ರಾಠೋಡ್‍ರವರ ಸಾಧನೆ ಇತರರಿಗೆ ಮಾದರಿಯಾಗಲಿ:ದದ್ದಲ

ಸೈದಾಪುರ: ಮಾ.31:ಸಾರ್ವಜನಿಕರು ಜನಬಿಡದಿ ಸ್ಥಳಗಳಲ್ಲಿ ಉಗುಳುವುದರಿಂದ ಕೊರೊನಾ ವೈರಸ್ ಹರಡುವ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಿದ, ಇವರ ಈ ಸಾಧನೆ ಇತರರಿಗೆ ಮಾದರಿಯಾಗಲಿ ಎಂದು ಶಿಕ್ಷಣ ಪ್ರೇಮಿ, ಮಾಜಿ ಗ್ರಾ.ಪಂ. ಸದಸ್ಯ ಮಹಾದೇವಪ್ಪ ದದ್ದಲ ಅಭಿಪ್ರಾಯಪಟ್ಟರು.

ಪಟ್ಟಣದ ಪ್ರಜ್ಞಾ ಕೈಗಾರಿಕ ತರಬೇತಿ ಕೇಂದ್ರದಲ್ಲಿ ಇತ್ತಿಚಿಗೆ ಗುರಗಾವ್ ಹೆಲ್ತ್ ಫೌಂಡೇಶನ್ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ಕೊವಿಡ19 ಸಂದರ್ಭದಲ್ಲಿ ನಡೆದ ಸ್ಪೀಟ್ ಫ್ರೀ ಇಂಡಿಯಾ ಮೂಮೆಂಟ ಚಳುವಳಿಯಲ್ಲಿ ಭಾಗವಹಿಸಿ ಹೆಚ್ಚಿನ ಜಾಗೃತಿ ಮೂಡಿಸಿರುವುದಕ್ಕೆ ನೀಡಲಾದ ಲೀಡರ್ ಶಿಫ್ ಪ್ರಶಸ್ತಿ ಪ್ರಮಾಣ ಪತ್ರ ಮತ್ತು ಕಂಚಿನ ಪದಕ ಪಡೆದ ಕಿಶಾನ್.ಬಿ.ರಾಠೋಡ ಅವರನ್ನು ಆತ್ಮೀಯ ಗೆಳೆಯರ ಬಳಗದ ವತಿಯಿಂದ ಸನ್ಮಾಸಿ ಮಾತನಾಡಿದರು. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾರ್ವಜನಿಕರು ಎಲ್ಲಂದರಲ್ಲಿ ಉಗುಳುವುದರಿಂದ ವೈರಸ್ ಸುಲಭವಾಗಿ ಮತ್ತು ಬೇಗ ಹರಡುತ್ತದೆ ಎಂದು ತಜ್ಞರು ನಿರ್ಧರಿಸಿದರು. ಗುಟುಕಾ, ಚುಯಿಂಗ್‍ಗಮ್, ತಂಬಾಕು ಇತ್ಯಾದಿಗಳನ್ನು ತಿಂದು ಉಗುಳುಬಾರದು ಎಂಬುದನ್ನು ಜನಸಾಮಾನ್ಯರಿಗೆ ತಿಳಿಸಲು ಈ ಚಳುವಳಿಯನ್ನು ಪ್ರಧಾನಿ ಮೋದಿಯವರು ಹಮ್ಮಿಕೊಂಡು ಚಾಲನೆ ನೀಡಿದರು. ಇದಕ್ಕೆ ಬಾಲಾಜಿ ಪದವಿ ಮಹಾವಿದ್ಯಾಲಯ ಸಂಕಷ್ಟ ಸಮಯದಲ್ಲಿ ಸೇವಾ ಮನೋಭಾವನೆಯೊಂದಿಗೆ ಕಾರ್ಯ ನಿರ್ವಹಿಸಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಗಡಿ ಗ್ರಾಮೀಣ ಭಾಗದ ಮಹತ್ವ ಹೆಚ್ಚಾದಂತಾಗಿದೆ ಎಂದು ಹೇಳಿದರು.

ಶ್ರೀ ಬಾಲಾಜಿ ಪದವಿ ಮಾಹಾವಿದ್ಯಾಲಯದ ಪ್ರಾಂಶುಪಾಲ ಮತ್ತು ಪ್ರಶಸ್ತಿಗೆ ಭಾಜಿನರಾದ ಕಿಶಾನ್.ಬಿ.ರಾಠೋಡ ಮಾತನಾಡಿ, ನನಗೆ ಇಂತಹ ಪ್ರಶಸ್ತಿ ಒಲಿದು ಬಂದಿರುವುದು ನಿಜಕ್ಕೂ ಸಂತಸ ತಂದಿದೆ. ಅದರಲ್ಲಿಯೂ ನಮ್ಮ ಆತ್ಮೀಯ ಗೆಳೆಯರೆಲ್ಲರು ಸಹ ನನ್ನ ಈ ಜನ ಜಾಗೃತಿ ಚಳುವಳಿಗೆ ಪ್ರೋತ್ಸಾಹವನ್ನು ನೀಡಿದರು. ನಾನು ಅವರೆಲ್ಲರಿಗೂ ಅಭಿನಂದನೆಗಳು ತಿಳಿಸುತ್ತೇನೆ ಎಂದರು. ಪ್ರಜ್ಞಾ ಕೈಗಾರಿಕ ತರಬೇತಿ ಸಂಸ್ಥೆಯ ಮುಖ್ಯಸ್ಥ ಮಲ್ಲಿಕಾರ್ಜುನ ಅಲ್ಲಿಪುರ, ಡಿ.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಗಿಮಠ, ಭೀಮಣ್ಣ ಮಡಿವಾಳ, ಶಂಕರರೆಡ್ಡಿಗೌಡ ಬಿಳ್ಹಾರ, ಸಿದ್ದು ಪೂಜಾರಿ ಬದ್ದೇಪಲ್ಲಿ, ರಾಚೋಟಿ ಕಣೇಕಲ್ ಸೇರಿದಂತೆ ಇತರರಿದ್ದರು.