
ಹೊಸಬರ “ರಾಜ ರಾಣಿ” ಚಿತ್ರಕ್ಕೆ ನಟ ಲೂಸ್ ಮಾದ ಯೋಗಿ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಆಂಜನೇಯನನ್ನು ಕುರಿತಾದ ಹಾಡಿನಲ್ಲಿ ನಾಯಕ ರಣಧೀರ್ ಜೊತೆ ಹೆಜ್ಜೆ ಹಾಕಿದ್ದಾರೆ.
ಪ್ರಭು ನೃತ್ಯ ಸಂಯೋಜನೆಯಲ್ಲಿ ಮೂಡಿ ಬಂದ “’ತಳ ತಳ, ಎಲ್ಲಾ ಕಡೆ ನಿನ್ನ ಹಾಡೇ, ತುಂಬೋಗಿರೆ ನಾಡು ನಾಡೇ, ಏನಿಟ್ಟರೇ ನಿನ್ನ ಕಡೆ, ನಿತ್ಯಾ ಜನ ನಿನ್ನಾ ಎಡೆ’ ಹೆಜ್ಜೆ ಹಾಕಿದ್ದಾರೆ.
ಚಿತ್ರೀಕರಣ ಸ್ಥಳಕ್ಕೆ ಪತ್ರಕರ್ತರನ್ನು ಆಹ್ವಾನಿಸಿದ್ದ ಚಿತ್ರತಂಡ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿತು, ನಟ,ನಿರ್ದೇಶಕ ರಣಧೀರ್ ಮಾತನಾಡಿ ಮೈಸೂರಿನಲ್ಲಿ ನಡೆದ ಸತ್ಯ ಘಟನೆ ಆಧರಿಸಿ ಚಿತ್ರ.ಕಾಣೆಯಾದ ಹುಡುಗಿಯ ಸುತ್ತ ಚಿತ್ರ ಸಾಗುತ್ತದೆ. ಸೆಸ್ಪೆನ್ಸ್ ಹಾಗೂ ಪ್ರೀತಿ ಒಳಗೊಂಡ ಚಿತ್ರ. ಕಾಣೆಯಾದವಳು ಯಾರಿಗೆ ಒಲಿಯುತ್ತಾಳೆ ಎನ್ನುವ ನಿಗೂಢ ಅಂಶಗಳು ಇರಲಿದೆ. ಬೆಂಗಳೂರು, ಮಾಲೂರು, ಕೋಲಾರ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ ಕಡೆಗಳಲ್ಲಿ 56 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ ಎಂದರು.
ರಿತನ್ಯಶೆಟ್ಟಿ ನಾಯಕಿ. ಜೀವನ್, ಗಿರಿಜಾಲೋಕೇಶ್, ಶೋಭರಾಜ್, ಬಿರಾದಾರ್, ಕಿಲ್ಲರ್‍ವೆಂಕಟೇಶ್, ಗಿರೀಶ್‍ಜತ್ತಿ, ಮಂಜುಳಾನಾಯ್ಡು, ಚಂದ್ರಪ್ರಭ ಮುಂತಾದವರು ನಟಿಸಿದ್ದಾರೆ ಎಂದು ಹೇಳಿದರು.
ಲೂಸ್ ಮಾದ ಯೋಗಿ ಮಾತನಾಡಿ ಹಾಡಿನಲ್ಲಿ ಬರುವ ಸನ್ನಿವೇಶ, ಎಲ್ಲದಕ್ಕಿಂತ ಹೆಚ್ಚಾಗಿ ಒಬ್ಬರಿಗೊಬ್ಬರು ಆಗಬೇಕು. ಆಗ ತಾನೆ ಉದ್ಯಮ ಬೆಳೆಯುತ್ತದೆ. ನೃತ್ಯ ನಿರ್ದೇಶಕ ಗೆಳೆಯ ಪ್ರಭು, ಚಿತ್ರರಂಗಕ್ಕೆ ಬಂದಾಗಿನಿಂದಲೂ ಪರಿಚಯ. ಹಾಗಾಗಿ ಹಾಡಿನಲ್ಲಿ ನಟಿಸಿದ್ದೇನೆ ಎಂದರು.
ಹಿರಿಯ ಕಲಾವಿದ ಪುಂಗ ಖಳನ ಪಾತ್ರ ನಿಭಾಯಿಸುತ್ತಿರುವೆ ಎಂದರೆ ರಣಧೀರ್ ಸ್ನೇಹಿತ ಹೀಗಾಗಿ ಬಂಡವಾಳ ಹಾಕಿದ್ದೇನೆ ಎಂದರು ನಿರ್ಮಾಪಕ ನೇತ್ರಾವತಿ ಮಲ್ಲೇಶ್.ಚಿತ್ರಕ್ಕೆ ವಿಜಯ್‍ಬಳ್ಳಾರಿ ,ಮಧುಸುದನ್, ಲೀಲಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.