ರಾಜ್ಯ ಮಹಾ ಸಮ್ಮೇಳನಕ್ಕೆ ಜಿಲ್ಲೆಯ 2 ಸಾವಿರ ನೌಕರರು

ಬೀದರ್:ಫೆ.18: ರಾಜ್ಯ ಸರ್ಕಾರಿ ನೌಕರರ ಸಂಘವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ. 27 ರಂದು ಹಮ್ಮಿಕೊಂಡಿರುವ ಸರ್ಕಾರಿ ನೌಕರರ ರಾಜ್ಯ ಮಹಾ ಸಮ್ಮೇಳನದಲ್ಲಿ ಜಿಲ್ಲೆಯ 2 ಸಾವಿರ ಸರ್ಕಾರಿ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.
ನೌಕರರ ರಾಜ್ಯ ಮಹಾ ಸಮ್ಮೇಳನ ನಿಮಿತ್ತ ನಗರದ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ, ನೌಕರರ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ತಾಲ್ಲೂಕುಗಳ ನೌಕರರು ರೈಲು, ಬಸ್ ಹಾಗೂ ಖಾಸಗಿ ವಾಹನಗಳ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ. ಸಮ್ಮೇಳನದಲ್ಲಿ ನೌಕರರಿಗೆ ಊಟ, ವಸತಿ ಸೌಲಭ್ಯ ಇರಲಿದೆ ಎಂದು ತಿಳಿಸಿದರು.
ಮಹಾ ಸಮ್ಮೇಳನವು ನೌಕರರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ. ಏಳನೇ ವೇತನ ಆಯೋಗದ ಶಿಫಾರಸು, ಎ???ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿಗೊಳಿಸುವುದು, ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವುದು ಮೊದಲಾದ ಬೇಡಿಕೆಗಳ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ನೌಕರರು ಸಮ್ಮೇಳನದ ಯಶಸ್ವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಸಮ್ಮೇಳನದ ಕರಪತ್ರ ಬಿಡುಗಡೆ ಮಾಡಲಾಯಿತು.
ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಕಾರ್ಯಾಧ್ಯಕ್ಷ ರಾಜಕುಮಾರ ಹೊಸದೊಡ್ಡೆ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ರಾಜ್ಯ ಪರಿಷತ್ ಸದಸ್ಯ ಸುಧಾಕರ ಶೇರಿಕಾರ, ವೈಶಾಲಿ, ಸಿದ್ದಮ್ಮ, ಓಂಕಾರ ಮಲ್ಲಿಗೆ, ಪಾಂಡುರಂಗ ಬೆಲ್ದಾರ್, ಮನೋಹರ ಕಾಶಿ, ಶಿವರಾಜ ಕಪಲಾಪುರೆ, ರಾಜಪ್ಪ ಪಾಟೀಲ, ಮಲ್ಲಿಕಾರ್ಜುನ ಮೇತ್ರೆ, ರಾಜಕುಮಾರ ಬೇಲೂರೆ, ರಾಜಕುಮಾರ ಉದಗಿರೆ, ಲಿಂಗಾನಂದ ಮಹಾಜನ, ಭೀಮಶಂಕರ ಆದೆಪ್ಪ, ಮಹೆಬೂಬ್ ಪಟೇಲ್, ಸಾರಿಕಾ ಗಂಗಾ, ಸಂಜೀವಕುಮಾರ ಸೂರ್ಯವಂಶಿ, ವಿಜಯಕುಮಾರ ಪಾಟೀಲ, ಡಾ. ನಾಗರಾಜ, ಡಾ. ಶರಣಪ್ಪ ಮುಡಬಿ, ಭೀಮರಾವ್ ಹಡಪದ, ಸಂತೋಷ ಚಲುವಾ, ಸುಮತಿ ರುದ್ರಾ, ಸೊಹೇಲ್ ಅಹಮ್ಮದ್, ರೂಪಾದೇವಿ, ದೀಪಾ ದೇಶಪಾಂಡೆ, ನರಸಮ್ಮ ಪಾಟೀಲ, ಶ್ರೀದೇವಿ ವಿಜಯಕುಮಾರ ಪಾಟೀಲ, ಸುವರ್ಣಾ, ಉಮೇಶ ಪಾಟೀಲ, ಶಾಮರಾವ್ ಮೋರಗಿಕರ್ ಮೊದಲಾದವರು ಇದ್ದರು.