ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಹಳ್ಳಿ ಹಕ್ಕಿ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಏ.19:- ರಾಜ್ಯ ಸರ್ಕಾರ ರಚನೆಯಾಗಿ 11 ತಿಂಗಳು ಕಳೆದರು ರಾಜ್ಯ ಅಭಿವೃದ್ಧಿ ಕಂಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ರಾಜ್ಯ ಸರ್ಕಾರದ ವಿರುದ್ದ ಆರೋಪ ಮಾಡಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಣವಂತ, ಆದರೆ ಜೆಡಿಎಸ್-ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿ ಹೃದಯವಂತ, ಆದ್ದರಿಂದ ತಾಯಿ ಹೃದಯ ಹೊಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಕುಮಾರಸ್ವಾಮಿ ಅವರು ಆಡು ಬಾಷೆಯಲ್ಲಿ ಮಾತನಾಡಿದ್ದರ ಬಗ್ಗೆ ಕ್ಷಮೆ ಕೇಳಿದ್ದರು, ಕಾಂಗ್ರೆಸ್ಸಿಗರು ಇನ್ನೂ ಮಾತು ನಿಲ್ಲಸಿಲ್ಲ, ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಾಂಗ್ರೆಸ್ ನಾಯಕರಾ ವಿರುದ್ದ ಗುಡುಗಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತು ಮಾತಿಗೂ ಕುಮಾರಸ್ವಾಮಿ ಬಗ್ಗೆ ಲೇವಡಿ ಮಾಡುತ್ತಿರುವುದು ಶೋಭೆ ತರುವುದಿಲ್ಲ ನೀವು ನಿಮ್ಮ ವರುಣಾ ಕ್ಷೇತ್ರದಲ್ಲಿ ಒಬ್ಬ ಮಹಿಳೆಯ ಸೀರೆಯ ಸೆರಗೂ ಎಳೆದರಲ್ಲ ಸ್ವಾಮಿ ನಾವು ಸುಮ್ಮನೇ ಇದ್ದವಲ್ಲ ಕ್ಷಮೆ ಕೇಳಿದ ಮೇಲೆ ಇನ್ನೇನು ನಿಲ್ಲಸಿ ಇಲ್ಲದಿದ್ದಲ್ಲಿ ನಾವು ಶುರು ಮಾಡುತ್ತೇವೆ ಎಂದು ಸಿದ್ದರಾಮಯ್ಯನವರಿಗೆ ಹೆಚ್.ವಿಶ್ವನಾಥ್ ಟಾಂಗ್ ನೀಡಿದರು.
ಬಳಿಕ ಮಾಜಿ ಸಚಿವ ಸಾ.ರಾ.ಮಹೇಶ್ ಬಹಿರಂಗ ಸಭೆಯಲ್ಲಿ ಬಾರಿ ಜನಸ್ತೋಮ ನೋಡಿ ಬಾವುಕರಾಗಿ ಮಾತನಾಡಿ ಈ ಬಾರಿ ನಮ್ಮ ನಾಯಕರಾದ ಕುಮಾರಣ್ಣ ಗೆಲ್ಲಲೇ ಬೇಕು, ನಾನೇ ಅಭ್ಯರ್ಥಿ ಎಂದು ಹೆಚ್ಚಿನ ಮತ ನೀಡಿ ಗೆಲ್ಲಿಸಿ ಎಂದುಮನವಿ ಮಾಡಿದರು.
ನಾನು ಕ್ಷೇತ್ರಕ್ಕೆ ಬರಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೆ ಕಾರಣ, ಎಂದರಲ್ಲದೆ ಶಾಸಕನಾಗಿ ಮಂತ್ರಿ ಮಾಡಿದ್ದು ಕುಮಾರಣ್ಣ, ಎಂದು ಕೈ ಮುಗಿದು ಪ್ರಾರ್ಥನೆ ಮಾಡಿದರು.
ಯಾವುತ್ತು ಭತ್ತದ ನಾಡು ಬರ ಕಂಡಿಲ್ಲ ಕಾಂಗ್ರೆಸ್ಸಿಗರು ಬಂದರೆ ಬರ ಬರುತ್ತೆ, ನನ್ನ ಸೋಲಿಸಲು ವಿಷದ ನಾಟಕವಾಡಿದರು. ಜನರಿಗೆ ಮರಳು ಮಾಡಿದ ಇವರು 11 ತಿಂಗಳಲ್ಲಿ ಒಂದೇ ಒಂದು ಗುಂಡಿ ಮುಚ್ಚಿಲ ಎಂದು ಶಾಸಕ ಡಿ.ರವಿಶಂಕರ್ ವಿರುದ್ದ ಗುಡುಗಿದರು.
ಪುರಸಭೆ ಮಳಿಗೆ ಕೊಡಿಸುತ್ತಿನಿ, ವರ್ಗಾವಣೆ ಮಾಡುಸುತ್ತೇನೆ ಎಂದು ಮೂರು ಲಕ್ಷ, ಐದು ಲಕ್ಷ ವಸೂಲಿ ಮಾಡಿದರಲ್ಲ ಅದು ಬಿಟ್ಟು ಅರ್ಕೇಶ್ವರ ದೇವಾಲಯದ ಮುಂದೆ ಬಿಕ್ಷೆ ಬೇಡಿ ಎಂದು ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿಯವರ ದೇಶಕ್ಕೆ ಉತ್ತಮ ಆಡಳಿತ ಕೊಟ್ಟಿದ್ದಾರೆ, ಆದ್ದರಿಂದ ಕೈ ಬಲ ಪಡಿಸಲು ಕುಮಾರಣ್ಣ ಅವರನ್ನು ಈ ಬಾರಿ ಅಧಿಕ ಮತಗಳನ್ನು ಕೊಟ್ಟು ಗೆಲ್ಲಿಸಿ ಎಂದರು.