ರಾಜ ರಾಜೇಶ್ವರಿ ವಿದ್ಯಾಸಂಸ್ಥೆಯ ಗೌರಿಕಾಗೆ 96% ಫಲಿತಾಂಶ 

ಮಲೇಬೆನ್ನೂರು.ಮೇ.೧೧; ಪಟ್ಟಣದ ಜಿಗಳಿ ರಸ್ತೆಯಲ್ಲಿರುವ ಒಡೆಯರ ಬಸವಾಪುರದ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್ ನ ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆ ಗೆ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ದೊರಕಿದ್ದು ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳು ಸಹ ಶಾಲೆಗೆ ಗುಣಮಟ್ಟದ ಫಲಿತಾಂಶ ತಂದುಕೊಟ್ಟಿದ್ದಾರೆ ಎಂದು ಸಂಸ್ಥೆಯ ಪ್ರಾಚಾರ್ಯರಾದ ಶ್ರೀಮತಿ ಸುಜಾತ ಜಿ ಓ ತಿಳಿಸಿದ್ದಾರೆ. ಪರೀಕ್ಷೆಗೆ ಕುಳಿತ 24 ವಿದ್ಯಾರ್ಥಿಗಳಲ್ಲಿ ಆರು ಡಿಸ್ಟಿಂಕ್ಷನ್ ಹಾಗೂ 14 ಪ್ರಥಮ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ.600 ಅಂಕಗಳೊಂದಿಗೆ ಶೇ. 96 % ಫಲಿತಾಂಶ ಪಡೆದಿರುವ ಗೌರಿಕಾ ಜಿ ಎಸ್ ಎಂಬ ವಿದ್ಯಾರ್ಥಿನಿ ಶಾಲೆಯ ಟಾಪರ್ ಆಗಿದ್ದಾಳೆ. ರಮ್ಯಾ ಎಸ್ – ಶೇ. 95.04, ವರ್ಷಾ ಚೌಧರಿ – ಶೇ .93, ಭುವನ ಓ ಜಿ – ಶೇ. 88.48, ಅನುಷಾ ಜಿ ಎಂ ಹಾಗೂ ಅಭಿರಾಮ್ ಶೇ. 85 ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡದಲ್ಲಿ ಗೌರಿಕಾ, ವರ್ಷಾ ಚೌಧರಿ ಹಾಗೂ ಅನುಷಾ 125 ಕ್ಕೆ 125, ಆಂಗ್ಲ ಭಾಷೆಯಲ್ಲಿ ರಮ್ಯಾ ಹಾಗೂ ಮಮತಾ ಚೌಧರಿ 100 ಕ್ಕೆ 100, ಹಿಂದಿ ವಿಷಯದಲ್ಲಿ ಗೌರಿಕಾ, ವರ್ಷಾ ಚೌಧರಿ, ಸಾನಿಯಾ ಭಾನು ಹಾಗೂ ರಮ್ಯಾ 100 ಕ್ಕೆ 100 ಅಂಕ ಪಡೆದಿದ್ದಾರೆ.ಉತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸಿರುವ ಸಂಸ್ಥೆಯ ಕಾರ್ಯದರ್ಶಿ ಶಿವಾನಂದಪ್ಪ ಬಿ ಜಿ , ಶ್ರೀಮತಿ ಸುಜಾತ ಜಿ ಓ , ಮುಖ್ಯೋಪಾಧ್ಯಾಯ ಶಶಿಧರ್ ಎಸ್ , ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಪೋಷಕರು ಮುಂದಿನ ಶೈಕ್ಷಣಿಕ ಭವಿಷ್ಯವೂ ಉಜ್ವಲವಾಗಲಿ ಎಂದು ಶುಭ ಕೋರಿದ್ದಾರೆ.