ರಾಜ್ಯ ಸರ್ಕಾರ ಅಕ್ಕಮಹಾದೇವಿ ಜಯಂತಿಯನ್ನು ಸಾರ್ವತ್ರಿಕವಾಗಿ ಆಚರಿಸಲಿ:ಡಾ.ರಾಜಶೇಖರ ಶಿವಾಚಾರ್ಯರು

ಬೀದರ:ಫೆ.24:ಕನ್ನಡದ ಮೊದಲ ಕವಿಯತ್ರಿ, ಶರಣರ ಕಣ್ಮಣಿ, ಮಹಾಶಿವಶರಣೆ, ವೈರಾಗ್ಯನಿಧಿ ಶ್ರೀ ಅಕ್ಕ ಮಹಾದೇವಿಯವರ ಜಯಂತಿಯನ್ನು ಕರ್ನಾಟಕ ಸರ್ಕಾರ ಸಾರ್ವತ್ರಿಕವಾಗಿ ಆಚರಿಸಬೇಕೆಂದು ಶ್ರೀ ಡಾ|| ರಾಜಶೇಖರ ಶಿವಾಚಾರ್ಯರು ಒತ್ತಾಯಿಸಿದರು.

ಅವರು ನಗರದ ಹೊರ ವಲಯದಲ್ಲಿರುವ ಜ್ಞಾನ ಶಿವಯೋಗಾಶ್ರಮದಲ್ಲಿ ಯಶಸ್ವಿಯಾಗಿ ಜರುಗಿದ ಶ್ರೀಶೈಲದ ಶ್ರೀ ಅಕ್ಕ ಮಹಾದೇವಿ ಚೈತನ್ಯ ಪೀಠದ ಅಧಿಪತಿಗಳಾದ 'ತಪೋರತ್ನ' ಪೂಜ್ಯ ಶ್ರೀ ಕರುಣಾದೇವಿ ಮಾತಾರವರ ಜನ್ಮ ದಿನೋತ್ಸವ ಸಮಾರಂಭಧ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡುತ್ತ ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನು ಇಟ್ಟರು.
ಬಸವಾದಿ ಶಿವಶರಣರ ಗೌರವಾಭಿಮಾನಕ್ಕೆ ಪಾತ್ರಳಾಗಿರುವ ಅಕ್ಕಳ ವ್ಯಕ್ತಿಯನ್ನು ಕುರಿತು 'ಡಣ್ಣಾಯಕರ 60 ವಚನಗಳಿಗೆ ಮಹಾದೇವಿಯಕ್ಕಗಳ ಒಂದು ವಚನ ನಿರ್ವಚನ ಕಾಣಾ ಎಂದು  ಚನ್ನಬಸವಣ್ಣನವರು ತಮ್ಮದೊಂದು ವಚನದಲ್ಲಿ ಅಕ್ಕಳ ಜ್ಞಾನ ಸಂಪತ್ತವನ್ನು ಬಣ್ಣಿಸಿರುವರು. ಅದಕ್ಕಾಗಿ ಅಕ್ಕಳನ್ನು ಭಕ್ತಿ ಜ್ಞಾನ ವೈರಾಗ್ಯಗಳ ಖಣಿ ಎಂದು ಶರಣರು ಬಣ್ಣಿಸಿರುವರು. ಆ ಕಾರಣಕ್ಕಾಗಿ ಶರಣರಿಗೆ ಬಸವಣ್ಣ ಪ್ರಮುಖರಾದಂತೆ ಶರಣಿಯರಿಗೆ ಮಹಾದೇವಿಯಕ್ಕ ಆದರ್ಶರಾಗಿರುವರು. ಮತ್ತು ಜಾಗತಿಕ ಮಹಿಳಾ ಸ್ವಾಭಿಮಾನ/ಆತ್ಮಬಲದ ಸಂಕೇತಳಾಗಿರುವರು. ಅಕ್ಕ ಮಹಾದೇವಿಯವರ ಜೀವನ ಯಶೋಗಾಥೆಯು ಅಬಲೆಯರಿಗೆ ಶಕ್ತಿಯ ಮೈಲಿಗಲ್ಲಾಗಿ ಎದ್ದು ಕಾಣುತ್ತದೆ. ಇಡೀ ನಾರಿಕುಲದ ಆತ್ಮ ಗೌರವದ ಪ್ರತಿಕವಾಗಿ ಅಕ್ಕ ಮಹಾದೇವಿಯವರು ನಮಗೆ ಎದ್ದು ಕಾಣುವರು. ಹೀಗಾಗಿ ಜಗತ್ತಿಗೊಬ್ಬರು ಅಣ್ಣ ಬಸವಣ್ಣನಾದರೆ, ಜಗತ್ತಿಗೊಬ್ಬಳು ಅಕ್ಕ ಎಂದರೆ ಅಕ್ಕ ಮಹಾದೇವಿಯವರು.
ಸಾಂಸ್ಕøತಿಕ ನಾಯಕ ಬಸವಣ್ಣನವರ ಜಯಂತಿಯನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ಆಚರಿಸಿಕೊಂಡು ಬರುತ್ತಿರುವುದು ನಾಡಿನ ಇಡೀ ಪುರುಷ ಸಮಾಜಕ್ಕೆ ಗೌರವ ದೊರೆತಿರುವಂತೆ ನಾಡಿನ ಮಹಿಳೆಯರಿಗೆ ಮನ್ನಣೆ ಗೌರವ ದೊರೆಯಬೇಕಾಗಿದರೆ ವೈರಾಗ್ಯನಿಧಿ ಶ್ರೀ ಅಕ್ಕಮಹಾದೇವಿಯವರ ಜಯಂತಿಯನ್ನು ಆಚರಿಸವುದು ಅತ್ಯಾವಶ್ಯಕವಾಗಿದೆ.
ಶ್ರೀ ಶೈಲದ ಶ್ರೀ ಅಕ್ಕ ಮಹಾದೇವಿ ಚೈತನ್ಯ ಪೀಠವು ಕಳೆದ 2013 ರಿಂದಲೂ ಜಯಂತಿಗಾಗಿ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿದೆ. ಈ ಹಿಂದೆ ನಮ್ಮ ಬೇಡಿಕೆಯನ್ನು ಮನ್ನಿಸಿ ತತ್ಕಾಲಿನ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಸಿದ್ದರಾಮಯ್ಯನವರು 2016ರ ಏಪ್ರೀಲ್ ತಿಂಗಳಲ್ಲಿ ಬರುವ ದವನದ ಹುಣ್ಣಿಯಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಕ್ಕ ಮಹಾದೇವಿ ಜಯಂತಿ ಆಚರಿಸಿ ಪ್ರತಿ ವರ್ಷ ಆಚರಿಸುವ ಘೋಷಣೆ ಮಾಡಿದ್ದರು. ಅಕ್ಕಳ ಹೆಸರಿನಲ್ಲಿ ಪ್ರಶಸ್ತಿಯನ್ನು ಘೋಷಿಸಿ ತತ್ಕಾಲಿನ ಕ.ವಿ.ವಿ ಹಂಪಿ ಕುಲಪತಿಗಳಾಗಿದ್ದ ಶ್ರೀಮತಿ ಮಲ್ಲಿಕಾ ಘಂಟಿ ಅವರಿಗೆ ನೀಡಲ್ಪಟ್ಟಿತ್ತು. ನಂತರ ಇದನ್ನು ನಿಲ್ಲಿಸಲ್ಪಟ್ಟಿತ್ತು. ಕಾರಣ ತಿಳಿದಿಲ್ಲ. ಇದು ನಾಡಿನ ಇಡೀ ಮಹಿಳಾ ಸಮಾಜಕ್ಕೆ ಮಾಡಿದ ಒಂದು ರೀತಿಯ ಅಪಮಾನ ವಲ್ಲವೇ? ಈಗಲಾದರೂ ಎಚ್ಚೆತ್ತುಕೊಂಡು ರಾಜ್ಯ ಸರ್ಕಾರ ಮುಂಬರುವ ಏಪ್ರೀಲ್ ತಿಂಗ¼ À(ಏಪ್ರೀಲ್20) ದವನದ ಹುಣ್ಣಿಮೆ ಎಂದು 'ವೈರಾಗ್ಯನಿಧಿ ಶ್ರೀ ಅಕ್ಕ ಮಹಾದೇವಿರವರ ಜಯಂತಿಯನ್ನು ಸಾರ್ವತ್ರಿಕವಾಗಿ ಆಚರಿಸ ಬೇಕಲ್ಲದೇ ಅಕ್ಕಳ ಹೆಸರಿನಲ್ಲಿ ಪ್ರಶಸ್ತಿಯನ್ನು ಮಹಿಳಾ ಸಾಧಕಿಯರಿಗೆ ಕೊಡಬೇಕು. ಮತ್ತು ಅದಕ್ಕೆ 20 ಲಕ್ಷ ರೂಪಾಯಿಗಳ 'ಗೌರವ ಹಮ್ಮಿಣಿ'ಯನ್ನು ನೀಡಬೇಕೆಂದು ಈ ಮೂಲಕ ಶ್ರೀಗಳು ಒತ್ತಾಯಿಸಿದರು. ಸಭೀಕರು ಜೋರಾದ ಚಪ್ಪಾಳೆಯ ಮೂಲಕ ಬೆಂಬಲಿಸಿದರು.
ಬೀದರ ಲೋಕ ಸಭೆಯ ಟಿಕೆಟ ಆಕಾಂಕ್ಷಿಯಾದ ಭಾಲ್ಕಿಯ ಯುವ ಮುತ್ಸದಿ ಜನನಾಯಕರಾದ ಶ್ರೀ ಸಾಗರ ಈಶ್ವರ ಖಂಡ್ರೆಯವರು ಸಮಾರಂಭವನ್ನು ಉದ್ಘಾಟಿಸಿದರು, ದುರೀಣರಾದ ಮಾರುತಿ ಖಾಶೆಂಪೂರೆ, ಡಾ|| ಸುಭಾಷ ಪಾಟೀಲ್, ನಗರ ಸಭೆ ಸದಸ್ಯೆ ಮಹಾದೇವಿ ಹುಮನಾಬಾದೆ, ಶಶಿಕಲಾ ಮಾತಾ, ಗುಣವಂತರಾವ ಶಿಂಧೆ, ವಾಯ್.ಬಿ.ಪಾಟೀಲ್ ಉದಗೀರ, ಮಹಾದೇವಪ್ಪ ಭಂಗೂರೆ, ಬಸವರಾಜ ಝಹಿರಾಬಾದ, ಸರಸ್ವತಿ ಗೌರಶೆಟ್ಟಿ, ಅನೀಲ ಪಾಟೀಲ, ಮಹಾದೇವಿ ಮಠಪತಿ, ಜಯಕ್ಕ ಚಡಚಣಕರ್, ರಮೇಶ ಸೋಲಪೂರ, ಶಿವಯ್ಯ ಸ್ವಾಮಿ ಕಮಠಾಣಾ, ಡಾ|| ಓಂಕಾರ ಸ್ವಾಮಿ, ಪ್ರಭು ತರನಳ್ಳಿ, ರಾಜಕುಮಾರ ಬುಧೇರಾ, ಶಿವರಾಜ ಕೋಟೆ, ಮಲ್ಲಿಕಾರ್ಜುನ ಶಂಭು, ಪರಮೇಶ್ವರ ಪಾಟೀಲ ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿದ್ದರು.

ಜನ್ಮದಿನ ಸ್ವಾಗತ ಸಮಿತಿಯ ಅಧ್ಯಕ್ಷರಾದ ಕಂಟೆಪ್ಪಾ ಭಂಗೋರೆ ಎಲ್ಲರನ್ನು ಸ್ವಾಗತಿಸಿದರು, ಬಸವರಾಜ ಹಾಲಹಳ್ಳಿ ನಿರೂಪಿಸಿದರು, ಗಂಗಾಧರ ಸ್ವಾಮಿ ಧನ್ನೂರು ವಂದಿಸಿದರು, ದಾಸೋಹ ಸೇವೆಯನ್ನು ಮಾಡಿರುವ ಶ್ರೀಮತಿ ಸುನೀತಾ ಕಂಟೆಪ್ಪ ಭಂಗೂರೆ ಅವರು ಶ್ರೀ ಗುರುಮಾತಾ ಅವರ ಪಾದಪೂಜೆ ನೆರವೇರಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀಗುರುಮಾತಾ ರವರ ದರ್ಶನಾಶೀರ್ವಾದವನ್ನು ಪಡೆದುಕೊಂಡರು.