ರಾಜ ಕಾಲುವೆ ಹೂಳು ತೆರವು

ಬಳ್ಳಾರಿ, ಜೂ.08: ನಗರದ ಸತ್ಯನಾರಾಯಣ ಪೇಟೆಯಲ್ಲಿ ಹಾದು ಹೋಗಿರುವ ರಾಜ ಕಾಲುವೆಯಲ್ಲಿನ ಹೂಳನ್ನು ಪಾಲಿಕೆಯಿಂದ ತೆರವುಗೊಳಿಸುವ ಕಾರ್ಯ ಇಂದು ನಡೆಯಿತು.
ಇತ್ತೀಚೆಗೆ ಬಿದ್ದ ಮಳೆ ಸಂದರ್ಭದಲ್ಲಿ ಕಾಲುವೆಯಲ್ಲಿ ಹೂಳು ತುಂಬಿದ್ದರಿಂದ ಕಾಲುವೆ ತುಂಬಿ ನೀರು ಸುತ್ತ ಮುತ್ತಲಿನ ಮನೆಗಳಿಗೆ ನುಗ್ಗಿತ್ತು. ಈ ಬಗ್ಗೆ ಜನತೆ ದೂರು ನೀಡಿದ್ದರಿಂದ ಪಾಲಿಕೆ ಸಿಬ್ಬಂದಿ ಈ ಕಾರ್ಯ ಕೈಗೊಂಡಿತು.
ಸ್ಥಳಕ್ಕೆ ಆಗಮಿಸಿದ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ, ನೂತನ ಕಾರ್ಪೊರೇಟರ್ ಕೆ.ಎಸ್.ಅಶೋಕ್ ಮೊದಲಾದವರು ಪರಿಶೀಲನೆ ಮಾಡಿ ಜನರಿಗೆ ತೊಂದರೆ ಆಗದಂತೆ ಕ್ರಮಕ್ಕೆ ಸೂಚಿಸಿದರು.
ನಂತರ ಗಾಂಧಿನಗರ ಬೂಸ್ಟರ್ ಕಛೇರಿಯಲ್ಲಿ ಶಾಸಕರು ನಗರದ ಹಲವು ತಗ್ಗುಪ್ರದೇಶಗಳಲ್ಲಿ ನೀರು ನಿಂತು ಮಲೀನತೆ ಹೆಚ್ಚಾಗುತ್ತಿದೆ. ಅದನ್ನು ತೆರವುಗೊಳಿಸುವ ಕಾರ್ಯ ನಡೆಯಬೇಕೆಂದು ಸಂಬಂಧಿಸಿದ ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿಗೆ ಶಾಸಕರು ಸೂಚಿಸಿದರು. ಪಾಲಿಕೆ ಸದಸ್ಯ ಮಲ್ಲನಗೌಡ ಮೊದಲಾದವರು ಇದ್ದರು.