ರಾಜ್ಯ ಹೈಕಮಾಂಡ್‍ನ್ನೂ ಮೀರಿದ ಹೈಕಮಾಂಡ್ ಮೈಸೂರಿನಲ್ಲಿದೆ

ಸಾ.ರಾ.ಮಹೇಶ್ ವಿರುದ್ಧ ಶಾಸಕ ಜಿ.ಟಿ.ದೇವೇಗೌಡ ವ್ಯಂಗ್ಯ
ಮೈಸೂರು,ಜ.7:- ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಹೈಕಮಾಂಡ್ ಅದನ್ನೂ ಮೀರಿದ ಹೈಕಮಾಂಡ್ ಮೈಸೂರಿನಲ್ಲಿದೆ ಎಂದು ಶಾಸಕ ಸಾ.ರಾ.ಮಹೇಶ್ ಹೆಸರೇಳದೆ ಶಾಸಕ ಸಾ.ರಾ.ಮಹೇಶ್ ವಿರುದ್ಧ ಶಾಸಕ ಜಿ.ಟಿ.ದೇವೇಗೌಡ ವ್ಯಂಗ್ಯವಾಡಿದರು.
ಮೈಸೂರಿನಲ್ಲಿ ಇಂದು ಮಾತನಾಡುತ್ತಾ ಪಕ್ಷದಲ್ಲಿ ಮೈಸೂರು ಭಾಗದಲ್ಲಿ ಯಾರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೋ ನಾವು ಅಂಥಹವರನ್ನು ಉಚ್ಛಾಟನೆ ಮಾಡುವುದಾಗಿ ಕುಮಾರಸ್ವಾಮಿಯವರು ನೇರವಾಗಿ ಹೇಳಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರೊಬ್ಬರೇ ಹೇಳಿಲ್ಲ, ಅವರ ಜೊತೆ ಮೈಸೂರು ಹೈಕಮಾಂಡ್ ಕೂಡ ಹೇಳಿದ್ದಾರೆ ಎಂದರು.
ಕುಮಾರಸ್ವಾಮಿಯವರು ರಾಜ್ಯ ಹೈಕಮಾಂಡ್, ಅದನ್ನೂ ಮೀರಿದ ಹೈಕಮಾಂಡ್ ಮೈಸೂರಿನಲ್ಲಿದೆ. ಅದೂ ಕೂಡ ಹೇಳಿದೆ, ಕುಮಾರಸ್ವಾಮಿಯವರು ಹೇಳಿದ್ದಾರೆ ಪಕ್ಷದಲ್ಲಿ ಯಾರು ಹೇಳಿಕೆಗಳನ್ನು ಕೊಡ್ತಾರೆ ಅವರನ್ನು ಪಕ್ಷದಿಂದ ಕೈಬಿಡಬೇಕು ಅಂತ. ಅದು ಮೈಸೂರನಿಂದಲೇ ಆಗತ್ತೆ ಅಂತ ಹೇಳಿದ್ದಾರೆ. ನಾನು ಹೇಳುವುದಿಷ್ಟೇ. ಹುಣಸೂರಿನ ಉಪಚುನಾವಣೆ ಆಯ್ತು ಯಾವ ಹೈಕಮಾಂಡ್ ಕೂಟ ಬಂದು ನನ್ನನ್ನು ಬರಬೇಕು ಅಂತ ಕರೆದಿಲ್ಲ. ನಾನು ಹುಣಸೂರು ಉಪಚುನಾವಣೆಗೇ ಹೋಗಿಲ್ಲ. ಮತ್ತೆ ಮೊನ್ನೆ ಕುಮಾರಸ್ವಾಮಿಯವರೇ ಬಂದು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಗೆ ಟಿಕೇಟ್ ಕುರಿತು ಅವರೇ ಜವಾಬ್ದಾರಿಯನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜಿ.ಪಂ, ತಾಪಂ ಬಿಫಾರ್‍ಂ ತಾನೇ ಬಂದು ಕೊಡುವುದಾಗಿ ಹೇಳಿದ್ದಾರೆ ಎಂದರು.
ಮೈಸೂರು ಹೈಕಮಾಂಡ್ ಪ್ರಜ್ವಲ್ ರನ್ನು ಹುಣಸೂರಿಗೆ ಕರಕೊಂಡು ಬಂದೆ ಅಂತ ಹೇಳ್ತಾರೆ. ಇನ್ನೊಂದು ಸಲ ವಿಶ್ವನಾಥ್ ನ್ನು ನಾನೇ ಕರೆದುಕೊಂಡು ಬಂದೆ ಅಂತ ಹೇಳಿದ್ದರು. ನಮ್ಮ ಭವಾನಿ ಮೇಡಂ ಪತ್ರಿಕೆಯಲ್ಲಿ ಓದಿದ್ದೆ. ನನ್ನ ಮಗನನ್ನು ಕರೆತಂದು ಟಿಕೇಟ್ ನೀಡದೆ ಅವಮಾನ ಮಾಡಿರೋದರಿಂದ ನಾನು ಸೋಲಿಸಿ ಎಂದಿದ್ದು ನಿಜ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅದು ಮಾಧ್ಯಮಗಳಲ್ಲಿಯೂ ಬಂದಿದೆ. ನಾನು ಭಾರತೀಯ ಜನತಾ ಪಾರ್ಟಿಯಲ್ಲಿ ಇದ್ದೆ. ಅಲ್ಲೂ ಕೂಡ ಶಿಸ್ತಿನ ಸಿಪಾಯಿಯಾಗಿ ಇರುವಷ್ಟು ದಿನ ಪಕ್ಷದ ಶಿಸ್ತಿನ ಸಿಪಾಯಿಯಾಗಿಯೇ ನಡೆದುಕೊಂಡಿದ್ದೇನೆ. ಜೆಡಿಎಸ್ ಪಕ್ಷದಲ್ಲಿ ಒಂದೇ ಒಂದು ಸಣ್ಣ ತಪ್ಪನ್ನೂ ಮಾಡಿಲ್ಲ. ನಾನು ಇನ್ನೊಂದು ಪಕ್ಷದವರನ್ನು ಗೆಲ್ಲಿಸಲು ಯಾರೋ ದುರ್ಬಲ ಅಭ್ಯರ್ಥಿಗೆ ಬಿಪಾರಂ ಕೊಡಿ ಅಂತ ಕೊಡಿಸಿಲ್ಲ. ಯಾರು ಆ ಕೆಲಸ ಮಾಡುತ್ತಿದ್ದಾರೆ ಅವರ ಮೇಲೆ ತಾನೇ ಕ್ರಮ ತೆಗೆದುಕೊಳ್ಳಬೇಕು? ಯಾರೋ ಇವರಿಗೆ ಬೇಕಾದವರನ್ನು ಬಿಜೆಪಿ ಯನ್ನು, ಕಾಂಗ್ರೆಸ್ ನವರನ್ನು ಗೆಲ್ಲಿಸಲಿಕ್ಕೆ ಜೆಡಿಎಸ್ ಪಕ್ಷವನ್ನು ಬಳಸಿಕೊಂಡು ಆ ದುರ್ಬಲ ಅಭ್ಯರ್ಥಿಯನ್ನು ಆರಿಸುವ ಕೆಲಸ ಮಾಡಿದ್ದಾರೆ. ನಿರಂತರವಾಗಿ ಮಾಡಿಕೊಂಡೇ ಬರುತ್ತಿದ್ದಾರೆ. ನಾನು ಆ ಕೆಲಸ ಮಾಡಿಲ್ಲ. ಪಕ್ಷಕ್ಕೆ ಯಾವತ್ತೂ ಕೂಡ ದ್ರೋಹ ಮಾಡಿಲ್ಲ. ಒಂದೇ ಒಂದು ದಿನ ವಿರುದ್ಧ ವಾದ ಚಟುವಟಿಕೆಗಳನ್ನು ಇವತ್ತಿನವರೆಗೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೆ.ಆರ್.ನಗರವೂ ಸೇರಿದಂತೆ ನಾನು ಬೆಂಬಲ ಕೊಟ್ಟಿದ್ದೇನೆ. ಪ್ರಾಮಾಣಿಕವಾಗಿ ಮಾಡಿದ್ದೇನೆ. ದೇವರು ಮೆಚ್ಚುವ ರೀತಿ ಮಾಡಿದ್ದೇನೆ. ಅವರು ಶಿಸ್ತುಕ್ರಮ ಯಾರ ಮೇಲೆ ತೆಗೆದುಕೊಳ್ಳಬೇಕು, ಮೊದಲು ಅನ್ವಯಿಸುವುದು ಯಾರಿಗೆ, ಇದನ್ನೆಲ್ಲ ಯಾರು ಮಾಡಿದ್ದಾರೆ ಎಂಬುದರ ಆತ್ಮಾವಲೋಕನವಾಗಲಿ ಎಂದರು.
ಜಿ.ಟಿ.ದೇವೇಗೌಡರ ಮಗ ಹುಣಸೂರಿಗೆ ಬರಬಾರದು ಅಂತ ಪಕ್ಷವನ್ನೇ ಬಳಸಿಕೊಂಡು ಏನು ಮಾಡಿದ್ದಾರೋ ಅವರ ಮೇಲೆ ತಾನೇ ಮೊದಲು ಕ್ರಮ ತೆಗೆದುಕೊಳ್ಳಬೇಕು. ಯಾವ ಕ್ಷೇತ್ರದಲ್ಲಿ ಗೆಲ್ಲದಿರುವಂತ ವ್ಯಕ್ತಿಗೆ ಯಾರು ಗೆಲ್ಲಿಸಲೇಬೆಕೆಂದು ಬಿಫಾರಂ ಕೊಡಿಸುತ್ತಿದ್ದಾರೋ ಅವರ ಮೇಲೆ ತಾನೇ ಕ್ರಮ ತೆಗೆದುಕೊಳ್ಳಬೇಕು. ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಹುಣಸೂರಿಗೆ ಬಂದಾಗಲೇ ಸಭೆಯಲ್ಲಿ ಸೇರಿದ್ದ ನೂರಕ್ಕೆ ನೂರು ಜನರು ಹರೀಶ್ ಗೌಡ ಹೆಸರೇಳಿದ್ದರು ಅಸೆಂಬ್ಲಿಗೆ. ಅವರಿಗೆ ಯಾವುದೇ ಕಾರಣಕ್ಕೂ ಎಂಎಲ್ ಎ ಆಗಲು ಬಿಡಬಾರದು ಅಂತ ಇರುವಾಗ ಇಷ್ಟೆಲ್ಲ ಇದ್ದರೂ ಅದನ್ನು ತಡೆದುಕೊಂಡು ವಿಶ್ವನಾಥ್ ಪರ ಪ್ರಚಾರ ಮಾಡಿಲ್ಲವೇ? ಅವರ ಆದೇಶ ಪಾಲನೆ ಮಾಡಿದ್ದೇವೆ ಎಂದರು.