ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ

ದಾವಣಗೆರೆ, ಜೂ,28: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರುಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯು ನಡೆಯಿತು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರುಜಿಲ್ಲಾ ಶಾಖೆ ದಾವಣಗೆರೆ,ಜಿಲ್ಲಾ ಶಾಖೆ ಯಿಂದ ರಾಜ್ಯ ಸಂಘಕ್ಕೆ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಶಿವಾನಂದ ದಳವಾಯಿ ಫಾರ್ಮಸಿ ಅಧಿಕಾರಿ, ಜಿಲ್ಲಾ ಔಷಧ ಉಗ್ರಾಣ ದಾವಣಗೆರೆ ಹಾಗು ಮತ್ತೊಬ್ಬರಾದ ಶಾಮನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವಶ್ರೀ ಸ್ವಾಮಿ ಕೆ.ಎಂ.ಎಚ್ ಇವರನ್ನು ರಾಜ್ಯ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಇವರು ಆದೇಶ ಹೊರಡಿಸಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಶಾಖೆಯಅಧ್ಯಕ್ಷರಾದ  ಎಸ್.ವೀರೇಶ್,ವಡೆನಪುರ ತಿಳಿಸಿದ್ದಾರೆ,ಈ ಸಂದರ್ಭದಲ್ಲಿ ಜಿಲ್ಲಾ ಶಾಖೆಯ ಕಾರ್ಯದರ್ಶಿ ಗುರುಮೂರ್ತಿ ಹಾಗೂ ಜಿಲ್ಲಾ ಸಂಘದ ಖಜಾಂಚಿಗಳಾದ ತಿಪ್ಪೇಸ್ವಾಮಿ.ಬಿ.ಆರ್ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಬಿ.ಪಾಲಾಕ್ಷ, ನಿರ್ದೇಶಕರುಗಳಾದ  ಸಿದ್ದಲಿಂಗ ಸ್ವಾಮಿ, ವಿಶ್ವನಾಥ್ ಹಾಗೂ ಸಿ.ಜಿ ಆಸ್ಪತ್ರೆಯ ಸುಶ್ರುಶಾಧಿಕಾರಿ  ಕುಬೇಂದ್ರಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು