ರಾಣಿ ಚೆನ್ನಮ್ಮಳ ಆದರ್ಶ ನಮಗೆಲ್ಲ ದಾರಿ ದೀಪ

ಲಕ್ಷ್ಮೇಶ್ವರ, ನ7- ಕನ್ನಡ ನಾಡಿ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ದ ಹೋರಾಡಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿದ ಪ್ರಥಮ ಮಹಿಳೆ ಎಂಬ ಕೀರ್ತಿ ರಾಣಿ ಚೆನ್ನಮ್ಮನಿಗೆ ಸಲ್ಲಬೇಕು ಎಂದು ಶಕುಂತಲಾ ಹೊರಟ್ಟಿ ಹೇಳಿದರು.
ಪಟ್ಟಣದ ವಿನಾಯಕ ನಗರದಲ್ಲಿನ ಪರಮೇಶ್ವರ ಬಾಳಿಕಾಯಿ ಅವರ ನಿವಾಸದಲ್ಲಿ ನಡೆದ ಕಿತ್ತೂರ ರಾಣಿ ಚೆನ್ನಮ್ಮಳ 242ನೇ ವಿಜಯೋತ್ಸವ ಆಚರಿಸಿ ಮಾತನಾಡಿದರು.
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ಬ್ರಿಟೀಷರ ದಬ್ಬಾಳಿಕೆಯನ್ನು ಖಂಡಿಸಿ ಅವರ ವಿರುದ್ದ ಹೋರಾಟ ಮಾಡಿದ ಪ್ರಮುಖ ಮಹಿಳೆಯರಲ್ಲಿ ರಾಣಿ ಚೆನ್ನಮ್ಮ ಪ್ರಮುಖಳಾಗಿದ್ದಾಳೆ. ರಾಣಿ ಚೆನ್ನಮ್ಮನ ಆದರ್ಶ ನಮಗೆಲ್ಲ ಮಾದರಿಯಾಗಿರಬೇಕು, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ಸಂದರ್ಭ ಬಂದಲ್ಲಿ ನಮ್ಮೆಲ್ಲ ಶಕ್ತಿಮೀರಿ ಎದ್ದು ನಿಲ್ಲುವುದು ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮಹಿಳಾ ವೇದಿಕೆಯ ತಾಲೂಕಾ ಅಧ್ಯಕ್ಷೆ ಲಲಿತಾ ಅವರು ಸಮಾರೋಪ ಭಾಷಣ ಮಾಡಿದರು. ಸಭೆಯಲ್ಲಿ ಲಲಿತಾ ಕೆರಿಮನಿ, ಪೂರ್ಣಿಮಾ ಬಳಿಗಾರ. ಹೇಮಾ ಬಾಳಿಕಾಯಿ, ಜಯಶ್ರೀ ಪಾಟೀಲ, ಲಕ್ಷ್ಮವ್ವ ಆಚಾರ್ಯ, ಸೋಮಕ್ಕ ಪಾಟೀಲ, ಸುಜಾತಾ ಬಾಳಿಕಾಯಿ, ಜ್ಯೋತಿ ಅರಳಿಕಟ್ಟಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.