ರಾಜ್ಯ ಮಟ್ಟದ ಶಿಕ್ಷಣ ಶ್ರೀ ಪ್ರಶಸ್ತಿಗೆ ಆಯ್ಕೆ

ಶಾಹಬಾದ,ಮಾ.1-ಶಿಕ್ಷಣ ಕ್ಷೇತ್ರದಲ್ಲಿ ಸೇವೆಗಾಗಿ ತಾಲೂಕಿನ ಮೂರು ಜನ ಉಪನ್ಯಾಸಕರು ರಾಜ್ಯಮಟ್ಟದ ಶಿಕ್ಷಣ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅನಿಲ್ ಕುಮಾರ್ ಮೈನಾಳಕರ್, ಶಶಿಕಾಂತ ಮಡಿವಾಳ, ಹಣಮಂತ ಕುಂಬಾರ್ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಮಾ.3 ರಂದು ಯಾದಗಿರಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಎಸ್.ಡಿ.ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ 4ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ದುರ್ಗಪ್ಪ ಹೆಚ್.ಪೂಜಾರಿ ತಿಳಿಸಿದ್ದಾರೆ.