ರಾಜ ನಿವಾಸದಲ್ಲಿ ಸಸ್ಪೆನ್ಸ್

ಸಸ್ಪೆನ್ಸ್, ಥ್ರಿಲ್ಲರ್ , ಹಾಗು ಕಮರ್ಷಿಯಲ್ ಕಥಾಹಂದರ ಹೊಂದಿರುವ “ರಾಜ‌ನಿವಾಸ” ಚಿತ್ರ
ಸದ್ದುಗದ್ದಲವಿಲ್ಲದೆ ಶೇ.80 ರಷ್ಟು ಚಿತ್ರೀಕರಣ ಪೂರ್ಣ ಗೊಳಿಸಿದೆ.
ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಆಂಜನಪ್ಪ‌ ಬಣ್ಣದ ಲೋಕದಲ್ಲಿ ನಿರ್ಮಾಪಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ರಾಜ‌ನಿವಾಸಕ್ಕೆ ರಾಘವ್ ನಾಯಕ್ ನಾಯಕ.ಈ ಚಿತ್ರದ ಮೂಲಕ ಮತ್ತೆ ಕೃತಿಕಾ ರವೀಂದ್ರ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಕಳೆದವಾರ ಚಿತ್ರೀಕರಣ ಸೆಟ್ ಗೆ ಮಾಧ್ಯಮದವನ್ನು ತಂಡ ಆಹ್ವಾನಿಸಿತ್ತು. ಅಲ್ಲಿ‌ವೀರಶೈವ ಲಿಂಗಾಯತ ವೇದಿಕೆಯ ಅಧ್ಯಕ್ಷ ಪ್ರಶಾಂತ್ ಕಲ್ಲೂರ, ನಿರ್ಮಾಪಕ ಆಂಜನಪ್ಪ ಪುತ್ರ ಅದ್ವಿಕ್ ಮೌರ್ಯ ಸೇರಿ ಇಡೀ ತಂಡ, ರಾಜನಿವಾಸ ಚಿತ್ರದ ಶೀರ್ಷಿಕೆ ಪೋಸ್ಟರ್ ಅನಾವರಣಗೊಳಿಸಿತು.
ಈ ವೇಳೆ ಮಾತಿಗಿಳಿದ ನಿರ್ದೇಶಕ ಮಿಥುನ್ ಸುವರ್ಣ,ಕಮರ್ಷಿಯಲ್​ ರೀತಿಯ ಅಂಶಗಳೂ ಸಿನಿಮಾದಲ್ಲಿ ಸ್ಥಾನ ಪಡೆದಿವೆ’ ಎಂದು ಚಿತ್ರದ ಎಳೆಯನ್ನು ಬಿಚ್ಚಿಡದೇ ತೆರೆಮೇಲೆಯೇ ನೋಡಿ ಎನ್ನುವ ಕುತೂಹಲ ಮೂಡಿಸಿದರು‌
ಚಿತ್ರದಲ್ಲಿ ಸಾಹಸ ದೃಶ್ಯವೊಂದರ ಚಿತ್ರೀಕರಣಕ್ಕೆ ಅದ್ದೂರಿ ವೆಚ್ಚದಲ್ಲಿ ಸೆಟ್​ ನಿರ್ಮಿಸಿದ್ದೇವೆ. ಚಿತ್ರದಲ್ಲಿ ಒಟ್ಟು ಮೂರು ಸಾಹಸ ದೃಶ್ಯಗಳಿವೆ ಎಂದರು.
ನಿರ್ಮಾಪಕ ಆಂಜನಪ್ಪ ಮಾತನಾಡಿ, ‘ಕಳೆದ ಒಂದೂವರೆ ವರ್ಷದ ಹಿಂದೆಯೇ ಸಿನಿಮಾ ಮಾಡಬೇಕು ಎನ್ನುವ ಆಸೆ ಇತ್ತು. ಇದೀಗ ರಾಜ ನಿವಾಸ ಚಿತ್ರದ ಮೂಲಕ ಈಡೇರುತ್ತಿದೆ. ಫೆಬ್ರವರಿಯಲ್ಲಿ ಚಿತ್ರಮಂದಿರಕ್ಕೆ ಬರಲಿದ್ದೇವೆ ಎಂದರು
​ನಾಯಕ ರಾಘವ್, ಚಿತ್ರ ‘ಕಥೆಯ ಒಂದೆಳೆ ಕೇಳಿಯೇ ಇಷ್ಟ ಆಯ್ತು. ಬೇರೆನೂ ಯೋಚಿಸದೇ ಈ ಸಿನಿಮಾ ಒಪ್ಪಿಕೊಂಡು ಮುಗಿಸುತ್ತಿದ್ದೇನೆ. ಇಲ್ಲಿ ಪ್ರಾಚ್ಯವಸ್ತು ವಿಭಾಗದಲ್ಲಿ ಕೆಲಸಮಾಡುವವನಾಗಿ ಕಾಣಿಸಿಕೊಂಡಿದ್ದೇನೆ. ಮಿಸ್ಟ್ರಿ ಸುತ್ತ ಇಡೀ ಸಿನಿಮಾ ಸುತ್ತಲಿದೆ ಎಂದರು.
ನಟಿ ಕೃತಿಕಾ ರವೀಂದ್ರ. ನಾಯಕನ ಪತ್ನಿ. ನಿರ್ದೇಶಕರು ನೀಡಿದ ಪಾತ್ರಕ್ಕೆ ಜೀವ ತುಂಬಿದ್ದೇನೆ. ಈವರೆಗೂ ಮಾಡಿದ ಪಾತ್ರಕ್ಕಿಂತ ತುಂಬ ವಿಭಿನ್ನವಾದ ಪಾತ್ರ ಸಿಕ್ಕಿದೆ ಎಂದು ಹೇಳಿಕೊಂಡರು
ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ನಟಿಸಲಿದ್ದು, ಬಲರಾಜ್ವಾಡಿ, ಅರ್ಜುನ್​ ಸೇರಿ ಇನ್ನು ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ.
ಲೋಕೇಶ್​ ಎನ್ ಗೌಡ ಸಹ ನಿರ್ಮಾಪಕರಾಗಿದ್ದಾರೆ. ರಮೇಶ್​ ರಾಜ್ ಛಾಯಾಗ್ರಹಣವಿದೆ.