ರಾಜ್ಯ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಉಪ ಮುಖ್ಯ ಮಂತ್ರಿ ಸ್ಥಾನ ನೀಡಲು ಆಗ್ರಹ


ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ16: ನೂತನವಾಗಿ ರಚನೆಯಾಗಲಿರುವ ಕಾಂಗ್ರೆಸ್ ರಾಜ್ಯ ಸರ್ಕಾರದಲ್ಲಿ ಮುಸ್ಲಿಂ ಸಮುದಾಯಕ್ಕೆ  ಉಪ ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ಖಾತೆಗಳನ್ನು ನೀಡಿ ನ್ಯಾಯ ಒದಗಿಸುವಂತೆ ಕರ್ನಾಟಕ ಮುಸ್ಲಿಂ ಸಂಘ ಹೈಕಮಾಂಡನ್ನು ಆಗ್ರಹಿಸಿದೆ.
ಈ ಕುರಿತು ಹೊಸಪೇಟೆಯ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ಧಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಎಲ್.ಎಸ್.ಬಷೀರ್ ಅಹಮ್ಮದ್  ಅವರು ರಾಜ್ಯಾದ್ಯಂತ ಮುಸ್ಲಿಂ ಸಮುದಾಯದ ಸಹಕಾರ ಅವಿಸ್ಮರಣೀಯ, ನಮ್ಮ ಸಹಾರ ಹಾಗೂ ಕಾಂಗ್ರೆಸ್ ಪಕ್ಷದಿಂದ 9ಜನ ಶಾಸಕರನ್ನು ಆಯ್ಕೆ ಮಾಡಿದೆ 14% ಸಮುದಾಯವಾದ ಜನ ಬಹುತೇಕರು ಕಾಂಗ್ರೆಸ ಪಕ್ಷಕ್ಕೆ ಬೆಂಬಲವನ್ನು ನೀಡಿದ್ದು ಖಂಡಿತವಾಗಿ ಉಪ ಮುಖ್ಯಮಂತ್ರಿ ಅಥವಾ ಗೃಹಮಂತ್ರಿ ಸ್ಥಾನವನ್ನು ನೀಡಲೇಬೇಕು
ಅಥವಾ ಯಾವುದೆ ಚಾತಿಯ ಗೆದ್ದ ಶಾಸಕರಿಗೆ ಆಗಲಿ ನ್ಯಾಯವನ್ನು ಒದಗಿಸಬೇಕು.
ಒಂದು ವೇಳೆ ನಮ್ಮ ಪುರಸ್ಕರಿಸಿದರೆ ಮುಂದಿನ ದಿನಗಳಲ್ಲಿ ಬರುವ ಲೋಕಸಭೆ, ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬೆಂಬಲಿಸಲಿದೆ ಎಂದರು.
ರಾಜಕಾರಣ ಜಾತಿ ಆಧಾರಿತವಾಗುತ್ತಿದ್ದು ಉತ್ತಮ ಬೆಳವಣಿಗೆಯಲ್ಲಾ,  ಆದರೂ ಅನಿವಾರ್ಯವಾಗಿ ಬೇರೆ ಚಾತಿಗಳು ತನ್ನ ಮಾನ್ಯತೆಗೆ ಹೋರಾಡುವಂತೆ ಹೋರಾಡುವಂತೆ ನಾವು ನಮ್ಮ ಜಾತಿಗೆ ಮಾನ್ಯತೆ ನೀಡುವಂತೆ ಆಗ್ರಹಿಸುತ್ತೇವೆ ಎಂದರು.
ಐಎಂಎ ಹಗರಣ ತನಿಖೆಗೆ ಆಗ್ರಹ.
ಬಹುತೇಕ ನಮ್ಮ ಸಮುದಾಯದವರೆ ಐಎಂಎ ಹಗರಣದಲ್ಲಿ15 ಕೋಟಿಗೂ ಅಧಿಕ ಹಣ ತೊಡಗಿಸಿ ಹಾನಿಗೊಳಗಾಗಿದ್ದು ಅದನ್ನು ನೂತನ ಸರ್ಕಾರ ಸಮಗ್ರ ತನಿಖೆಗೆ ಒಳಪಡಿಸಿ ಹಾನಿಯಾಗಿರುವವರಿಗೆ ನ್ಯಾಯ ನೀಡಲು ಒತ್ತಾಯಿಸಿ ಮುಂದಿನ ದಿನಗಳಲ್ಲಿ ಒತ್ತಾಯಿಸುವುದಾಗಿ ಹೇಳಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರಿಜ್ವಾನುಲ್ಲಾ, ಸಂಚಾಲಕ ಎನ್.ಅಬುಬಕರ್, ಎಲ್.ಎಸ್.ಮಹಮದ್ ರಫಿ, ಫಿರೋಜ್ ಹೋನ್ನೂರವಲಿ ಇಸ್ಮಾಯಿಲ್, ಷರೀಫ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.