ರಾಜ್ಯ ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆ ಕಾರ್ಯಕ್ರಮ

ರಾಯಚೂರು.ಡಿ.೨೯- ೨೦೨೩-೨೪ ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಎಗೆ ರಾಷ್ಟ್ರೀಯ ಮತದಾರರ ದಿನಾಚರಣೆಯ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ವಿಡಿಯೋ ಸಂವಾದದ ಮೂಲಕ ಹಮ್ಮಿಕೊಳ್ಳಲಾಯಿತು.
ಡಿ.೨೯ರ (ಶುಕ್ರವಾರ) ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಕೆ.ಸ್ವಾನ್ ವಿಡಿಯೋ ಸಂವಾದ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಾಷ್ಟ್ರೀಯ ಮತದಾರರ ದಿನಾಚರಣೆಯ ಕುರಿತು ವಿವಿಧ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಸ್ಪರ್ಧೆಯಲ್ಲಿ ಪ್ರೌಢ ಶಾಲಾ ವಿಭಾಗದ ಹನುಮಂತ (ಪ್ರಬಂಧ ಕನ್ನಡ), ದಿವ್ಯಾ (ಪ್ರಬಂಧ ಆಂಗ್ಲ), ಲಕ್ಷ್ಮಿ (ಬಿತ್ತಿಚಿತ್ರ ರಚನೆ), ಪದವಿ ಪೂರ್ವ ವಿಭಾಗದ ಕಾವ್ಯ(ಪ್ರಬಂಧ ಕನ್ನಡ), ನಾಜೀಮಾ(ಪ್ರಬಂಧ ಆಂಗ್ಲ), ಪ್ರಭು(ಬಿತ್ತಿಚಿತ್ರ ರಚನೆ)ಯಲ್ಲಿ ಭಾಗವಹಿಸಿದ್ದರು. ಪದವಿ ವಿಭಾಗದ ಸರೋಜಿನಿ ನಾಯ್ಡು (ಪ್ರಬಂಧ ಕನ್ನಡ), ಡಿ.ನಯನಾ(ಪ್ರಬಂಧ ಆಂಗ್ಲ) ಹಾಗೂ ಸಮಿತ್ರಾ (ಬಿತ್ತಿ ಚಿತ್ರ ರಚನೆ) ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಕಚೇರಿಯ ಸ್ವೀಪ್ ಸಮಿತಿ ಸಂಯೋಜಕ ವಿಜಯಕುಮಾರ, ಮತದಾರರ ಸಾಕ್ಷರತಾ ಸಂಪನ್ಮೂಲ ವ್ಯಕ್ತಿ ದಂಡಪ್ಪ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.