
ಸಂಜೆವಾಣಿ ವಾರ್ತೆ
ಹೊಸಪೇಟೆ, ಏ.04: ಮಾರ್ಚ್25ರಂದು ರಾಜ್ಯಸಚಿವ ಸಂಪುಟ ಒಳ ವೀಸಲಾತಿ ಹಂಚಿಕೆಯ ನಿರ್ಣಯ ಕುರಿತು ಮಾಡಿರುವ ಶಿರ್ಫಾರಸ್ತುಗಳನ್ನು ಅನುಷ್ಠಾನ ಗೊಳಿಸದಂತೆ ಬಂಜಾರ ಸೇವಾ ಸಂಘ ರಾಜ್ಯಪಾಲರನ್ನು ಆಗ್ರಹಿಸಿದೆ.
ಈ ಕುರಿತು ಹೊಸಪೇಟೆಯ ಪುನೀತರಾಜಕುಮಾರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸುಪ್ರೀಂಕೋರ್ಟ್ ತೀರ್ಪನ ವಿರುದ್ದವಾಗಿ ಪರಿಶಿಷ್ಟ ಒಳ ಮೀಸಲಾತಿ ವಿಭಜಿಸಿದ ಕ್ರಮ ತಡೆಯಬೇಕು, ಒಳ ಮೀಸಲಾತಿಯಲ್ಲಿ ಸಚಿವ ಸಂಪುಟ ವಸ್ತುನಿಷ್ಠವಾಗಿ ಅಧ್ಯಯನವಾಗಬೇಕು, ರಾಜ್ಯ ಸರ್ಕಾರದ ಅನಗತ್ಯ ಹಸ್ತಕ್ಷೇಪ ತಡೆಯಬೇಕು, ಶಿವಮೊಗ್ಗದ ಹೋರಾಟಗಾರರ ಮೇಲೆ ದಾಖಲಿಸಿದ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಭೋವಿ ಸಮಾಜದ ಡಿ.ವೆಂಕಟರಮಣ, ತೃಜಸ್ವಿನಾಯ್ಕ, ಮಿಟ್ಯಾನಾಯ್ಕ,ಕೃಷ್ಣಾನಾಯ್ಕ, ಗೋವಿಂದ ನಾಯ್ಕ್, ರಾಮಜೀನಾಯ್ಕ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಹೊಸಪೇಟೆ ತಹಶಿಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.