ರಾಜ್ಯ ಮಟ್ಟದ ಸ್ಥಳದಲ್ಲಿಯೇ ಪೇಂಟಿಂಗ್ ಸ್ಪರ್ಧೆ: ಕಲಬುರಗಿ ಕಲಾವಿದನಿಗೆ ದ್ವಿತೀಯ ಬಹುಮಾನ

ಕಲಬುರಗಿ,ಜು.30: ಬೆಂಗಳೂರಿನ ಪ್ರತಿಷ್ಠಿತ ಯುವಕ ಸಂಘವು ಕಳೆದ 26ರಂದು ಆರ್ಟ್ ಮ್ಯಾಟರ್ಸ್ ವಿಜ್ಯುವಲ್ ಆರ್ಟ ಸಮ್ಮಿತ್ 2022 ಎಂಬ ಶೀರ್ಷಿಕೆಯಲ್ಲಿ ರಾಜ್ಯ ಮಟ್ಟದ ಸ್ಥಳದಲ್ಲಿ ಪೇಟಿಂಗ್ ರಚನಾ ಸ್ಪರ್ಧೆಯಲ್ಲಿ ನಗರದ ದಿ ಆರ್ಟ್ ಇಂಟಿಗ್ರೇಷನ್ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿ ಮಲ್ಲಿಕಾರ್ಜುನ್ ಜಾಪುರ ಅವರು ದ್ವಿತೀಯ ಬಹುಮಾನವನ್ನು ಪಡೆದು, ಏಳು ಸಾವಿರ ನಗದು, ಫಲಕ ಹಾಗೂ ಪ್ರಮಾಣ ಪತ್ರ ಸ್ವೀಕರಿಸಿದರು. ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಎಮ್. ಎಚ್. ಬೆಳಮಗಿ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಯವರು ಕಲಾವಿದರ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.