ರಾಜ್ಯ ಸರಕಾರದ ವಿರುದ್ಧ ಜೋಶಿ ಕಿಡಿ ಪ್ರಜ್ವಲ್ ಓಡಿ ಹೋಗುವಾಗ ಕತ್ತೆ ಕಾಯ್ತಿದ್ರಾ: ಜೋಶಿ ಪ್ರಶ್ನೆ

ಕಲಬುರಗಿ,ಮೇ 23: ಪ್ರಜ್ವಲ್ ರೇವಣ್ಣ ಕ್ಲಿಪಿಂಗ್ ಪೆನ್ ಡ್ರೈವ್ ಏಪ್ರಿಲ್ 21ರಂದು ಹೊರಬಂದರೂ ಏ.27ರಂದು ದೇಶ ಬಿಟ್ಟು ಹೋಗಿದ್ದಾರೆ ಎಂದ ಮೇಲೆ ಅಲ್ಲಿಯವರೆಗೆ ರಾಜ್ಯ ಸರಕಾರ ಕತ್ತೆ ಕಾಯುತ್ತಿತ್ತಾ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ತರಾಟೆಗೆ ತೆಗೆದುಕೊಂಡರು.
ಈಶಾನ್ಯ ವಲಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಪರವಾಗಿ ಪ್ರಚಾರ ಕೈಗೊಳ್ಳಲು ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈಗ ಪ್ರಜ್ವಲ್ ರೇವಣ್ಣ ಪಾಸ್ ಪೆÇೀರ್ಟ್ ರದ್ದುಗೊಳಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಬದಲು ಆಗಲೇ ಅವರನ್ನು ಬಂಧಿಸಬಹುದಿತ್ತಲ್ಲ ಎಂದರು.
ಪ್ರಜ್ವಲ್ ಪಾಸ್ ಪೆÇೀರ್ಟ್ ರದ್ದತಿಗಾಗಿ ಪ್ರಧಾನ ಮಂತ್ರಿಗಳಿಗೆ ಸಿಎಂ ಎರಡನೇ ಬಾರಿ ಪತ್ರ ಬರೆದ ವಿಚಾರ ಕುರಿತು ಪ್ರಸ್ತಾಪಿಸಿದ ಅವರು,
ಪಾಸ್ ಪೆÇೀರ್ಟ್ ರದ್ದುಪಡಿಸಲು ಅದರದೇ ಆದ ಪ್ರಕ್ರಿಯೆಗಳಿವೆ. ಡಿಪೆÇ್ಲೀಮ್ಯಾಟಿಕ್ ಪಾಸ್ ಪೆÇೀರ್ಟ್ ರದ್ದತಿಗೆ ನ್ಯಾಯಾಲಯದಲ್ಲಿ ಫೈಲ್ ಮಾಡಲಾಗಿದೆ. ಹೀಗಿರುವಾಗ ಆ ಕುರಿತು ಮಾತನಾಡುವುದೇ ಸರಿಯಲ್ಲ ಎನ್ನುವ ಅರ್ಥದಲ್ಲಿ ಅಚ್ಚರಿ ವ್ಯಕ್ತಪಡಿಸಿದರು.
ಹೊರ ದೇಶಕ್ಕೆ ಓಡಿ ಹೋದವರನ್ನು ತರುವುದಕ್ಕೆ ಅದರದೇ ಆದ ಪ್ರಕ್ರಿಯೆಗಳಿವೆ.
ಭಾರತ ಸರಕಾರ ಕಾನೂನು ಪ್ರಕಾರ ಏನು ಮಾಡಬೇಕೋ ಮಾಡುತ್ತಿದೆ. ರಾಜ್ಯ ಸರಕಾರಕ್ಕೆ ಸಹಕಾರ ನೀಡಲು ಕೇಂದ್ರ ತಯಾರಿದೆ ಎಂದರು.
ಪತ್ರ ಬರೆದ ತಕ್ಷಣ ಪಾಸ್ ಪೆÇೀರ್ಟ್ ರದ್ದು ಆಗಬೇಕು ಅಂತಲ್ಲ, ಇದನ್ನು ಬಿಜೆಪಿ ಮೇಲೆ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಒಕ್ಕಲಿಗ ಸಮುದಾಯದ ಓಟ್ ಮೇಲೆ ಕಣ್ಣಿಟ್ಟು ಅಲ್ಲಿ ಚುನಾವಣೆ ಮುಗಿಯುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಪ್ರಜ್ವಲ್ ವಿಚಾರಣೆ ಎದುರಿಸಲೇಬೇಕು ಎಂದು ವಾದಿಸಿದರು.
ಪ್ರಜ್ವಲ್ ತಪ್ಪು ಮಾಡಿದ್ದರೆ ಕಠಿಣ ಕ್ರಮ ಆಗಲೇಬೇಕು. ಇದರಲ್ಲಿ ಯಾವುದೇ ಅನುಕಂಪ ಇಲ್ಲವೇ ಇಲ್ಲ. ಕರ್ನಾಟಕ ಸರಕಾರ ಇದರಲ್ಲಿ ತನಿಖೆಗಿಂತ ಹೆಚ್ಚು ರಾಜಕಾರಣ ಮಾಡಲು ಹೊರಟಿದೆ ಎಂದು ಟೀಕಿಸಿದರು.
ನಾನು ಕೇಳುವ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವ ಇದುವರೆಗೂ ಉತ್ತರ ಕೊಡಲು ಆಗುತ್ತಿಲ್ಲ ಎಂದು ಸಹ ಲೇವಡಿ ಮಾಡಿದರು.