ರಾಣಿ ರುದ್ರಮ್ಮದೇವಿ ಪ್ರಶಸ್ತಿಗೆ ರಮಾದೇವಿ ಆಯ್ಕೆ

ಸಿಂಧನೂರು,ಫೆ.೨೪- ಇದೆ ತಿಂಗಳು ೨೬ ಭಾನುವಾರದಂದು ರಾಯಚೂರಿನಲ್ಲಿ ಜರುಗಲಿರುವ ಪ್ರಥಮ ಜಿಲ್ಲಾ ಮಹಿಳಾ ಕನ್ನಡ ಜಾನಪದ ಸಮ್ಮೇಳನದಲ್ಲಿ ತಾಲೂಕಿನ ವಿರುಪಾಪುರ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಹಾಗೂ ತಾಲೂಕ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷೆ ರಮಾದೇವಿ ಶಂಭೋಜಿ ಅವರನ್ನು ರಾಜ್ಯಮಟ್ಟದ ರಾಣಿ ರುದ್ರಮ್ಮದೇವಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆಯೆಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಶರಣಪ್ಪ ಗೋನಾಳ ತಿಳಿಸಿದ್ದಾರೆ.