ಕಾಳಗಿ : ಜೂ.16: ಪಟ್ಟಣದ ಶ್ರೀಮತಿ ನಾಗರತ್ನಮ್ಮ ಶಿವಶರಣಪ್ಪ ಕಮಲಾಪುರ್, ಶ್ರೀ ರೇವಣಸಿದ್ದೇಶ್ವರ ಪ್ರಥಮ ದರ್ಜೆ ಂ ಗ್ರೇಡ್ ಕಾಲೇಜಿನಲ್ಲಿ ಖೋ – ಖೋ , ವಾಲಿಬಾಲ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಭೂಮಿ ಅಗೆಯಲಾಗಿದ್ದು ಆ ಮಣ್ಣು ಕಾಲೇಜು ಆವರಣದ ತಗ್ಗು ಸ್ಥಳಗಳಲ್ಲಿ ಭರ್ತಿ ಮಾಡಲು ತಿಳಿಸಲಾಗಿತ್ತು ಆದರೆ ಶನಿವಾರ ರಾತ್ರಿ ಸುಮಾರು 150 ರಿಂದ 200 ಟ್ರಾಕ್ಟರ್ ಮಣ್ಣು ಹತ್ತಿರದ ಖಾಸಗಿ ಜಮೀನಿಗೆ ಸಾಗಿಸಲಾಗಿದೆ, ಸೋಮವಾರ ಕಾಲೇಜಿಗೆ ಬಂದು ಅನುಮಾನ ಬಂದು ಸಿಸಿ ಟಿವಿ ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ, ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಅವರಿಗೆ ಪ್ರಶ್ನಿಸಿದಾಗ ಹೌದು ಮಣ್ಣು ಸಾಗಿಸಿದ್ದೇನೆ ಏನಿಗಾ ಪೆÇಲೀಸ್ ಕಂಪ್ಲೇಂಟ್ ಮಾಡ್ತೀರಾ ಅಂತೆಲ್ಲಾ ಮಾತನಾಡಿದ್ದು, ಸಂಭಂದ ಪಟ್ಟ ಅಧಿಕಾರಿಗಳು ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಾಂಶುಪಾಲರಾದ ಡಾಕ್ಟರ್ ಶಾಂತಲಾ ಬಿ. ಪಾಟೀಲ್ ಆಗ್ರಹಿಸಿದ್ದಾರೆ.
ನಂತರ ಕಾಲೇಜು ಭೂ ದಾನಿಗಳಾದ ಶಿವಶರಣಪ್ಪ ಕಮಲಾಪುರ್ ಮಾತನಾಡಿ ನಾವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಭೂ ದಾನ ಮಾಡಿದ್ದೆವೆ ಹೊರತು ಯಾರ್ ಯಾರೋ ಬಂದು ಮಣ್ಣು ಮಾರಿಕೊಳ್ಳಲು ಅಲ್ಲ ಗುತ್ತಿಗೆದಾರರು ಅಸಭ್ಯವಾಗಿ ಮಾತನಾಡುವುದು ನೋಡಿದರೆ ಇದರ ಹಿಂದೆ ರಾಜಕೀಯ ಕೈವಾಡ ಇದೆ ಎಂಬುವ ಅನುಮಾನ ಮೂಡುತ್ತಿದೆ ಎಂದರು. ಈ ಸಂಧರ್ಭದಲ್ಲಿ ನಿವೃತ್ತ ಶಿಕ್ಷಕರಾದ ಘುಡುಸಾಬ ಮಾಸ್ಟರ್, ರಾಜಕುಮಾರ ರಾಜಾಪುರ, ಭೀಮರಾಯ ಮಲಘಾಣ, ಬಲರಾಮ ವಲ್ಯಾಪುರೆ, ವಿಶ್ವನಾಥ್, ಉಪನ್ಯಾಸಕರಾದ ಶ್ರೀ ಮಾಲಿ ಪಾಟೀಲ್, ಚಿತ್ರಶೇಖರ್ ನಾಗೂರ್, ಶಿವಶರಣಪ್ಪ ಮೊತಕ್ಕಪಲ್ಲಿ ಉಪಸ್ಥಿತರಿದ್ದರು.