ರಾಜ್ಯ ಸರ್ಕಾರಿ ನೌಕರರ ವೇತನ ಭತ್ತೆಗಳನ್ನು ಹೆಚ್ಚಿಸಲು ರÁಜ್ಯ ಸರ್ಕಾರಕ್ಕೆ : ರಾಜು ಅಲಗೂರ ಆಗ್ರಹ

ವಿಜಯಪುರ:ಫೆ.25: 2023-24ನೇ ಸಾಲಿನ ರಾಜ್ಯ ಮುಂಗಡ ಪತ್ರ ಮಂಡನೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು 7ನೇ ವೇತನ ಆಯೋಗದ ಜಾರಿಗಾಗಿ ರಾಜ್ಯ ಸರ್ಕಾರಿ ನೌಕರರು ವೇತನ ಭತ್ತೆಗಳ ಪರಿಷ್ಕರಣೆಗಾಗಿ ಸುಮಾರು 12 ಸಾವಿರ ಕೋಟಿ ಅನುದಾನವನ್ನು ಮೀಸಲಿರಿಸುವ ಭರವಸೆಯನ್ನು ಇಟ್ಟುಕೊಂಡಿದ್ದರು. ಆದರೆ ಮಂಡಿಸಲಾದ ಆಯವ್ಯಯ ಪತ್ರದಲ್ಲಿ ನೌಕರರ ಯಾವುದೇ ಬೇಡಿಕೆಗಳನ್ನು ಈಡೇರಿಸದೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರನ್ನು ಸಂಪೂರ್ಣವಾಗಿ ಬಿಜೆಪಿ ಸರಕಾರ ಕಡೆಗಣಿಸಿದೆ.
ರಾಜ್ಯದಲ್ಲಿ ಪ್ರಸ್ತುತ ಸುಮಾರು 2.50 ಲಕ್ಷ ಹುದ್ದೆಗಳು ಖಾಲಿ ಇದ್ದಾಗ್ಯೂ ಸಹ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರಿ ನೌಕರರು ದಕ್ಷತೆ-ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದು, ರಾಜಸ್ವ ಸಂಗ್ರಹಣೆಯಲ್ಲಿ ದೇಶದಲ್ಲಿಯೇ 2ನೇ ಸ್ಥಾನ ಹೊಂದಲು ಕಾರಣೀಭೂತರಾಗಿದ್ದಾರೆ.
ಪ್ರಸ್ತುತ ಬೆಲೆ ಸೂಚ್ಯಾಂಕವನ್ನು (Pಡಿiಛಿe Iಟಿಜex) ಗಮನಿಸಿದರೆ ಸಾಮಾನ್ಯ ದಿನಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಜೀವನ ನಿರ್ವಹಣಾ ವೆಚ್ಚ ಎಂದರೆ – ವಸತಿ, ಆಹಾರ, ದಿನನಿತ್ಯ ಉಪಯೋಗಿಸಬಹುದಾದ ಪದಾರ್ಥಗಳು, ಸಾರಿಗೆ-ಸಂಪರ್ಕ, ಶೈಕ್ಷಣಿಕ ವೆಚ್ಚ, ಪೆಟ್ರೋಲ್-ಡಿಜೈಲ್, ಅಡುಗೆ ಇಂಧನ ಮುಂತಾದ ಇತರೆ ವಸ್ತುಗಳ ಮೇಲಿನ ವೆಚ್ಚ ಸರಾಸರಿ ಅಂದಾಜು ವೆಚ್ಚವನ್ನೊಳಗೊಂಡಿರುತ್ತದೆ.
ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಅಲ್ಲಿನ ಜೀವನ ನಿರ್ವಹಣಾ ವೆಚ್ಚ ಹೆಚ್ಚಾದಂತೆ ಆರ್ಥಿಕ ಅಭಿವೃದ್ಧಿ ಕೂಡ ಹೆಚ್ಚಾಗುತ್ತದೆ. ಇವೆರಡೂ ನೇರವಾದ ಸಂಬಂಧವನ್ನು ಹೊಂದಿರುತ್ತವೆ.
ಅರ್ಥಶಾಸ್ತ್ರಜ್ಞರ ಅಭಿಪ್ರಾಯದಂತೆ ಜೀವನ ನಿರ್ವಹಣೆ ವೆಚ್ಚವು ಏರಿಕೆಯಾದಂತೆ ವೇತನ ದರಗಳು ಕಡಿಮೆಯಾಗುತ್ತವೆ. ಸಾಮಾನ್ಯವಾಗಿ ಕೇಂದ್ರ & ರಾಜ್ಯ ಸರ್ಕಾರಗಳು ವೇತನ ಆಯೋಗಗಳು ಬೆಲೆ ಸೂಚ್ಯಾಂಕ (Pಡಿiಛಿe Iಟಿಜex) ಆಧಾರದ ಮೇಲೆ ಮಾಡಿದ ಶಿಫಾರಸ್ಸುಗಳನ್ನು ಜಾರಿಗೆ ತಂದ ಉದಾಹರಣೆಗಳಿವೆ.
ಆದ್ದರಿಂದ ಈ ಅಂಶವನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ ಭತ್ತೆಗಳನ್ನು ಹೆಚ್ಚಿಸಲು ರಾಜ್ಯ ಸರ್ಕಾರವನ್ನು ಒತ್ತಾಯಪೂರ್ವಕವಾಗಿ ಆಗ್ರಹಿಸುತ್ತೇನೆ.