ರಾಜ್ ಕೋಟ್ ಗೇಮಿಂಗ್ ಜೋನ್ ನಲ್ಲಿ ಭೀಕರ ಅಗ್ನಿದುರಂತ:24 ಮಂದಿ ಸಜೀವ ದಹನ; ಮಾಲೀಕನ ಬಂಧನ ಮ್ಯಾನೇಜರ್ ಗೆ ಶೋಧ

ರಾಜಕೋಟ್: ಗುಜರಾತ್ ನ ರಾಜ್ ಕೋಟ್ ನಲ್ಲಿರುವ ಗೇಮ್ ಜೋನ್ ನಲ್ಲಿ ಸಂಭವುಸಿದ ಭೀಕರ ಅಗ್ನ ಅವಘಡದಲ್ಲಿ 24 ಮಂದಿ ಸಜೀವ ದಹನಗೊಂಡಿರುವ ದಾರುಣ ಘಟನೆ ಸಂಭವಿಸಿದೆ.
ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.ಬೆಂಕಿಯ ಕೆನ್ನಾಲಿಗೆಗೆ ಗೇಮ್ ಜೋನ್ ಸುಟ್ಟು ಕರಕಲಾಗಿದೆ.
ಸುದ್ದಿ ತಿಳಿದ ತಕ್ಷಣ ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಬೆಂಕಿಯನ್ನು ನಂದಿಸಲು ಸಾಕಷ್ಟು ಕಸರತ್ತು ನಡೆಸಬೇಕಾಯಿತು.
ಶನಿವಾರ ಸಂಜೆ ಟಿಆರ್ ಪಿ ಗೇಮಿಂಗ್ ವಲಯದಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಪ್ರದೇಶಕ್ಕೆ ಆವರಿಸಿ ಧಗಧಗನೆ ಹೊತ್ತಿ ಉರಿಯಿತು. ಈ ಕುರಿತು ರಾಜ್ ಕೋಟ್ ನ ಪೊಲೀಸ್ ಆಯಕ್ತ ಭಾರ್ಗವ ಅಗ್ನಿ ಅವಘಡದ ಬಗ್ಗೆ ವಿವರ ನೀಡಿ, ಇದುವರೆಗೆ 24 ಮೃತದೇಹಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಪರಿಹಾರ ಕಾರ್ಯ ನಡೆಯುತ್ತಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಬೆಂಕಿ ಎಷ್ಟು ತೀವ್ರತೆ ಎಷ್ಟಿತ್ರು ಎಂದರೆ ಅದರ ಹೊಗೆ 3 ಕಿಲೋಮೀಟರ್ ದೂರದಿಂದ ಗೋಚರಿಸುತ್ತಿತ್ತು.‌ ಗೇಮಿಂಗ್ ವಲಯದಲ್ಲಿ ಸಿಕ್ಕಿಹಾಕೊಂಡವರ ಚೀರಾಟ, ಆಕ್ರಂಧನ ಹೇಳತೀರದಾಗಿತ್ತು. ಕೆಲವರು‌ ಉಸಿರುಗಟ್ಟಿ ಸಾವನ್ನಪ್ಪಿದ್ದಾರಡ.
ಆದರೆ, ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಟ್ಟಡ ಕುಸಿದಿರುವುದರಿಂದ ಪರಿಹಾರ ಕಾರ್ಯದಲ್ಲಿ ತೊಂದರೆಯಾಗುತ್ತಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಕಾರ್ಯ ಚುರುಕು

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ತಲ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಮತ್ತು ಆಡಳಿತಕ್ಕೆ ಸೂಚನೆ ನೀಡಿದ್ದಾರೆ.
ಈ‌ ಕುರಿತು ಸಾಮಾಜಿಕ‌ ಜಾಲತಾಣ‌ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಗೇಮ್ ಝೋನ್‌ನಲ್ಲಿ ಬೆಂಕಿಯ ಘಟನೆಯಲ್ಲಿ, ತಕ್ಷಣದ ರಕ್ಷಣಾ ಮತ್ತು ಪರಿಹಾರ ಕಾರ್ಯಕ್ಕಾಗಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಆಡಳಿತಕ್ಕೆ ಸೂಚನೆಗಳನ್ನು ನೀಡಲಾಗಿದೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ.

ಮಾಲೀಕನ ಬಂಧನ
ಗೇಮ್ ಝೋನ್ ಮಾಲೀಕ ಯುವರಾಜ್ ಸಿಂಗ್ ಸೋಲಂಕಿ ಅವರನ್ನು ರಾಜ್‌ಕೋಟ್ ಪೊಲೀಸರು ಬಂಧಿಸಿದ್ದಾರೆ. ಗೇಮ್ ಝೋನ್‌ನ ವ್ಯವಸ್ಥಾಪಕನಿಗಾಗಿ ಪೊಲೀಸರು ಶೋಧ‌ ಕಾರ್ಯಕೈಗೊಂಡಿದ್ದಾರೆ.

ಈ ಆಟದ ವಲಯದ ಒಂದು ಭಾಗದಲ್ಲಿ ನವೀಕರಣ ಕಾರ್ಯ ನಡೆಯುತ್ತಿತ್ತು . ಈ ವೇಳೆ ಎರಡು ದಿನಗಳ ಹಿಂದೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಗೇಮ್ ಝೋನ್ ಬಂದ್ ಮಾಡಲಾಗಿತ್ತು. ಈ ಘಟನೆ‌ ಸಂಭವಿಸಿ,
ಒಂದು ದಿನದ ನಂತರ ಆಟದ ವಲಯವನ್ನು ಪುನಃ ತೆರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಅವಘಡ ಹೇಗೆ ಸಂಭವಿಸಿದೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ತನಿಖೆಯಿಂದಷ್ಟೇ ತಿಳಿಯಬೇಕಾಗಿದೆ. ಈ ದುರಂತ ಸಂಭವಿಸಿದ ಬೆನ್ನಲ್ಲೇ ಎಲ್ಲ ಗೇಮ್ ಜೋನ್ ಗಳನ್ನು ಬಂದ್ ಮಾಡಲಾಗಿದೆ.