ರಾಜ್​ ಕಚೋರಿ

ಬೇಕಾಗುವ ಸಾಮಾಗ್ರಿಗಳು
ಕಡಲೆ ಹಿಟ್ಟು,
ಆಮ್ ಚೂರ್​ ಪುಡಿ​,
ದನಿಯಾ ಪುಡಿ,
ಸೋಂಪು,
ಜೀರಿಗೆ ಪುಡಿ,
ಖಾರದ ಪುಡಿ,
ಉಪ್ಪು,
ಅರಿಶಿಣ,
ಕೊತ್ತಂಬರಿ ಕಾಳು,
ಗರಂ ಮಸಾಲಾ, ಇಂಗು,
ಹೆಸರು ಬೇಳೆ,
ಗೋಧಿ ಹಿಟ್ಟು,
ಮೈದಾ ಹಿಟ್ಟು.
ಪುದೀನಾ ಚಟ್ನಿ,
ಹುಳಿ ಸಿಹಿ ಚಟ್ನಿ,
ದಾಳಿಂಬೆ, ಚ್ಯಾಟ್​ ಮಸಾಲಾ,
ಆಲೂಗಡ್ಡೆ, ಹಸಿ ಮೆಣಸಿನಕಾಯಿ,
ಕೊತ್ತಂಬರಿ ಸೊಪ್ಪು,
ಬಿಟ್​ರೂಟ್​, ಮೊಸರು.

ರಾಜ್​ ಕಚೋರಿ ಮಾಡುವ ವಿಧಾನ
ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಸೋಂಪು, ಕೊತ್ತಂಬರಿ ಕಾಳು, ಜೀರಿಗೆ ಪುಡಿ, ದನಿಯಾ ಪುಡಿ, ಆಮ್ ಚೂರ್​ ಪುಡಿ​, ಗರಂ ಮಸಾಲಾ, ಖಾರದ ಪುಡಿ, ಅರಿಶಿಣ, ಇಂಗು, ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿ, ರುಬ್ಬಿದ ಹೆಸರು ಬೇಳೆ ಹಾಕಬೇಕು. ನಂತರ ಉಪ್ಪು ಹಾಕಿ ತೆಗೆದಿಟ್ಟುಕೊಳ್ಳಬೇಕು.

ಬಳಿಕ ಗೋಧಿ ಹಿಟ್ಟು, ಮೈದಾ ಹಿಟ್ಟು ಹಾಕಿ ಕಲಸಿ ಸಣ್ಣ ಉಂಡೆ ಮಾಡಿ ಅದರ ಮಧ್ಯದಲ್ಲಿ ತಯಾರಿಸಿಕೊಂಡ ಮಿಶ್ರಣ ಹಾಕಿ, ಎಣ್ಣೆಯಲ್ಲಿ ಕರಿಯಬೇಕು. ಬಳಿಕ ಕಚೋರಿಯನ್ನು ಮಧ್ಯ ಒಡೆದು ಅದರಲ್ಲಿ ಪುದೀನಾ ಚಟ್ನಿ, ಆಲೂಗಡ್ಡೆ, ಹುಳಿ ಸಿಹಿ ಚಟ್ನಿ, ದಾಳಿಂಬೆ, ಚ್ಯಾಟ್​ ಮಸಾಲಾ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಬಿಟ್​ರೂಟ್​, ಮೊಸರು ಹಾಕಬೇಕು. ಈಗ ರುಚಿಕರವಾದ ರಾಜ್​ ಕಚೋರಿ ಸವಿಯಲು ಸಿದ್ಧ.