ರಾಜ್ಯ ಸರ್ಕಾರ ನೀತಿಗಳು ಜನವಿರೋಧಿಯಾಗಿವೆ – ಈಶ್ವರ ಖಂಡ್ರೆ

ರಾಯಚೂರು,ಜು.೧೫ – ರಾಜ್ಯ ಸರಕಾರದ ತಪ್ಪು ನೀತಿಯಿಂದ ಮಾಡಿದ ಪಠ್ಯಪರಿಷ್ಕರಣೆಯಿಂದ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.೧ ಕೋಟಿ ೩೦ ಲಕ್ಷ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವುದಕ್ಕೆ ಸರಕಾರ ಯತ್ನಿಸಿದ್ದಕ್ಕೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿತ್ತು.ರಾಜ್ಯ ಸರಕಾರ ನೀತಿಗಳು ಜನವಿರೋಧಿಯಾಗಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಅವರಿಂದು ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡ ನವ ಸಂಕಲ್ಪ ಶಿಬಿರದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರಾಜ್ಯ ಸರ್ಕಾರದ ದುರಾಡಳಿತದಿಂದ ಭ್ರಮನಿರಸನಗೊಂಡಿರುವ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ದುರಾಡಳಿತದಿಂದ ಆಕ್ರೋಶದ ಕಟ್ಟೆಯೊಡೆದು ಅದು ಸರಕಾರದ ವಿರುದ್ಧ ತಿರುಗುವ ಅಪಾಯದಿಂದ ತಪ್ಪಿಸಿಕೊಳ್ಳಲು ಆಹಾರ ಪದ್ದತಿ,ಉಡುಗೆ ತೊಡುಗೆ,ವಿಚಾರವನ್ನು ಮುನ್ನಲೆಗೆ ತರುತ್ತಿದೆ. ಮಹಾಪುರುಷರ ಇತಿಹಾಸವನ್ನು ತಿರುಚುವ ಮೂಲಕ ಸರಕಾರದ ಮೇಲಿನ ಆಕ್ರೋಶವನ್ನು ಬೇರೆಡೆಗೆ ತಿರುಗಿಸುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದ್ದು ಅದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.