ರಾಜ್ಯ ವೃತ್ತಿಛಾಯಾಗ್ರಾಹಕ ಸಂಘಟನೆಗಳ ಒಕ್ಕೂಟದ ಲೋಕಾರ್ಪಣೆ

ದಾವಣಗೆರೆ.ಫೆ.೨೦: ಕರ್ನಾಟಕ ರಾಜ್ಯ ವೃತ್ತಿ ಛಾಯಾಗ್ರಾಹಕ ಸಂಘಟನೆಗಳ ಒಕ್ಕೂಟದ ಲೋಕಾರ್ಪಣೆ ಕಾರ್ಯಕ್ರಮವನ್ನು ಫೆ. ೨೧ ರ ಬೆಳಗ್ಗೆ ೧೧ ಗಂಟೆಗೆ ಬಿಐಇಟಿ ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ ಕಲ್ಚರಲ್ ಸೆಂಟರ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ  ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಛಾಯಾಗ್ರಾಹಕ  ಸಂಘಟನೆಗಳು ಸಾಕಷ್ಟು ಇದ್ದು, ಸಂಘಗಳ ಒಕ್ಕೂಟ ಇರಲಿಲ್ಲ. ಎಲ್ಲಾ ಜಿಲ್ಲಾ ಸಂಘದಿಂದ ಒಬ್ಬರಂತೆ ಪ್ರತಿನಿಧಿಗಳನ್ನು  ಆಯ್ಕೆ ಮಾಡಿ, ಒಕ್ಕೂಟಕ್ಕೆ ಕಳುಹಿಸಲಾಗುವುದು. ತಾಲ್ಲೂಕು ಸದಸ್ಯತ್ವ ಹೊಂದಿದವರು ರಾಜ್ಯ ಸದಸ್ಯತ್ವ ಹೊಂದಿದಂತಾಗುತ್ತದೆ ಎಂದು ಒಕ್ಕೂಟದ ಕುರಿತು ತಿಳಿಸಿದರು.ಒಕ್ಕೂಟದ ಲೋಕಾರ್ಪಣೆ ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ನೆರವೇರಿಸಲಿದ್ದಾರೆ. ಒಕ್ಕೂಟದ ಅಧ್ಯಕ್ಷ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ದೂಡಾ ಅಧ್ಯಕ್ಷ ಎ.ವೈ. ಪ್ರಕಾಶ್ ಹಾಗೂ ಫೋಟೋಗ್ರಾಫರ್ ವೆಲ್ ಫೇರ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಧಾನ  ಕಾರ್ಯದರ್ಶಿ ಸುನೀಲ್ ಕುಮಾರ್ ಸಿಂಗ್ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಛಾಯಾಗ್ರಾಹಕರಾದ  ವಿಜಯ್ ಜಾಧವ್ , ಜಿ.ಎಸ್. ಬಾಬು, ಪ್ರದೀಪ್, ವಿಜಯ ಅರಕಲಗೂಡು, ಹೆಚ್.ಕೆ.ಸಿ. ರಾಜು, ಕೆ.ಪಿ. ನಾಗರಾಜ್, ಶ್ರೀನಾಥ್ ಅಂಗಡಿ, ಶಿಕಾರಿ ಶಂಭು, ಕಿರಣ್, ಬಸವರಾಜ್ ಇನ್ನಿತರರಿದ್ದರು.