
ಬೀದರ:ಜು.7:ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಷನ್ ಬೆಂಗಳೂರು ಇಂಡಿಯಾ ವತಿಯಿಂದ ಏರ್ಪಡಿಸಲಾದ ಕರ್ನಾಟಕ ರಾಜ್ಯ ಶೂಟಿಂಗ್ ಚಾಂಪಿಯನ್ ಶೀಪ್ ಸ್ಪರ್ಧೆಯಲ್ಲಿ ಗ್ಲೋಬಲ್ ಸೈನಿಕ ಅಕಾಡೆಮಿಯ ವಿದ್ಯಾರ್ಥಿಗಳ ತಂಡ ಭಾಗವಹಿಸಿ ಉತ್ತಮ ಸ್ಪರ್ಧೆ ನೀಡಿ 3 ನೇ ಸ್ಥಾನ ಪಡೆದು ಕಂಚಿನ ಪದಕವನ್ನು ಗೆದ್ದಿರುತ್ತಾರೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಥಮ ಬಾರಿಗೆ ಶೂಟಿಂಗ್ ಸ್ಪಧೆರ್Éಯಲ್ಲಿ ಪದಕ ಗೆದ್ದಿರುವುದು ಇತಿಹಾಸ ಮತ್ತು ಹೆಮ್ಮೆಯ ವಿಷಯವಾಗಿದೆ.
ಗ್ಲೋಬಲ್ ಸೈನಿಕ ಅಕಾಡೆಮಿಯ ವಿದ್ಯಾರ್ಥಿಗಳ ತಂಡವು ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿ ಕಂಚಿನ ಪದಕ ಗೆದ್ದಿರುವುದು ಬೀದರ ಜಿಲ್ಲೆಗೆ ಮಾತ್ರವಲ್ಲದೆ ಈಡಿ ಕಲ್ಯಾಣ ಕನಾಟಕ ಪ್ರದೇಶಕ್ಕೆ ಕೀರ್ತಿ ತಂದಿರುತ್ತಾರೆ. ಇದು ಗ್ಲೋಬಲ್ ಸೈನಿಕ ಅಕಾಡೆಮಿಗೆ ಅತ್ಯಂತ ಹೆಮ್ಮೆಯ ಮತ್ತು ಸಂತಸ ವಿಷಯವಾಗಿದೆ. ಇತಂಹ ಅದ್ಭುತ ಸಾಧನೆಗೆ ಗ್ಲೋಬಲ್ ಸೈನಿಕ ಶಾಲೆಗೆ ತರಬೇತುದಾರ ಆಗಿರುವಂತಹ ಏಷೀಯನ್ ಮತ್ತು ಕಾಮನ್‍ವೆಲ್ತ್ ಬಂಗಾರದ ಪದಕ ಪಡೆದಿರುವ ಕ್ಯಾಪ್ಟನ್ ಟಿ.ಸಿ ಪಲಂಗಪ್ಪ ಅವರಿಗೆ ಶ್ರೇಯಸ್ಸು ಸಲ್ಲುತ್ತದೆ ಎಂದು ಗ್ಲೋಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೇನ್ಪೂರೆ ತಿಳಿಸಿದರು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ವಿಧ್ಯಾರ್ಥಿಗಳನ್ನು ಶೂಟಿಂಗ್ ಸ್ಪರ್ಧೆಗೆ ಸಿದ್ದಗೊಳಿಸಿ ಹೆಚ್ಚಿನ ಸಾಧನೆ ಮಾಡುವಂತೆ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಮಟ್ಟದ ತರಬೇತುದಾರರನ್ನು ಗ್ಲೋಬಲ್ ಸೈನಿಕ ಅಕಾಡೆಮಿ ಕರೆಯಿಸಿ ವಿದ್ಯಾರ್ಥಿಗಳಿಗೆ ಒಳ್ಳೆ ಗುಣಮಟ್ಟದ ತರಬೇತಿಗಳನ್ನು ನೀಡಿ ಅವರಿಗೆ ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆಲ್ಲುವಂತೆ ಪ್ರೋತ್ಸಾಹ ನಿಡಿದ್ದು ಸಂಸ್ಥೆಯ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೇನಪೂರೆ ಅವರ ಪಾತ್ರ ಹಿರಿದಾಗಿದೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕ, ಯುವತಿಯರು ಇದರ ಲಾಭವನ್ನು ಪಡೆಯಬೇಕು ಎಂದು ಮುಖ್ಯ ಶಿಕ್ಷಕರಾದ ಜ್ಯೋತಿ ರಾಗ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಪಿ.ಆರ್.ಓ ಕಾರಂಜಿ ಸ್ವಾಮಿ, ಡಾ. ಗಹನಿನಾಥ್ ಪಾಟೀಲ, ಶ್ರೀ ಅಶೋಕ ಪಾಟೀಲ್, ಶ್ರೀಮತಿ ಮಾಧವಿ ಶಿಕ್ಷಕರು ಮತ್ತು ಸಿಬ್ಬಂದಿಗಳು ಪದಕ ಗೆದ್ದಿರುವ ವಿದ್ಯಾರ್ಥಿಗಳ ಸಾಧನೆಗೆ ಶ್ಲಾಘಿಸಿದ್ದಾರೆ.