ರಾಜ್ಯ ಸರಕಾರಿ ನೌಕರರ ಈಜು ಸ್ಪರ್ಧೆ :ರೇಖಾ ಪದಕ ಸಾಧನೆ

ಯಾದಗಿರಿ, ಅ.30 : ರಾಜ್ಯ ಸರಕಾರಿ ನೌಕರರ ಸಂಘ ವತಿಯಿಂದ ತುಮಕೂರಿನಲ್ಲಿ ಅ. 27ರಿಂದ ನಡೆದ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ರೇಖಾ ಯಾನಿ 3 ಕಂಚಿನ ಪದಕ ಸಾಧನೆ ಮಾಡಿದ್ದಾರೆ

ಕ್ರೀಡಾಕೂಟದಲ್ಲಿ ಯಾದಗಿರಿ ಸರಕಾರಿ ನೌಕರರ ಸಂಘದ ವತಿಯಿಂದ ಭಾಗವಹಿಸಿ ಸ್ಪರ್ಧಿಸಿದ್ದ ಪಶು ಸಂಗೋಪನಾ ಇಲಾಖೆಯ ರೇಖಾ ಯಾನಿ ಅವರು, 100ಮೀ. ಬ್ಯಾಕ್ ಸ್ಟ್ರೋಕ್ ಮತ್ತು 50ಮೀ. ಹಾಗೂ 100ಮೀ ಬಟರ್ ಫ್ಲೈ ನಲ್ಲಿ ಕಂಚಿನ ಪದಕ ವಿಜೇತರಾಗಿದ್ದಾರೆ.