ರಾತ್ರಿ ಕರ್ಫ್ಯೂ ಇಂದಿನಿಂದ ಜಾರಿ

ಬೆಂಗಳೂರು,ಏ. ೨೧- ರಾಜ್ಯದಲ್ಲಿ ಕೊರೊನಾ ಸೋಂಕನ್ನು ತಡೆಯಲು ಸರ್ಕಾರ ಜಾರಿ ಮಾಡಿರುವ ರಾತ್ರಿ ಕರ್ಫ್ಯೂ ಇಂದು ರಾತ್ರಿಯಿಂದ ರಾಜ್ಯದಾದ್ಯಂತ ಜಾರಿಯಾಗಲಿದೆ. ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡುವವರಿಗೆ ಶಿಕ್ಷೆ ಕಾದಿದೆ. ಹಾಗೆಯೇ ವಾರಾಂತ್ಯ ಲಾಕ್‌ಡೌನ್ ಶುಕ್ರವಾರ ರಾತ್ರಿಯಿಂದ ಜಾರಿಯಾಗಲಿದ್ದು, ಶನಿವಾರ, ಭಾನುವಾರ ಇಡೀ ರಾಜ್ಯ ಸ್ತಬ್ಧವಾಗಲಿದೆ.
ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಇಂದಿನಿಂದ ಮೇ ೪ರವರೆಗೆ ಜಾರಿಯಲ್ಲಿ ಇರಲಿದ್ದು, ರಾತ್ರಿ ೯ ಗಂಟೆಯಿಂದ ಬೆಳಗಿನ ಜಾವ ೬ ಗಂಟೆವರೆಗೆ ರಾತ್ರಿ ಕರ್ಫ್ಯೂ ಇರುತ್ತದೆ, ಈ ಅವಧಿಯಲ್ಲಿ ಯಾರೇ ರಸ್ತೆಗಿಳಿದರೂ ಅವರಿಗೆ ಪೊಲೀಸರು ಬಿಸಿ ಮುಟ್ಟಿಸಲಿದ್ದಾರೆ.
ರಾತ್ರಿ ಕರ್ಫ್ಯೂ ಜತೆಗೆ ವಾರಾಂತ್ಯ ಲಾಕ್‌ಡೌನ್ ಜಾರಿಗೊಳಿಸಿದ್ದು, ಅದರಂತೆ ಶುಕ್ರವಾರ ರಾತ್ರಿ ೯ ರಿಂದ ಸೋಮವಾರ ಬೆಳಿಗ್ಗೆ ೬ರವರೆಗೂ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರಲಿದೆ. ವಾರಾಂತ್ಯ ಕರ್ಫ್ಯೂ ಹಗಲು-ರಾತ್ರಿ ಎನ್ನದೆ ದಿನದ ಎರಡು ದಿನ ಎಲ್ಲ ರೀತಿಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ರಾಜ್ಯ ಸಂಪೂರ್ಣವಾಗಿ ಸ್ಥಬ್ಧಗೊಳ್ಳಲಿದೆ.
ಏನಿರಲ್ಲ
ಇಂದಿನಿಂದಲೇ ಜಾರಿಗೆ ಬರುವಂತೆ ಶಾಲಾ, ಕಾಲೇಜು, ಬಾರ್, ಪಬ್, ಹೋಟೆಲ್, ದೇವಸ್ಥಾನ, ಚರ್ಚ್, ಮಸೀದಿ, ಕೋಚಿಂಗ್ ಕೇಂದ್ರ, ಸಿನಿಮಾ ಮಂದಿರ, ಮಲ್ಟಿಫ್ಲೆಕ್ಸ್, ಶಾಪಿಂಗ್‌ಮಾಲ್, ಈಜುಕೊಳ, ಮನರಂಜನಾ ಅಮೀಜ್ಮೆಂಟ್ ಪಾರ್ಕ್, ಆಡಿಟೋರಿಯಂ, ಜಿಮ್, ಯೋಗಕೇಂದ್ರ, ಸ್ಪಾ ಬಂದ್.
ಯಾವುದೇ ರೀತಿಯ ಸಾಮಾಜಿಕ ಮತ್ತು ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾವೇಶಗಳಿಗೂ ನಿಬಂಧ.
ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಭಕ್ತರಿಗೆ ಅವಕಾಶ ಇರುವುದಿಲ್ಲ. ಆದರೆ, ಅರ್ಚಕರು ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್‌ಗಳಿಗೆ ಮಾತ್ರ ಅವಕಾಶ,
ಮದುವೆ ಸಮಾರಂಭಕ್ಕೆ ೫೦ ಮಂದಿಗೆ ಅವಕಾಶ, ಶವಸಂಸ್ಕಾರದಲ್ಲಿ ಪಾಲ್ಗೊಳ್ಳಲು ೨೦ ಜನರಿಗಷ್ಟೆ ಅವಕಾಶ.
ಏನಿರುತ್ತದೆ
ಕಿರಾಣಿ ಅಂಗಡಿ, ನ್ಯಾಯಬೆಲೆ ಅಂಗಡಿ, ಹಣ್ಣು-ತರಕಾರಿ, ಹಾಲು, ಮಾಂಸ, ಮೀನು ಮಾರಾಟ ಅಂಗಡಿಗಳಿಗೆ ಅವಕಾಶ. ಸಲೂನ್, ಬ್ಯೂಟಿಪಾರ್ಲರ್ ತೆರೆಯಲು ಅವಕಾಶ,
ಬಸ್ ಮತ್ತು ರೈಲು ಓಡಾಟಕ್ಕೆ ಅವಕಾಶ, ಖಾಸಗಿ ವಾಹನಗಳಿಗೆ ನಿರ್ಬಂಧ,
ಪೆಟ್ರೋಲ್ ಬಂಕ್ ಗ್ಯಾಸ್ ಸೇವಾ ಅಭಾದಿತ.
ಆಸ್ಪತ್ರೆ, ಪ್ರಯೋಗಾಲಯ, ಮೆಡಿಕಲ್ ಸ್ಟೋರ್ ಎಂದಿನಂತೆ ಕಾರ್ಯ.
ಸರ್ಕಾರಿ ಕಚೇರಿಗಳಲ್ಲಿ ಶೇ. ೫೦ರಷ್ಟು ಸಿಬ್ಬಂದಿಗಳಿಗೆ ಕೆಲಸ ಮಾಡಲು ಅವಕಾಶ.
ಎಲ್ಲ ಕೈಗಾರಿಕೆಗಳು, ಕೋವಿಡ್ ನಿಯಮ ಪಾಲಿಸಿ ಕಾರ್ಯನಿರ್ವಹಣೆಗೆ ಅವಕಾಶ.
ಎಲ್ಲ ರೀತಿಯ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ.
ಮದ್ಯದಂಗಡಿ ಬಾರ್‌ಗಳಲ್ಲಿ ಮದ್ಯ ತೆಗೆದುಕೊಂಡು ಹೋಗಲು ಅವಕಾಶ, ಆದರೆ ಅಲ್ಲೆ ಮದ್ಯ ಸೇವನೆ ಅವಕಾಶವಿಲ್ಲ.