ರಾಣಿತೋಟದಲ್ಲಿ ಭರತ್ ಪ್ರಚಾರ ಕೊಟ್ಟ ಮಾತು ತಪ್ಪುವುದಿಲ್ಲ ಕಾಂಗ್ರೆಸ್


(ಸಂಜೆವಾಣಿ ವಾರ್ತೆ)
ಬಳ್ಳಾರಿ ಮೇ 05 : ನಗರದ 10 ವಾರ್ಡಿನ ರಾಣಿತೋಟದಲ್ಲಿ ನಿನ್ನೆ ಸಂಜೆ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಅವರು. ಕೆಪಿಸಿಸಿ ಪ್ರಚಾರ ಸಮಿತಿಯ ಸಂಯೋಜಕರಾದ ಅಲ್ಲಂ ಪ್ರಶಾಂತ್ ಅವರೊಂದಿಗೆ ನಿನ್ನೆ ಸಂಜೆ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.
ಅವರೊಂದಿಗೆ  ನಗರ ಸಭೆ ಮಾಜಿ ಸದಸ್ಯ ತಿಮ್ಮಪ್ಪ ಯಾದವ್, ಮುಖಂಡರುಗಳಾದ ತೆಂಗಿನಕಾಯಿ ರಾಜಣ್ಣ, ಬಸವರಾಜ್, ವೈಸಿ,  ಮಡಿವಾಳಪ್ಪ ಮೊದಲಾದವರೊಂದಿಗೆ ಪ್ರಚಾರ ನಡೆಸಲಾಯ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅಲ್ಲಂ ಪ್ರಶಾಂತ್ ಅವರು ಕಾಂಗ್ರೆಸ್ ಗ್ಯಾರೆಂಟಿಗಳ ಬಗ್ಗೆ ವಿವರವಾಗಿ ತಿಳಿಸುತ್ತ. ಕಾಂಗ್ರೆಸ್ ಪಕ್ಷ  ಕೊಟ್ಟ ಮಾತನ್ನು ಎಂದು ತಪ್ಪುವುದಿಲ್ಲ. ಅದಕ್ಕಾಗಿ ನಿಮ್ಮ ದಿನ‌ನಿತ್ಯದ ಜೀವನಕ್ಕೆ ಸಹಕಾರಿಯಾಗಲಿದೆ ಕಾಂಗ್ರೆಸ್ ಆಡಳಿತ ಅದಕ್ಕಾಗಿ ಕಾಂಗ್ರೆಸ್ ಗೆ ಮತ ನೀಡಿ ಆಯ್ಕೆ ಮಾಡಿ ಎಂದರು.
ಅಭ್ಯರ್ಥಿ ಭರತ್ ರೆಡ್ಡಿ ಮಾತನಾಡಿ ನನಗೆ ಮತ ನೀಡಿ ಆಯ್ಕೆ ಮಾಡಿ, ಅದುವೇ ನಿಮ್ಮ ಆಸಿರ್ವಾದ ಸದಾ ನಿಮ್ಮ ಸೇವೆಗೆ ನಾನು ಸಿದ್ದ ಎಂದು ಮತಯಾಚಿಸಿದರು.‌ ನೆರೆದ ನೂರಾರು ಜನತೆ ಮತ ನೀಡುವ ಭರವಸೆ ನೀಡಿದರು.