಲು ಹೇಳಿದ್ದಾರೆ. ಇವರ ಮಾತಿಗೂ ಕ್ಯಾರೆ ಅನ್ನದ ಈ ಬಟ್ಟೆ ಅಂಗಡಿ ಮಾಲಿಕ ಅಮರೇರಾಮ.ತಂದೆ ಸುರೆರಾಮ ಪಟೇಲ್ ಸಾ,ಶಹಾಪುರ ಇತನು ಸಿಬ್ಬಂದಿಯವರ ಮೇಲೆರಗಿದ್ದಾನೆ. ಕರ್ತವ್ಯಕ್ಕೂ ಅಡ್ಡಿಪಡಿಸಿ ಅವರ ಕೈಗೆ ಹಲ್ಲಿನಿಂದ ಕಚ್ಚಿದ್ದಾನೆ. ಹೀಗೆ ವಾದ ವಿವಾದಗಳು ಎರ್ಪಟ್ಟಾಗ .ಸ್ಥಳಿಯ ಪೋಲಿಸ್ ಠಾಣೆಗೆ ಸುದ್ದಿ ತಿಳಿದ ಪಿಐ ಚೆನ್ನಯ್ಯ ಹಿರೆಮಠರವರ ಸೂಕ್ತ ಮಾರ್ಗದರ್ಶನದಲ್ಲಿ. ಎ.ಎಸ್.,ಐ ಧರ್ಮಣ್ಣ ಜಂಗಳಿಯವರ ನೇತೃತ್ವದ ಪಿಸಿಗಳಾದ ಲಕ್ಕಪ್ಪ ಬಾಬು ಶರಣಪ್ಪ ರವರು, ಸ್ಥಳಕ್ಕೆ ಧಾವಿಸಿದಾಗ, ಪೋಲಿಸರು ಮಾಲಿಕನಿಗೆ ಅಂಗಡಿ ಮುಚ್ಚಲು ಹೇಳಿದ್ದಾರೆ. ಪೋಲಿಸರಿಗೂ ಜಗ್ಗದ ಈ ಅಂಗಡಿ ಮಾಲಿಕನ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ಬಟ್ಟೆ ಅಂಗಡಿ ಮಾಲಿಕ ಅಮರರಾಮ ಮತ್ತು ಶ್ರವಣ್ ಇಬ್ಬರನ್ನು ವಶಕ್ಕೆ ಪಡೆದುಕೊಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.


ನಗರದಲ್ಲಿ ನಗರಸಭೆಯಿಂದ ಪ್ರತಿ 6 ತಂಡಗಳನ್ನು ರಚನೆ ಮಾಡಿದ್ದು ಕೊವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಾಗಿದೆ. ಅಲ್ಲದೆ ಕೇಂದ್ರ ಸ್ಥಾನದಲ್ಲಿ 2 ತಂಡಗಳು ಪ್ರತಿ ದಿನ ಕಾರ್ಯ ಪ್ರವೃತರಾಗಿರುತ್ತಾರೆ.ಪ್ರತಿ ತಂಡದಲ್ಲಿ 6 ಜನರ ಸಿಬ್ಬಂದಿಗಳಿದ್ದು ರಾತ್ರಿ ಹಗಲು ಕರ್ತವ್ಯದಲ್ಲಿರುತ್ತಾರೆ. ಈ ನಿಟ್ಟಿನಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ನಗರಸಭೆ ಸಿಬ್ಬಂದಿ ಮತ್ತು ಪೋಲಿಸರೊಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪ್ರಥಮ ವರ್ತಮಾನ ವರದಿ ಆಧರಸಿಕೊಂಡು ಸ್ಥಳಿಯ ಮಾಹಾಲಕ್ಷ್ಮಿ ಫ್ಯಾಶನ್ ಬಟ್ಟೆ ಅಂಗಡಿ ಪರವಾನಿಗೆ ತಾತ್ಕಾಲಿಕವಾಗಿ ಸಸ್ಪಂಡ್ ಮಾಡಲಾಗುತ್ತದೆ. ಅಲ್ಲದೆ ಪ್ರತಿ 31 ವಾರ್ಡಗಳಲ್ಲಿ ದ್ರಾವಣ ಸೀಂಪರಣೆ ಕಾರ್ಯ ಮುಗಿದಿದ್ದು. ಇನ್ನೂ ಏರಡನೇ ಸುತ್ತಿನ ಸಿಂಪರಣೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.ಇನ್ನೂ ಕುಡಿಯುವ ನೀರಿಗೆ ಯಾವುದೆ ಬರವಿಲ್ಲ,ಜೂನ್‍ವರೆಗೂ ಫಿಲ್ಟರ್ ಬೆಡ್ ಕರೆಯಲ್ಲಿ ನೀರು ಸಂಗ್ರಹವಿದ್ದು. ಈಗಾಗಲೆ ಮಾಜಿ ಮಂತ್ರಿಗಳು ಹಾಲಿ ಶಾಸಕರಾದ ಶರಣಬಸ್ಸಪ್ಪಗೌಡ ದರ್ಶನಾಪುರವರ ಮತ್ತೊಂದು ಬಾರಿ ಕುಡಿಯಲು ನೀರು ಬೀಡುವಂತೆ ಪತ್ರ ಬರೆದಿದ್ದಾರೆ. ಈ ವ್ಯವಸ್ಥೆಗಳಿಂದ ಕುಡಿಯುವ ನೀರಿನ ಹಾಹಾಕಾರ ನಿರಾಳವಾಗಿದೆ.

              ದೇವಿಂದ್ರ ಹೆಗಡೆ

         ಪ್ರಬಾರಿ ಪೌರಾಯುಕ್ತರು ನಗರಸಭೆ ಶಹಾಪುರ