ರಾಜ್ಯ ಯುವಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಪ್ರವಾಸ: ಯುವಕರಿಗೆ ತರಬೇತಿ ಶಿಬಿರ: ರಕ್ಷಾ‌ ರಾಮಯ್ಯ,

ಹರಪನಹಳ್ಳಿ.ಮಾ.೨೨;  ಶೀಘ್ರದಲ್ಲಿ ಹರಪನಹಳ್ಳಿಯಲ್ಲಿ ಯುವಕರಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುವುದೆಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಹೇಳಿದರು,

ಪಕ್ಷ ಸಂಘಟನೆಯ ಸಲುವಾಗಿ ನೂತನ ವಿಜಯನಗರ ಜಿಲ್ಲೆಗೆ ತೆರಳುತ್ತಿರುವ ಹಿನ್ನೆಲೆ ಮಾರ್ಗಮಧ್ಯದಲ್ಲಿ ಪಟ್ಟಣದ ಆಚಾರ್ಯ ಲೇಔಟ್ ನಲ್ಲಿರು ಕೆಪಿಸಿಸಿ ವಕ್ತಾರ ಹಾಗೂ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರ ನಿವಾಸಕ್ಕೆ ಆಗಮಿಸಿದಾಗ  ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ಧರಾಮಯ್ಯ ಬಣ, ಡಿ.ಕೆ.ಶಿವಕುಮಾರ್ ಬಣ, ಹೆಚ್.ಕೆ.ಪಾಟೀಲ್ ಬಣ ಎಂದು ಹೇಳಲಾಗುತ್ತದೆಲ್ಲಲಾ   ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಕಾಂಗ್ರೆಸ್‌ನಲ್ಲಿ ಯಾವುದೇ ಬಣವಿಲ್ಲ ಇರುವುದೊಂದೇ ಬಣ ಅದು ಕಾಂಗ್ರೆಸ್ ಬಣ ಎಂದು ಸ್ಪಷ್ಟನೆ ನೀಡಿದರು.
ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವುದು ಮತ್ತು ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ತೆರೆದಿಡುವುದು ಹಾಗೂ ವೈಫಲ್ಯ  ನಮ್ಮ ಗುರಿ. ಶೀಘ್ರದಲ್ಲೇ ನಮ್ಮೂರ ಮಹಿಳಾ ಸಾಧಕರು ಎನ್ನುವ ಶಿರ್ಷಿಕೆಯಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಟಿ.ಭರತ್ ಮಾತನಾಡಿ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಯ ಭ್ರಷ್ಟಾಚಾರ ಮತ್ತು ವೈಫಲ್ಯವನ್ನು ಜನರಮುಂದೆ ತೆರೆದಿಟ್ಟು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಬಿಜೆಪಿಯನ್ನು ಈ ರಾಜ್ಯದಲ್ಲಿ ಬುಡಸಮೇತ ಕಿತ್ತೊಗೆಯಲಾಗುವುದು 150ಕ್ಕೂ ಹೆಚ್ಚು ಸೀಟ್ ಗಳನ್ನು ಪಡೆದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.

ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಜಿ.ಪಂ ಸದಸ್ಯ ಹೆಚ್.ಬಿ.ಪರಶುರಾಮಪ್ಪ,  ಮಹಿಳಾ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ, ಮಾಜಿ ಪುರಸಭಾ ಅಧ್ಯಕ್ಷ ಹೆಚ್ ಕೆ ಹಾಲೇಶ್, ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ ಶಶಿಧರ್ ಪೂಜಾರ್, ಟಿಎಪಿಎಂಎಸ್ ಅಧ್ಯಕ್ಷ ಪಿ.ಪ್ರೇಮ್ ಕುಮಾರ್, ಪಿ ಎಲ್ ಡಿ ಬ್ಯಾಕ್ ಅಧ್ಯಕ್ಷ ಮುತ್ತಗಿ ಸಾಬಳ್ಳಿ ಜಂಬಣ್ಣ, ತಿಮ್ಮಾನಾಯ್ಕ, ಆಲದಹಳ್ಳಿ ಷಣ್ಮುಖಪ್ಪ, ಎಲ್.ಪೋಮ್ಯಾನಾಯ್ಕ್,ಮತ್ತಿಹಳ್ಳಿ ಅಜ್ಜಣ್ಣ,ಪುರಸಭೆ ಸದಸ್ಯ ಜಾಕೀರ್ ಹುಸೇನ್ ಸರ್ಖಾವಾಸ್, ಜೋಗಿನರ ಭರತೇಶ್, ಮಾಜಿ ಪುರಸಭಾ ಸದಸ್ಯ ಅರುಣ್ ಪುಜಾರ್, ಡಿ.ನೇಮ್ಯಾನಾಯ್ಕ ವೇದುನಾಯ್ಕ್ ಹುಲಿಕಟ್ಟಿ ಬಾಷಾ, ಎಲ್.ಬಿ‌.ಹಾಲೇಶ್ ನಾಯ್ಕ್,ಅಲಮರಸಿಕೇರಿ ಪರಶುರಾಮ,ಆರ್.ಮಹಾಂತೇಶ್‌ನಾಯ್ಕ್, ಟಿ.ಪ್ರವೀಣ್ ಕುಮಾರ್, ಅಡಿವಿಹಳ್ಳಿ ಪೂಜಾರ್ ರಾಜು, ಮಂಜು, ಎಂ.ಕೆ.ರಾಯಲ್ ಸಿದ್ದೀಕ್, ಚಿಗಟೇರಿ ಜಂಬಣ್ಣ,  ಶ್ರೀಕಾಂತ್ ಯಾದವ್, ಬಸವರಾಜ್ ಹುಲಿಯಪ್ಪನವರ್, ರಿಯಾಜ್ ಅಹ್ಮದ್, ಲಾಟಿ ನವರಂಗ್, ಓ.ಮಹಾಂತೇಶ್, ಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.