ರಾಜ್ಯ ಸರಕಾರ ಸಹಭಾಗಿತ್ವದಲ್ಲಿ ಬಳ್ಳಾರಿ ರೈಲ್ವೆ ಯೋಜನೆಗಳ ಜಾರಿಗಾಗಿ ಸಚಿವರಿಗೆ ಒತ್ತಾಯ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.17: ರಾಜ್ಯ ಸರಕಾರದ ಸಹಭಾಗತ್ವದಲ್ಲಿ ದೊರೆಯಬೇಕಾಗಿರುವ ಬಳ್ಳಾರಿ ಭಾಗದ ರೈಲ್ವೆ ಯೋಜನೆಗಳ ಕಾಮುಗಾರಿಗಳನ್ನು ಕೂಡಲೇ ಆರಂಭಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ  ಬಿ. ನಾಗೇಂದ್ರರನ್ನು ಕರ್ನಾಟಕ ರಾಜ್ಯ ರೈಲ್ವೆ ಕೀಯ ಸಮಿತಿಯ ನಿಯೋಗ ಒತ್ತಾಯಿಸಿದೆ.
ಸಮಿತಿಯ ಅಧ್ಯಕ್ಷ ಕೆ.ಎಂ. ಮಹೇಶ್ವರ ಸ್ವಾಮಿ ಮತ್ತವರ ತಂಡ ನಿನ್ನೆ ಸಚಿವರಿಗೆ ಮನವಿ ಸಲ್ಲಿಸಿ. ನಗರದ ರೇಡಿಯೋಪಾರ್ಕ ರೈಲ್ವೆಗೇಟಿನ ಮೇಲುತುವೆ ಕಾಮಗಾರಿ ರೈಲ್ವೆ ಇಲಾಖೆಯಿಂದ ಪೂರ್ಣಗೊಂಡು ಹಲವು ವರ್ಷಗಳೇ ಕಳೆದಿವೆ. ರಾಜ್ಯ ಸರಕಾರದಿಂದ ಇದಕ್ಕೆ ಸಂಪರ್ಕ ರಸ್ತೆ ಕಲ್ಪಿಸುವ ಕಾಮಗಾರಿ ಆಗಬೇಕಿದೆ.
ಇನ್ನು  ದುರ್ಗಮ್ಮ ಗುಡಿ ಹತ್ತಿರದ ಕೆಳ ಸೇತುವೆಯ ಮತ್ತೊಂದು ದ್ವಿಪಥ ರಸ್ತೆ ಕಾಮಗಾರಿಗೆ ಬುಡಾ ಹಣ ನೀಡಿದೆ ಆದರೆ ಕಾಮಗಾರಿ ಆರಂಭಗೊಂಡಿಲ್ಲ.
ಸುಧಾಕ್ರಾಸ್ ರೈಲ್ವೆ ಗೇಟಿಗೆ ಮೇಲ್‌ಸೇತುವೆ ನಿರ್ಮಾಣದ ಕಾಮಗಾರಿ ಕೇಂದ್ರ ಹಾಗೂ ರಾಜ್ಯ ಸರಕಾರದ 50:50 ಅನುಪಾತದಲ್ಲಿ ನಿರ್ಮಾಣವಾಗಬೇಕಾಗಿದ್ದು, ಕಾಮಗಾರಿ ಆರಂಭಕ್ಕೆ ರಾಜ್ಯ
ಸರಕಾರದಿಂದ ಸೂಕ್ತ ಕ್ರಮಕೈಗೊಳ್ಳಬೇಕು.
ಬಳ್ಳಾರಿ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ನೂತನವಾಗಿ ಬಳ್ಳಾರಿ ಬೈಪಾಸು ರೈಲ್ವೆ ನಿಲ್ದಾಣದ ಪ್ರಸ್ತಾವನೆಯನ್ನು ರೈಲ್ವೆ ಇಲಾಖೆಗೆ ರೈಲ್ವೆ ಕಿಯಾ ಸಮಿತಿ ನೀಡಿದ್ದು ಈ ಯೋಜನೆಯ ಅನುಷ್ಠಾನಕ್ಕೆ ಸಹ ರಾಜ್ಯಸರಕಾರದಿಂದ ಕೇಂದ್ರ ಸರಕಾರಕ್ಕೆ ಸೂಕ್ತ ಶಿಫಾರಸ್ಸು ಸೇರಿದಂತೆ ಜಿಲ್ಲೆಯಲ್ಲಿ ಆಗಬೇಕಾಗಿರುವ ರೈಲ್ವೇ ಕಾಮಗಾರಿಗಳಿಗೆ ತಾವು ಮುಖ್ಯ ಮಂತ್ರಿಗಳಿಂದ ಒತ್ತಡ ತಂದು ಕೈಗೊಳ್ಳಬೀಕು ಎಂದಿದ್ದಾರೆ.
ಈ ವೇಳೆ ಸಮಿತಿಯ ಪದಾಧಿಕಾರಿಗಳಾದ ಕೋಳೂರು ಚಂದ್ರಶೇಖರಗೌಡ, ಹೆಚ್‌.ಕೆ. ಗೌರಿ ಶಂಕರ, ಬಿ.ಎಂ.ಎಸ್ವಾಮಿ, ಜಾಲಿಹಾಳ್‌ ಶ್ರೀಧರಗೌಡ, ಕೆ.ಎಂ.ಕೊಟ್ರೇಶ ಮೊದಲಾದವರು ಇದ್ದರು.