ರಾತ್ರಿ ಕಫ್ರ್ಯೂ ಉಲ್ಲಂಘನೆ:ಲಾಠಿ ಏಟು,ಬಸ್ಕಿ ಶಿಕ್ಷೆ

ಕಲಬುರಗಿ ಏ 28: ರಾತ್ರಿ ಕಫ್ರ್ಯೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡಿಕೊಂಡಿದ್ದವರಿಗೆ ಸಂಚಾರಿ ಪೋಲಿಸರು ಲಾಠಿ ಏಟಿನ ಬಿಸಿ ಮುಟ್ಟಿಸಿದರು. ಕುಳಿತು ಏಳುವ ಬಸ್ಕಿ ಶಿಕ್ಷೆ ವಿಧಿಸಿದರು.
ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ರಾತ್ರಿ ಪಾಳಿ ಇತ್ಯಾದಿ ಅಗತ್ಯ ಕೆಲಸಕ್ಕಾಗಿ ಸಂಚರಿಸುವ ಜನರಿಗೆ ಪೊಲೀಸರು ವಿಚಾರಣೆ ನಡೆಸಿ, ಪರಿಚಯ ಪತ್ರ ನೋಡಿ ಕಳಿಸಿದರು.
ದ್ವಿಚಕ್ರ ವಾಹನ, ಆಟೋ ,ಕಾರು ಮುಂತಾದ ವಾಹನ ಸವಾರರು ಪೊಲೀಸರ ಪೊಲೀಸರ ವಿಚಾರಣೆ ಎದುರಿಸಬೇಕಾಯಿತು,ಕೆಲವರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಸಂಚಾರಿ ಎಸಿಪಿ ಸುಧಾ ಆದಿ ಅವರ ನೇತೃತ್ವದಲ್ಲಿ ,ಪಿಐ ಪಂಡಿತ ಸಗರ,ಪಿಎಸ್‍ಐ ವಾಹೀದ ಕೋತ್ವಾಲ್ ಮತ್ತು ಸಿಬ್ಬಂದಿ ವರ್ಗದವರು ರಾತ್ರಿ ಕಫ್ರ್ಯೂ ಉಲ್ಲಂಘನೆಯ ವಿರುದ್ಧ ಕಾರ್ಯಚರಣೆಗಿಳಿದರು.