
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.5 :- ರಾಜ ವೈಭೋಗವನ್ನು ತ್ಯಜಿಸಿದ ವರ್ಧಮಾನ ಜೈನಧರ್ಮದ ತೀರ್ಥಂಕರ ಮಹಾವೀರರಾದರು ಅಲ್ಲದೆ ದಯೇ ಕರುಣೆಯನ್ನು ಪ್ರತಿಪಾದಿಸಿ ಜನರಿಗೆ ಮಾನವೀಯ ಮೌಲ್ಯಗಳನ್ನು ಗುರುತಿಸಿದರು ಇವರ ಆದರ್ಶ ನಮಗೆಲ್ಲಾ ಮಾರ್ಗದರ್ಶನ ಎಂದು ಕೂಡ್ಲಿಗಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ ಶಿವರಾಜ ತಿಳಿಸಿದರು.
ಅವರು ಮಂಗಳವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಹಾವೀರರ ಭಾವಚಿತ್ರಕ್ಕೆ ಅಧಿಕಾರಿಗಳು ಪುಷ್ಪನಮನ ಸಲ್ಲಿಸಿ ಮಾತನಾಡುತ್ತ ರಾಜ ಮನೆತನದಲ್ಲಿ ಜನಿಸಿದ್ದ ವರ್ಧಮಾನ ಅವರು ರಾಜ ವೈಭೋಗವನ್ನು ತ್ಯಜಿಸಿ ಜೈನಧರ್ಮದ 24 ನೇ ತೀರ್ಥಂಕರಾದ ಮಹಾವೀರರಾಗಿದ್ದರು. ತಪಸ್ವಿ ಮಹಾವೀರರು ಜೈನಧರ್ಮದ ಕೊನೆಯ ತೀರ್ಥಂಕರರಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಎಫ್.ಮಹ್ಮದ್ ಗೌಸ್, ಪ್ರಥಮದರ್ಜೆ ಸಹಾಯಕಾರ ಶ್ರೀದೇವಿ, ಈಶಪ್ಪ, ದ್ವಿತೀಯದರ್ಜೆ ಸಹಾಯಕಿ ವಿದ್ಯಾ ಚೌವ್ಹಾಣ್, ಗ್ರಾಮ ಲೆಕ್ಕಿಗ ನವೀನ್ ಕುಮಾರ್, ನಿವೃತ್ತ ಶಿಕ್ಷಕ ನಂದಿ ಬಸವರಾಜ್, ಕಂದಾಯ ಇಲಾಖೆ ಸಿಬ್ಬಂದಿ ಪ್ರಸನ್ನಕುಮಾರ್, ಎಸ್.ಎಂ.ಇಮ್ರಾನ್ ಇತರರಿದ್ದರು.