ರಾಜ್ಯ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿಬಿಜೆಪಿ ವತಿಯಿಂದ ಪ್ರತಿಭಟನೆ

ಬೀದರ,ಫೆ.24: ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಹುಡಗಿ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು. ಜಿಲ್ಲಾಧಿಕಾರಿಗಳಿಗೆ ನೀಡಲಾದ ಜ್ಞಾಪನ ಪತ್ರದಲ್ಲಿ ರಾಜ್ಯ ಸರ್ಕಾರದಿಂದ ವರ್ಷ 2024-25 ಮುಂಗಡ ಪತ್ರದಲ್ಲಿ ದಲಿತರಿಗೆ ಮೀಸಲಿಟ್ಟ ರೂಪಾಯಿ11,44 ಕೋಟಿ SಅSP/ಖಿSP ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲು ವರ್ಗಾಯಿಸಿ ದಲಿತರ ಮೇಲೆ ಅನ್ಯಾಯ ಮಾಡಲಾಗಿದೆ.
ಸಿದ್ಧರಾಮಯ್ಯನವರು ಅಲ್ಪಸಂಖ್ಯಾತರಿಗೆ ರೂ.10,000 ಕೋಟಿ ಹಣವನ್ನು ವೆಚ್ಚ ಮಾಡಲು ಮಾತ್ರ ಯಾವ ಗ್ಯಾರಂಟಿಯೂ ಅಡ್ಡ ಬಂದಿಲ್ಲ. ಇವರಿಗೆ ದಲಿತರ ಹಿತಾಸಕ್ತಿಗಿಂತ ಓಟ ಬ್ಯಾಂಕ್ ರಾಜಕಾರಣವು ಸರ್ಕಾರಕ್ಕೆ ಆದ್ಯತೆಯಾಗಿರುವುದು ಶೋಚನಿಯ ಸಂಗತಿ. ಮೋರಾರ್ಜಿ ಶಾಲೆಯ ಅಭಿವೃದ್ದಿ ಮತ್ತು ಹೊಸ ಶಾಲೆಗಳ ಆರಂಭಕ್ಕೆ ಮೀಸಲಾದ ಹಣವು ಇತರ ಯೋಜನೆಗಳಿಗೆ ಬಳಕೆಯಾಗಿ ದಲಿತ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟವಾಡುತ್ತಿದ್ದಾರೆ.
ಇದಲ್ಲದೆ ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟ ಹಣವು ಕೂಡ ದುರ್ಬಳಕೆಯಾಗಿ ಉನ್ನತ ಶಿಕ್ಷಣದಿಂದ ದಲಿತ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಸಲುವಾಗಿ ಶಿಕ್ಷಣವನ್ನು ನಿರ್ಲಕ್ಷಿಸುತ್ತಿದ್ದಾರೆ.
ರಾಜ್ಯದಲ್ಲಿ ಕಳೆದ ಎಂಟು ತಿಂಗಳಿನಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಗೃಹ ನಿಮಾಣ ಯೋಜನೆ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಸಾವಿರಾರು ಮನೆಗಳನ್ನು ನಿರ್ಮಿಸಿ ಹಂಚುತ್ತಿದ್ದರೆ, ರಾಜ್ಯ ಸರ್ಕಾರದ ಯೋಜನೆಯ ಕೋಮಾ ಸ್ಥಿತಿಗೆ ತಲುಪಿದೆ.
ರೈತ ನಿಧಿ ಯೋಜನೆಯಲ್ಲಿ ದಲಿತ ಕುಟುಂಬದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವು ಸ್ಥಗಿತಗೊಂಡಿದೆ. ಹಾಗೂ ಕಿಸಾನ್ ಸಮ್ಮಾನ್ ಯೋಜನೆಗೆ ಹೆಚ್ಚುವರಿಯಾಗಿ ನೀಡುತ್ತಿದ್ದ ರೂ. 4000 ಗಳಿಗೂ ಕತ್ತರಿ ಪ್ರಯೋಗವಾಗಿದೆ. ಸಿದ್ಧರಾಮಯ್ಯನವರು ಬಾಯಿ ತೆಗೆದರೆ ದಲಿತ ಮತ್ತು ಆದಿವಾಸಿಗಳ ಕಲ್ಯಾಣದ ಬಗ್ಗೆ ಮಾತನಾಡುವುದಕ್ಕೆ ಮಾತ್ರ ಅವರ ಹಿತಾಸಕ್ತಿಯನ್ನು ಸಿಮೀತಗೊಳಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರಲ್ಲಿ ಉದ್ಯಮಶೀಲತೆ ಉತ್ತೆಜಿಸುವ ಯೋಜನೆಯನ್ನು ಕೈಗೊಳ್ಳಲು ರಾಜ್ಯ ಸರ್ಕಾರದ ಆಸಕ್ತಿಯಿಲ್ಲದಂತಾಗಿದೆ. ರಸ್ತೆ ಬದಿಯ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದ ಸ್ವ-ನಿಧಿ ಯೋಜನೆಗೆ ರಾಜ್ಯ ಸರ್ಕಾರವು ದಲಿತ ಉದ್ಯಮಿಗಳಿಗೆ ಪ್ರೋತ್ಸಾಹಧನವಾಗಿ ಬಡ್ಡಿಯಲ್ಲಿ ಪಾಲು ಕೊಡಬಹುದ್ದಿತ್ತು. ಆದರೆ ಅದರ ಕಡೆ ಗಮನವೇ ಕೊಟ್ಟಿಲ್ಲ.
ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಲ್ಲಿ ದಲಿತರಿಗೆ ಸ್ವಯಂ ಉದ್ಯೋಗ ನೀಡಲು ಉತ್ತೇಜನ ಕೊಡುತ್ತಿದೆ. ಆದರೆ ರಾಜ್ಯ ಸರ್ಕಾರದ ದಲಿತ ಉದ್ಯಮದಾರರನ್ನು ರೂಪಿಸಲು ಮತ್ತು ಉತ್ತೇಜಿಸಲು ಯಾವುದೇ ಆಸಕ್ತಿವಹಿಸಿಲ್ಲ ಮತ್ತು ಯಾವುದೇ ಕಾರ್ಯಕ್ರಮವನ್ನು ಬಜೆಟ್‍ನಲ್ಲಿ ಘೋಷಿಸಿಯೂ ಇಲ್ಲ.
ಜ್ಞಾಪನ ಪತ್ರದಲ್ಲಿ SಅSP/ಖಿSP ಹಣವನ್ನು ಕೂಡಲೇ ವಾಪಸ್ ನೀಡಬೆಕೆಂದು ಒತ್ತಾಯಿಸಿ, ಸಂವಿಧಾನ ಬದ್ದ ಕಲ್ಯಾಣ ಯೋಜನೆಗಳ ಹಣದ ದುರುಪಯೋಗ ನಿಲ್ಲಿಸಬೇಕು ಮತ್ತು ತಮ್ಮ ಸ್ವಾರ್ಥಕ್ಕೆ ದಲಿತರಿಗೆ ಅನ್ಯಾಯ ಮಾಡಬಾರದು ಎಂದು ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯಿಂದ ಆಗ್ರಹಿಸಿದ್ದಾರೆ.
ಜ್ಞಾಪನ ಪತ್ರದ ಸಲ್ಲಿಸುವ ಮೊದಲು ನಗರದ ಅಂಬೇಢ್ಕರ ವೃತ್ತದಲ್ಲಿ ನೂರಾರು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಂದ ರಸ್ತೆ ತಡೆ ಮಾಡಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಭಾರತೀಯ ಜನತಾ ಪಾರ್ಟೀಯ ಮುಖಂಡರು ಪ್ರತಿಭಟನಾರರನ್ನುದ್ದೇಶಿಸಿ ಮಾತನಾಡಿ ರಾಜ್ಯ ಸರ್ಕಾರದ ದಲಿತ ವಿರೋಧಿ ನೀತಿಯನ್ನು ಖಂಡಿಸಿದರು.
ಈ ಪ್ರತಿಭಟನೆಯಲ್ಲಿ ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟೀಯ ಅಧ್ಯಕ್ಷರಾದ ಸೋಮನಾಥ ಪಾಟೀಲ ಹುಡಗಿ ಸೇರಿದಂತೆ ಬೀದರ ಲೋಕಸಭಾ ಕ್ಷೇತ್ರದ ಪ್ರಭಾರಿ ಅರಹಂತ ಸಾವಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿರಪ್ಪಾ ಔರಾದೆ, ಕಿರಣ ಪಾಟೀಲ, ಮಾಧವರಾವ ಹುಸೂರೆ, ಬೀದರ ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಆಧ್ಯಕ್ಷ ಗಜೇಂದ್ರ ಕನಕಟಕರ್, ಬೀದರ ಜಿಲ್ಲಾ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಮಹೇಶ ಪಾಲಂ, ನಗರ ಘಟಕದ ಅಧ್ಯಕ್ಷ ಶಿಶಿ ಹೊಸಳ್ಳಿ, ಗ್ರಾಮಾಂತರ ಘಟಕದ ಅಧ್ಯಕ್ಷ ರಾಜೇಂದ್ರ ಪೂಜಾರಿ,ಶ್ರೀಮತಿ ಲುಂಬಿನಿ ಗೌತಮ, ಪ್ರಸನ್ನ ಲಕ್ಷ್ಮೀ ದೇಶಪಾಂಡೆ, ಸಂಗೀತಾ ಅಡಕೆ, ಮಹಾನಂದಾ ಕೋಟೆ, ಹೇಮಲತಾ ಜೋಶಿ, ಅಂಬವ್ವ, ರಾಜಕುಮಾರಿ, ಶ್ರೀಮತಿ ಶಂಕುತಲಾ ಬೆಲ್ದಾಳೆ, ಬುಡಾ ಮಾಜಿ ಅಧ್ಯಕ್ಷ ಬಾಬುರಾವ ಮದಕಟ್ಟಿ, ಬಾಬುವಾಲಿ, ಮಾಜಿ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ, ಬಸವರಾಜ ಆರ್ಯ, ರಾಜಕುಮಾರ ನೇಮತಾಬಾದ, ಗುರುನಾಥ ಜ್ಯಾಂತಿಕರ್, ಬಾಬುರಾವ ಮಲ್ಕಾಪೂರೆ, ಕುಶಾಲ ಪಾಟೀಲ ಗಾದಗಿ, ಬಸವರಾಜ ಪವಾರ, ರಾಜಕುಮಾರ ಚಿದ್ರಿ, ಶ್ರೀಕಾಂತ ಮೋದಿ, ಪ್ರಭು ಕುಂಬಾರವಾಡಾ, ವಿಕ್ರಮ ಮುದಾಳೆ, ಶಿವರಾಜ ಕುದುರೆ, ಗಣೇಶ ಭೋಸ್ಲೆ, ಅಶೋಕ ಪಾಟೀಲ, ವೀರೂ ದಿಗ್ವಾಲ್, ಸುಭಾಷ ಮಡಿವಾಳ, ಗುರುನಾಥ ಕೊಳ್ಳುರು, ಬಸವರಾಜ ಜೋಜನಾ, ಶ್ರೀನಿವಾಸ ಚೌಧರಿ ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.