ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿಬಿ.ಎಸ್.ಪಾಟೀಲರಿಗೆ ಅಸ್ಕಿ ಪೌಂಡೇಶನದಿಂದ ಸನ್ಮಾನ

ತಾಳಿಕೋಟೆ:ಜೂ.11: ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ(ಪಡೇಕನೂರ) ಅವರಿಗೆ ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರು ಕೊಣ್ಣೂರ ಗ್ರಾಮಸ್ಥರ ಪರವಾಗಿ ಶನಿವಾರರಂದು ಕೊಣ್ಣೂರ ಗ್ರಾಮಕ್ಕೆ ಬೆಟ್ಟಿ ನೀಡಿದ ಸಂದರ್ಬದಲ್ಲಿ ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಗೌರವಿಸಿದರು.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ(ಪಡೇಕನೂರ) ಅವರು ಕೊಣ್ಣೂರ ಗ್ರಾಮದಿಂದ ಸಂಪರ್ಕ ರಸ್ತೆಗಳಾದ ವಡವಡಗಿ, ಪಡೇಕನೂರ, ಬ್ಯಾಕೋಡ ರಸ್ತೆಗಳ ಅಭಿವೃದ್ದಿ ಕಾಮಗಾರಿಯನ್ನು ಪರಿಶೀಲಿಸಿದರಲ್ಲದೇ ಇದೇ ಸಮಯದಲ್ಲಿ ಉಪಸ್ಥಿತ ಪಂಚಾಯತ್ ರಾಜ್ಯ ಇಂಜನಿಯರಿಂಗ್ ವಿಭಾಗದ ಅಧಿಕಾರಿ ನಬಿಲಾಲ್ ಮತ್ತು ಲೋಕೋಪಯೋಗಿ ಇಲಾಖೆಯ ಎಇಇ ಆರ್.ಎಂ.ಹುಂಡೇಕಾರ ಅವರಿಂದ ಮಾಹಿತಿ ಪಡೆದುಕೊಂಡರಲ್ಲದೇ ಉತ್ತಮ ರೀತಿಯಿಂದ ಕಾಮಗಾರಿ ನಿರ್ವಹಣೆಯಾಗಲಿ ಎಂದು ಸಲಹೆ ನೀಡಿದರು.

ಈ ಸಮಯದಲ್ಲಿ ತಾಪಂ ಇಓ ಬಸವಂತ್ರಾಯಗೌಡ ಬಿರಾದಾರ, ಮುಖಂಡರುಗಳಾದ ಬಸನಗೌಡ ಹಡಲಗೇರಿ, ನಿವೃತ್ತ ಶಿಕ್ಷಕ ಜಿ.ಜಿ.ಅಸ್ಕಿ, ಮುದೇಪ್ಪಗೌಡ ಹಡಲಗೇರಿ, ಗ್ರಾಂಪಂ ಅದ್ಯಕ್ಷ ಶಂಕರಗೌಡ ಲಿಂಗದಳ್ಳಿ, ಶಿವನಗೌಡ ತಾಳಿಕೋಟಿ, ಬುಡ್ಡೇಸಾಬ ಟಕ್ಕಳಕಿ, ಅಶೋಕ ಕೇಂಭಾವಿ, ಮಹ್ಮದ ವಾಲಿಕಾರ, ರಾಮನಗೌಡ ಅಂಗಡಗೇರಿ, ಸಿ.ಎಸ್.ಪಾಟೀಲ, ಶಂಕರಗೌಡ ಹಿಪ್ಪರಗಿ, ಮುತ್ತುಗೌಡ ಹಿಪ್ಪರಗಿ, ಗುರಣ್ಣ ಹತ್ತೂರ, ವಿರೇಶಗೌಡ ಅಸ್ಕಿ, ಶಂಕರಗೌಡ ಅಸ್ಕಿ, ಯಲ್ಲಪ್ಪ ಮಾದರ, ಮಹೇಶ ಅಸ್ಕಿ, ಶಿವನಗೌಡ ಚೌದ್ರಿ, ಮೊದಲಾದವರು ಇದ್ದರು.