ರಾಣಾನಿಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ

ಚಾಮರಾಜನಗರ,ಆ.03:- ಕಳೆದ 7 ವರ್ಷಗಳಿಂದ ತನ್ನ ವಿಶೇಷ ಚಾಕಚಕ್ಯತೆ ಮತ್ತುಗ್ರಹಿಸುವ ಶಕ್ತಿ ಯಿಂದ ಕಾಡುಗಳ್ಳರ ನಿದ್ರೆಕದ್ದಿದ್ದ ಸುಮಾರು 10 ವರ್ಷದಜರ್ಮನ್ ಶೆಫರ್ಡ್ ತಳಿಯ ಶ್ವಾನ ಸೋಮವಾರ ರಾತ್ರಿ ಅಸುನೀಗಿದ್ದು ರಾಣಾನಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ ಹೇಳಲಾಯಿತು.
ಅರಣ್ಯ ಇಲಾಖೆಯಲ್ಲಿ ಕರ್ನಾಟಕಕ್ಕೆ ಸೇರ್ಪ ಡೆಗೊಂಡ ಮೊದಲ ಶ್ವಾನಇದಾಗಿದ್ದು, ಇಲಾಖೆಯ ನೌಕರನಾಗಿಯೇ ಬಂಡೀಪುರದಲ್ಲಿ ಬೆಳೆದಿತ್ತು.
ಬಂಡೀಪುರ ರಾಣಾ’ನ ಸಾಧನೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಕಳ್ಳ ಬೇಟೆ, ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು, ವನ್ಯಜೀವಿ ಬೇಟೆಗಾರರನ್ನು ನಿಗ್ರಹಿಸಲು ಮತ್ತುಅರಣ್ಯ ಮೊಕದ್ದಮೆಗಳನ್ನು ಭೇದಿಸುವುದಕ್ಕಾಗಿ ನೇಮಕವಾಗಿತ್ತು. ‘ರಾಣಾ’ 28-12-2013 ರಂದು ಜನಿಸಿದ್ದು ಜರ್ಮನ್ ಶೆಫರ್ಡ್ ತಳಿಯಾಗಿದೆ. ‘ರಾಣಾ’ವು ಭೂಪಾಲ್‍ನ ವಿಶೇಷ ಸಶಸ್ತ್ರ ಪಡೆಗಳ 28ನೇ ಬೆಟಾಲಿಯನ್‍ಲ್ಲಿ ತರಬೇತಿಯ ಪಡೆದು ಬಂಡೀಪುರದಲ್ಲಿ ಕರ್ತವ್ಯಕ್ಕೆ ಹಾಜರಾಗಿತ್ತು. ಕರ್ತವ್ಯದ ಪ್ರಾರಂಭದಲ್ಲಿಯೇ ಎನ್.ಬೇಗೂರು ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ತೇಗದ ಮರಕಡಿದ ಮೂವರನ್ನು ಪತ್ತೆ ಹಚ್ಚುವಲ್ಲಿ ಸಹಾಯ ಮಾಡಿತ್ತು. ಬಳಿಕ ಓಂಕಾರ ವಲಯದ ವ್ಯಾಪ್ತಿಯಲ್ಲಿ ಚಿರತೆಗಳ ವಿಷ ಪ್ರಾಷನ ಪ್ರಕರಣ, ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಶ್ರೀರಂಗಪಟ್ಟಣದಲ್ಲಿ ಶ್ರೀಗಂಧ ಕಳ್ಳರ ಪತ್ತೆ ಹಚ್ಚುವಿಕೆ ಪ್ರಕರಣ ಭೇದಿಸಿತ್ತು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವಲ್ಲದೇ ರಾಜ್ಯದ ವಿವಿಧ ಅರಣ್ಯ ವಿಭಾಗಗಳ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಹುಲಿ, ಚಿರತೆಯಂತಹ ಪ್ರಾಣಿಗಳ ಸ್ಥಳಗಳನ್ನು ಗುರುತು ಮಾಡಿಕೊಟ್ಟು ಸೆರೆ ಹಿಡಿಯುವ ಕಾರ್ಯಾಚರಣೆಗಳಿಗೆ ಯಶಸ್ಸುತಂದುಕೊಟ್ಟಿತ್ತು ಈ ಶ್ವಾನ. ವಿಶೇಷವಾಗಿ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವಗುಡಲೂರಿನಲ್ಲಿ 8 ತಿಂಗಳುಗಳವರೆಗೆ ಉಪಟಳ ನೀಡುತ್ತಿದ್ದ ನರಭಕ್ಷಕ ಹುಲಿಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ರಾಣಾನ ಕೊಡುಗೆ ಅನನ್ಯ.
ರಾಣಾತನ್ನ ಏಳು ವರ್ಷಗಳ ಸೇವಾವಧಿಯಲ್ಲಿ 8 ಹುಲಿ ಸಂಬಂಧಿತ ಪ್ರಕರಣಗಳು, 45ಕ್ಕೂ ಹೆಚ್ಚು ಚಿರತೆ ಸಂಬಂಧಿತ ಪ್ರಕರಣಗಳು, ಹಲವಾರು ಮರಗಳ್ಳತನ ಪ್ರಕರಣಗಳು, ಉರುಳು ಪತ್ತೆ ಕಾರ್ಯಗಳಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವುದಲ್ಲದೇದೈನಂದಿನ ಅರಣ್ಯ ಮತ್ತು ವನ್ಯಪ್ರಾಣಿ ಸಂರಕ್ಷಣೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತನ್ನದೇ ಆದ ಛಾಪು ಮೂಡಿಸಿ ಅಭಿಮಾನಿ ವಲಯವನ್ನೇ ಸೃಷ್ಟಿಸಿಕೊಂಡಿತ್ತು.
ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ:
ಮೃತ ‘ರಾಣಾ’ನ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ನಿರ್ದೇಶಕರು, ಹುಲಿಯೋಜನೆ, ಬಂಡೀಪುರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಬಂಡೀಪುರ ಹಾಗೂ ಹೆಡಿಯಾಲ ಉಪವಿಭಾಗ, ರಕ್ಷಣಾ ಸಿಬ್ಬಂದಿ, ಜಿ.ಎಸ್.ಬೆಟ್ಟವಲಯ ಹಾಗೂ ವಿಶೇಷ ಹುಲಿ ಸಂರಕ್ಷಣಾ ದಳ ನೆರವೇರಿಸಿ, ಕಂಬನಿ ಮಿಡಿದಿದ್ದಾರೆ.