ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ

ದಾವಣಗೆರೆ.ಜ.೧೧; ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ  ಚುನಾವಣೆ ನಡೆಯಲಿದ್ದು ದಾವಣಗೆರೆ ಜಿಲ್ಲೆಯಲ್ಲಿ ನಾಳೆ ಬೆಳಿಗ್ಗೆ 9 ರಿಂದ ಸಂಜೆ 4 ರ ವರೆಗೆ ನಡೆಯಲಿರುವ ಚುನಾವಣೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಯ್ಯದ್ ಖಾಲಿದ್ ಅವರು ಸಹ ಸ್ಪರ್ಧಿಸಿದ್ದಾರೆ. ಕೋವಿಡ್  19 ರ ಕಾರಣದಿಂದಾಗಿ ಇದೇ  ಮೊದಲ ಬಾರಿಗೆ ಆನ್ಲೈನ್ ನಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಖಾಲಿದ್ ಯುವ ಕಾಂಗ್ರೆಸ್ ನ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶಿಸಿರುವ ಅವರು ಯುವ ಕಾಂಗ್ರೆಸ್ ನ ರಾಷ್ಟ್ರೀಯ ಸಂಚಾಲಕರಾಗಿ ದೇಶದ ವಿವಿಧ ರಾಜ್ಯ ಗಳಾದ ಗೋವಾ, ತೆಲಂಗಾಣ, ಗುಜರಾತ್, ದೆಹಲಿ ಸೇರಿದಂತೆ ಮತ್ತಿತರ ರಾಜ್ಯಗಳ ಚುನಾವಣೆಯಲ್ಲಿ ಉಸ್ತುವಾರಿಯಾಗಿ ದೇಶಾದ್ಯoತ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಪಕ್ಷದ ಬಲವರ್ಧನೆಗೆ ಹಗಲು ರಾತ್ರಿ ಶ್ರಮಿಸಿ ಪಕ್ಷವನ್ನು ಸಂಘಟಿಸುತ್ತಿದ್ದಾರೆ. ಯುವ ಅಧ್ಯಕ್ಷರ ಚುನಾವಣೆ ಯಲ್ಲಿ ಸ್ಪರ್ಧಿಸುತ್ತಿರುವ ಉಳಿದ ಅಭ್ಯರ್ಥಿ ಗಳಿಗೆ ರಾಜ್ಯದ  ಉನ್ನತ ನಾಯಕರ ಬೆಂಬಲವಿದೆ. ಯಾವುದೇ ಪ್ರಭಾವಿ ಮುಖಂಡರ ಕೃಪೆ ಇಲ್ಲದೆ ನಿಷ್ಠಾವಂತ ಕಾರ್ಯಕರ್ತರನ್ನು ನಂಬಿ ಈ ಚುನಾವಣೆ ಯಲ್ಲಿ ಸ್ಪರ್ಧಿಸುತ್ತಿರುವ  ಖಾಲಿದ್ ಹಾಗೂ ಭವ್ಯ ಕೆ ಆರ್ ಇವರು ಪ್ರಭಾವಿ ರಾಜಕಾರಣಿ ಗಳ ಮಕ್ಕಳ ಸ್ಪರ್ಧೆ ಎದುರು ಸಾಮಾನ್ಯ ಹಾಗೂ ಬಡ ಕುಟುಂಬ ಗಳ ಅಭ್ಯರ್ಥಿ ಗಳು ಯಾವ ರೀತಿ ಸ್ಪರ್ಧೆಯೊಡ್ಡುತ್ತಾರೆ ಎಂಬುದು ನಿಗೂಢ? ಮಧ್ಯ ಕರ್ನಾಟಕ ದಿಂದ ಏಕೈಕ ಅಭ್ಯರ್ಥಿ ಖಾಲಿದ್ ಆಗಿದ್ದು ಹೈದರಬಾದ್ ಕರ್ನಾಟಕದಿಂದ ಖರ್ಗೆ ಬೆಂಬಲಿಗ ಸಂದೀಪ್ ನಾಯ್ಕ್,ದಕ್ಷಿಣ ಕನ್ನಡ ದಿಂದ ಮಿಥುನ್ ರೈ,(ಲೋಕಸಭಾ ಕ್ಷೇತ್ರದ ಪರಾಜೀತ ಅಭ್ಯರ್ಥಿ)  ಬೆಂಗಳೂರು ವಿಭಾಗದಿಂದ ಶಾಸಕ ಹ್ಯಾರಿಸ್ ಪುತ್ರ ನಲಪಾಡ್, ಎನ್ ಎಸ್ ಯು ಐ ರಾಜ್ಯಾಧ್ಯಕ್ಷರಾದ ಮಂಜುನಾಥ್ ಎಸ್,ಮಾಜಿ ಮಂತ್ರಿಗಳಾದ ಸೀತಾರಾಮ್ ಪುತ್ರ ಎಂ ಎಸ್ ರಕ್ಷಾರಾಮಯ್ಯ,ಇಂಥ ಪ್ರಭಾವಿ ನಾಯಕರ ಬೆಂಬಲದ ಮದ್ಯೆ ಸಾಮಾನ್ಯ ಕಾರ್ಯಕರ್ತ ರಾದ ಖಾಲಿದ್ ಹಾಗೂ ಭವ್ಯ ಕೆ ಆರ್ ಸ್ಪರ್ಧೆಯಲ್ಲಿದ್ದಾರೆ.