ರಾಜ್ಯ ಯುವ ಪ್ರಶಸ್ತಿಗೆ ಆಯ್ಕೆ

ಮುದ್ದೇಬಿಹಾಳ:ಜ.17: ಪಟ್ಟಣದ ಪಿಲೇಕೆಮ್ಮ ನಗರದ ಸಮಾಜ ಸೇವಕ ಪ್ರಶಾಂತ ಕಾಳೆಯವರು 2022-23ನೇ ಸಾಲಿನ ರಾಜ್ಯ ಯುವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಯುವ ಒಕ್ಕೂಟ ಬೆಂಗಳೂರ ಹಾಗೂ ದಕ್ಷೀಣ ಕನ್ನಡ ಜಿಲ್ಲೇಯ ಕಡಪಾ ತಾಲೂಕಿನಲ್ಲಿ ದಿ, 18 ಬುಧವಾರದಂದು ಹಮ್ಮಿಕೊಂಡಿರುವ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಹಾಗೂ ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ, ಎಸ್ ಬಾಲಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.