
ಕಲಬುರಗಿ:ಸೆ.14: 2023-24 ನೇ ಸಾಲಿನ ಮುಂಗಾರು ಮಳೆಯ ಕೊರತೆಯಿಂದಾಗಿ ರಾಜ್ಯ ಸರ್ಕಾರವು ಕಲಬುರಗಿ ಜಿಲ್ಲೆಯ ಅನಾವೃಷ್ಟಿಯಿಂದ ತುತ್ತಾದ ಎಲ್ಲಾ 11 ತಾಲ್ಲೂಕುಗಳನ್ನು “ಬರಗಾಲ ಪ್ರದೇಶ” ವೆಂದು ಘೋಷಣೆ ಮಾಡಿದ ಪ್ರಯುಕ್ತ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಿದ್ಧತೆ ಸಭೆ ಜರುಗಿತು.
ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಸರ್ಕಾರದಿಂದ ಬರಗಾಲ ಎಂದು ಘೋಷಣೆಯಾದ ಹಿನ್ನಲೆಯಲ್ಲಿ ಬೆಳೆ ಸಮೀಕ್ಷೆ ಆಧಾರದ ಮೇಲೆ ಬರಗಾಲ ಸಮೀಕ್ಷೆ ಕೈಗೊಂಡು ಅದರ ವರದಿಯನ್ನು ಆದರಿಸಿ ಬೆಳೆ ಹಾನಿ ಕ್ಷೇತ್ರಕ್ಕನುಗುಣವಾಗಿ ಇನ್ ಪುಟ್ ಸಬ್ಸಿಡಿ ನೇರ ನಗದು ವರ್ಗಾವಣೆ ಮುಖಾಂತರ ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಬೇಕೆಂದರು.
ಕೃಷಿ, ಕಂದಾಯ, ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮರೋಪಾದಿಯಲ್ಲಿ ರೈತರ ಹೊಲಗಳಿಗೆ ಬೇಟಿನೀಡಿ ಮುಂಗಾರು ಹಂಗಾಮಿನ ಹಾನಿ ಕ್ಷೇತ್ರವನ್ನು ನೈಜವಾಗಿ ಸಮೀಕ್ಷೆ ಮಾಡಬೇಕೆಂದು ಮತ್ತು ವಸ್ತುಸ್ಥಿತಿ ಬಗ್ಗೆ ವರದಿಯಲ್ಲಿ ಬಿಂಬಿಸಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳು ತಿಳಿಸಿದರು.
ಬೆಳೆ ಸಮೀಕ್ಷೆಯನ್ನು ಕೈಗೂಳ್ಳುವಾಗ Suಠಿeಡಿvisoಡಿ ಐogiಟಿ ನಲ್ಲಿ ತಾಕುಗಳ ಸಮೀಕ್ಷಾ ಪ್ರಕ್ರಿಯೆಯನ್ನು ಅನೋಮೂದಿಸುವಾಗ ಬೆಳೆ ಛಾಯಾಚಿತ್ರಗಳನ್ನು ಗಮನಿಸಿ ಪರಿಶೀಲಿಸಿ ಯಾವುದೇ ನೂನ್ಯತೆಗಳು, ತಪು ತಡೆಗಳಾಗದಂತೆ ಅನುಮೋದಿಸುವುದು ಎಂದು ತಿಳಿಸಿದರು.
ಒಂದು ವೇಳೆ ಹೂಸದಾಗಿ ಇರುವ ತಾಲ್ಲೂಕುಗಳಲ್ಲಿ ಬೆಳೆ ಸಮೀಕ್ಷೆಯಲ್ಲಿ ಹಳ್ಳಿಗಳ ಒಂP ಹಾಗೂ Sಥಿ ಟಿo ಗಳ ಕುರಿತಂತೆ ತಾಂತ್ರಿಕ ದೋಷವಿದ್ದಲ್ಲಿ ಸಮಸ್ಯೆಯನ್ನು ಜಂಟಿ ಕೃಷಿ ನಿರ್ದೇಶಕಕರು ಕಲಬುರಗಿ, ಉಪ ನಿರ್ದೇಶಕರು ಭೂಮಾಪನಾ ಇಲಾಖೆ ಮತ್ತು ಸ್ಥಳಿಯ ತಹಸಿಲ್ದಾರರು ಹಾಗೂ ಸಹಾಯಕ ಕೃಷಿ ನಿರ್ದೇಶಕರ ಗಮನಕ್ಕೆ ತಂದು ಸಮಸ್ಯೆಗಳಿಗೆ ಉಪಸಮನ ಕಂಡುಕೂಳ್ಳಲು ನಿರ್ದೇಶಿಸಲಾಯಿತು
ಕಲಬುರಗಿ ಜಿಲ್ಲೆಯಲ್ಲಿ ಯಾವುದೇ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆವಿದ್ದಲ್ಲಿ ತಕ್ಷಣವೆ ಗ್ರಾಮೀಣ ಕುಡಿಯುವ ನೀರು ಸರಬುರಾಜು ಹಾಗೂ ನೈರ್ಮಲ್ಯ ಇಲಾಖೆ ಹಾಗೂ ಸ್ಥಳಿಯ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ತುರ್ತು ಕ್ರಮ ಕೈಗೂಂಡು ನೀರು ಪೂರೈಕೆ ವ್ಯವಸ್ಥೆಯನ್ನು ಬಗೆಹರಿಸಲು ತಿಳಿಸಿದರು. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳನ್ನು ಗುರುತಿಸಿ ಅಂಥಹ ಹಳ್ಳಿಗಳ ಯಾದಿಯನ್ನು ತಯಾರಿಸಿ ತೀರ್ವ ಗಮನಹರಿಸಿ ನೀರಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಲು, ಸಭೆಯಲ್ಲಿದ್ದ ಗ್ರಾಮೀಣ ಕುಡಿಯುವ ನೀರು ಸರಬುರಾಜು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಲಬುರಗಿ ನಗರಕ್ಕೆ ಸಂಬಂಧಿಸಿದಂತೆ ಯಾವುದೇ ಸಂದರ್ಭದಲ್ಲಿ ಕುಡಿಯುವ ನೀರಿನ ಪೂರೈಕೆ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿ ಸೂಕ್ತ ತಯಾರಿಗಳನ್ನು ಮಾಡಿಕೂಂಡು ಸನ್ನದರಾಗಿರಲು ಆಯುಕ್ತರು ನಗರ ಪಾಲಿಕೆ ರವರಿಗೆ ತಿಳಿಸಿದರು.ಜಿಲ್ಲೆಯಲ್ಲಿ ಧನ ಕರುಗಳ ಸಂಖ್ಯೆಗೆ ಸರಿ ಹೂಂದುವಷ್ಟು ಮೇವಿನ ಲಭ್ಯತೆ ಕುರಿತಂತೆ ಚರ್ಚಿಸಿ ಉಪ ನಿರ್ದೇಶಕರು ಪಶುಸಂಗೋಪನಾ ಇಲಾಖೆ ಇವರಿಗೆ ಗ್ರಾಮೀಣ ಪ್ರದೇಶಗಳಿಗೆ ಭೇಟಿನೀಡಿ ಪರಿಶೀಲಿಸಿ ಮೇವು ಲಭ್ಯತೆಯ ನೈಜಸ್ಥಿತಿಗತಿಗಳನ್ನು ಅವಲೋಕಿಸಿ ವರದಿಯನ್ನು ಸಲ್ಲಿಸಲು ಹಾಗೂ ಮೇವಿನ ಕೊರತೆಯಾಗದಂತೆ ಮುನ್ನಚ್ಚರಿಕೆ ವಹಿಸಲು ಸೂಚಿಸಿದರು.
ಸಭೆಯಲ್ಲಿ ಕೃಷಿ ಇಲಾಖೆ, ಕಂದಾಯ ಇಲಾಖೆ, ಪಶುಸಂಗೋಪನೆ ಇಲಾಖೆ, ಗ್ರಾಮೀಣ ಹಾಗೂ ನಗರ ನೀರು ಸರಬುರಾಜು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.