ರಾಜ್ಯ ಮಟ್ಟದ  ಶಿಕ್ಷಕ ಪ್ರಶಸ್ತಿ ಪಡೆದ ನಿರಂಜನ್ ಗೆ ಸನ್ಮಾನ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ.11 :- ಈ ಸಾಲಿನ  ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕೂಡ್ಲಿಗಿ ತಾಲೂಕು ಗುಡೇಕೋಟೆ ಸಮೀಪದ ಬೆಳ್ಳಿಗಟ್ಟೆ ಗ್ರಾ ಪಂ ವ್ಯಾಪ್ತಿಯ ಕೊರಚರಹಟ್ಟಿ ಗ್ರಾಮದ ಶಿಕ್ಷಕ ನಿರಂಜನ್ ಟಿ.ಜೆ. ಇವರನ್ನು ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರು.ಶಾಲಾ ಶಿಕ್ಷಕರು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಗ್ರಾಮದ ಮುಖಂಡರು ಆತ್ಮೀಯವಾಗಿ ಸನ್ಮಾನಿಸಿ,ಗೌರವಿಸಿದರು. 
ಪ್ರಾಥಮಿಕ ಶಾಲಾ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ನಿರಂಜನ್ ಹಾಲಿ   ವಿಜಯನಗರ ಜಿಲ್ಲೆಯ  ಹೋಸಪೇಟೆ ತಾಲೂಕಿನ 76 ವೆಂಕಟಾಪುರ ಕ್ಯಾಂಪ್ ಎನ್ಪಿಎಸ್ ಶಿಕ್ಷಕರಾಗಿದ್ದು  ಇವರ  ಹೂಟ್ಟೂರಿನ ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ನಿರಂಜನ್ ಪಿ ಜೆ. ಇವರನ್ನೂ ಇದೇವೇಳೆ ಸನ್ಮಾನಿಸಲಾಯಿತು.
ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಶಸ್ತಿವಿಜೇತ ಶಿಕ್ಷಕ ನಿರಂಜನ್ ಪಿ ಜೆ ಮಾತನಾಡಿ ಶಿಕ್ಷಕ ವೃತ್ತಿಯು ಪವಿತ್ರ ವೃತ್ತಿಯಾಗಿದ್ದು ಕಾಯಾ, ವಾಚಾ, ಮನಸಾ ಇಚ್ಚೆಯಿಂದ ನಾನು ಮತ್ತು ನಮ್ಮೆಲ್ಲಾ ಶಿಕ್ಷಕರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಉತ್ತಮ ಶಿಕ್ಷಕ ಪ್ರಶಸ್ತಿಯು ಇನ್ನೂ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡಲು ಪ್ರೇರಣೆ ನೀಡಿದೆ. ಯಾವತ್ತೂ ಶಾಲೆಗೆ ಪೋಷಕರು ಮತ್ತು ಗ್ರಾಮದ ಮುಖಂಡರು ಸಹಕಾರ ನೀಡಬೇಕೆಂದು ಕೋರಿ, ನಮ್ಮ ಕೆಲಸ ಗುರುತಿಸಿ ನಮ್ಮ ಊರಿನವರು ಸನ್ಮಾನಿಸಿದ್ದು ಸಂತಸ ತಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎನ್ಪಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಗೌಡ.ವಿಜಯನಗರ ಜಿಲ್ಲಾಧ್ಯಕ್ಷ ಎಂ. ಮಂಜುನಾಥ್.ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಅಧ್ಯಕ್ಷ ಪಾಲ್ತೂರು ಶಿವರಾಜ್.ತಾಲೂಕು ಘಟಕ ಸಂಘಟನಾ ಕಾರ್ಯದರ್ಶಿ ಆರ್.ಬಿ.ಬಸವರಾಜ್.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಟಿ.ಹೆಚ್.ಎಂ.ಶೇಖರಯ್ಯ. ಯರ್ರಲಿಂಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರುಗಳು.ಸಂಘದ ಪದಾಧಿಕಾರಿ ಗೋಣಿಬಸಪ್ಪ.ಕೆ.ಹುರಳಿಹಾಳ್  ಸಮೂಹ ಸಂಪನ್ಮೂಲ ವ್ಯಕ್ತಿ ಅನುಪಮಾ.ತಾಲೂಕು ಘಟಕದ ವಿರುಪಾಪುರ ಪಾಂಡುರಂಗ.ಎನ್ಪಿಎಸ್ ತಾಲೂಕು ಸಂಘದ ಅಧ್ಯಕ್ಷರಾದ ಅಂಗಡಿ ತಿಪ್ಪೇಸ್ವಾಮಿ.ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಜಗದೀಶ್.ಕೊರಚರಹಟ್ಟಿ ಶಾಲಾ ಮುಖ್ಯಗುರುಗಳಾದ ಸಂತೋಷಕುಮಾರ್.ಎಸ್. ಸ.ಹಿ.ಪ್ರಾ.ಶಾಲೆ ಶಿಕ್ಷಕರಾದ ಕಲ್ಯಾಣಪ್ಪ.ಬಿ.ಶಿವಣ್ಣ.ಕೆ.ಶಿವಣ್ಣ.ಮಹಾಲಿಂಗಪ್ಪ.ತಿಪ್ಪೇಸ್ವಾಮಿ ಎಂ. ಇವರನ್ನು ಇದೇ ವೇಳೆ ಸನ್ಮಾನಿಸಲಾಯಿತು.ಹುರಳಿಹಾಳ್ ಹಾಗೂ ಚಿರತಗುಂಡು ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಗುರುಗಳು ಹಾಗೂ ಗುರುಮಾತೆಯರು ಸೇರಿದಂತೆ ಕೊರಚರಹಟ್ಟಿ ಗ್ರಾಮದ ಸಮಸ್ತ ಗ್ರಾಮಸ್ಥರು ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

Attachments area