
(ಸಂಜೆವಾಣಿ ವಾರ್ತೆ)
ಬಳ್ಳಾರಿ: ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 51800-102800ರೂ. ವೇತನ ಶ್ರೇಣಿ ನಿಗದಿಗೊಳಿಸುವಂತೆ ಹಾಗೂ ಮುಖ್ಯ ಗುರುಗಳಿಗೆ ಪ್ರತ್ಯೇಕ ವೇತನ
ಶ್ರೇಣಿ ನಿಗದಿಗೊಳಿಸಲು 153000 ಜನ ಪ್ರಾಥಮಿಕ ಶಾಲಾ ಶಿಕ್ಷಕರ ಪರವಾಗಿ ರಾಜ್ಯ ವೇತನ ಆಯೋಗಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಸಭೆ ನಡೆಸಿ.
7ನೇ ವೇತನ ಆಯೋಗದಿಂದ ನಿಗದಿಗೊಳಿಸಿದ ಪ್ರಶ್ನಾವಳಿಗಳಿಗೆ ಶಿಕ್ಷಕರ ಕಾರ್ಯಭಾರ, ಜವಾಬ್ದಾರಿ ಕೆಲಸದ ಒತ್ತಡ ಹಾಗೂ ಅವರ ವಿದ್ಯಾರ್ಹತೆ, ಶ್ರಮ ಇವೆಲ್ಲವುಗಳ ಆಧಾರದ ಮೇಲೆ ಹಾಗೂ ಕೇಂದ್ರ ಸರ್ಕಾರ ಮತ್ತು ನೆರೆಹೊರೆ ರಾಜ್ಯಗಳಿಗಿಂತ ಶಿಕ್ಷಣದಲ್ಲಿ ಕರ್ನಾಟಕವು ಅತ್ಯುತ್ತಮ ಸ್ಥಾನದಲ್ಲಿದ್ದು, ರಾಜ್ಯದ ಸಾಕ್ಷರತೆಯ ಪ್ರಮಾಣ ಶೇಕಡ 78.2% ರಷ್ಟಾಗಲು ಪ್ರಾಥಮಿಕ ಶಾಲಾ ಶಿಕ್ಷಕರ ಪರಿಶ್ರಮವೇ ಕಾರಣ ಎಂದು100ಕ್ಕೂ ಹೆಚ್ಚು ಪುಟಗಳ ವರದಿಯನ್ನು ಸಲ್ಲಿಸಿದೆ.
ರಾಜ್ಯದ ಶಿಕ್ಷಕರ ಕಾರ್ಯಭಾರ ಗುರುತಿಸಿ ಪ್ರಾಥಮಿಕ ಶಾಲಾ
ಶಿಕ್ಷಕರು ಹಾಲಿ ಪಡೆಯುತ್ತಿರುವ ವೇತನ ಶ್ರೇಣಿ 25800-51400ನ್ನು ದ್ವಿಗುಣಗೊಳಿಸಿ 51600-102800ರೂ. ಆರಂಭಿಕ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿಗೊಳಿಸಬೇಕು. ಆದರೆ ಅದರಂತೆ ವೇತನ ಶ್ರೇಣಿಯು ಹಾಲಿ ನೀಡುವ ವೇತನ ಶ್ರೇಣಿಯ ಬದಲಾಗಿ ಡಿಪ್ಲೋಮಾ ಪದವೀಧರರಿಗೆ ನೀಡುವ ವೇತನ ಶ್ರೇಣಿಗೆ ಸಮಾನವಾಗಿ ಶಿಫಾರಸ್ಸು ಮಾಡಬೇಕು.
10 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ ನೀಡುವ ಕಾಲಮಿತಿ ಬಡ್ತಿ ವೇತನ ಶ್ರೇಣಿಯನ್ನು ದ್ವಿಗುಣಗೊಳಿಸಿ 55300-105300ರ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸಬೇಕು.
ಪ್ರತಿ 5 ವರ್ಷಕ್ಕೆ ಮುಂದಿನ ವೇತನ ಶ್ರೇಣಿಗೆ ಶಿಕ್ಷಕರಿಗೆ ಮುಂಬಡ್ತಿ ನೀಡುವ ಕುರಿತು. ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 156000 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವುದರಿಂದ, ಎಲ್ಲರಿಗೂ ಏಕಕಾಲಕ್ಕೆ ಬಡ್ತಿ ಸಿಗುವುದು ಕಷ್ಟ ಸಾಧ್ಯ. ಪ್ರತಿ 5 ವರ್ಷಕ್ಕೊಮ್ಮೆ ಮುಂದಿನ ಹಂತದ ವೇತನ ಶ್ರೇಣಿಗೆ (ಸೂಪರ್ ಟೈಮ್ ಸ್ಕೇಲ್ ಮಾದರಿಯಲ್ಲಿ) ಅವರ ವೇತನವನ್ನು ನಿಗಧಿಗೊಳಿಸಿ ವೇತನ ಮುಂಬಡ್ತಿ ನೀಡಬೇಕು.
ಮನೆ ಬಾಡಿಗೆ ಭತ್ಯೆ ಈಗಿರುವ ವ್ಯವಸ್ಥೆಯಲ್ಲಿ ಶೇಕಡಾ 8ರಷ್ಟು ಇದ್ದು, 16ಕ್ಕೆ, ಶೇಕಡಾ 25ರಷ್ಟಿರುವುದನ್ನು ಮನೆ 35ಕ್ಕೆ ಹೆಚ್ಚಿಸಲು ಶಿಫಾರಸ್ಸು ಮಾಡಬೇಕು.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ವಿಷಯ ಪರಿವೀಕ್ಷಕ, ಶಿಕ್ಷಣಾಧಿಕಾರಿ, ಉಪನಿರ್ದೇಶಕರ ಹುದ್ದೆಯ ವರೆಗೆ ಬಡ್ತಿ ನೀಡುವಂತೆ ಶಿಫಾರಸ್ಸು ಮಾಡಬೇಕಾಗಿ ವಿನಂತಿ. ವಿದ್ಯಾರ್ಹತೆಯ ಆಧಾರದ ಮೇಲೆಯೂ ಸಹ ಉಪನಿರ್ದೇಶಕರ ಹುದ್ದೆಯ ವರೆಗೆ ಬಡ್ತಿ ನೀಡುವಂತೆ ಶಿಫಾರಸ್ಸು ಮಾಡಬೇಕು.
ರಾಜ್ಯದಲ್ಲಿ ಎನ್ಪಿಎಸ್ ಯೋಜನೆಗೆ ಒಳಪಡುವ ಲಕ್ಷಾಂತರ ನೌಕರರು,ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಸದರಿ ನೌಕರರನ್ನು ಓಪಿಎಸ್ ಯೋಜನೆಗೆ ಒಳಪಡಿಸಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸುತ್ತೇವೆ.
ಕೇಂದ್ರ ಸರ್ಕಾರದ 8ನೇಯ ವೇತನ ಆಯೋಗ ರಚನೆಯಾಗಿ ವರದಿ ಕೊಡುವ ಸಂಭವವಿದೆ, ಈ ಅಂಶ ಪರಿಗಣಿಸಿ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ/ ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸಿ ಶಿಫಾರಸ್ಸು ಮಾಡಬೇಕು.
7ನೇ ವೇತನ ಆಯೋಗ ಸೌಲಭ್ಯಗಳನ್ನು 01-07-2022ರಿಂದಲೇ ಜಾರಿಗೊಳಿಸಬೇಕೆಂದು
ಮೊದಲಾದ
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ.ನಾಗೇಶ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಸಂಘಟನಾ ಕಾರ್ಯದರ್ಶಿ ಪ್ರಮೀಳಾ.ಟಿ.ಕಾಮನಳ್ಳಿ,
ಬಳ್ಳಾರಿ ಜಿಲ್ಲಾಧ್ಯಕ್ಷ ಸಿ.ನಿಂಗಪ್ಪ, ಇತರರು ಉಪಸ್ಥಿತರಿದ್ದರು.