ರಾಜ್ಯ ಮಟ್ಟದ ವಿವೇಕ ವಿದ್ಯಾರ್ಥಿ ಪರೀಕ್ಷೆ: ಸೃಷ್ಟಿ ನ್ಯಾಮಣ್ಣವರ ಆಯ್ಕೆ

ಸಂಜೆವಾಣಿ ವಾರ್ತೆ,
ವಿಜಯಪುರ.ಜ.28:ಕರ್ನಾಟಕ ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್ ಅಡಿಯಲ್ಲಿ ನಡೆಸಿದ ರಾಜ್ಯ ಮಟ್ಟದ ವಿವೇಕ ವಿದ್ಯಾರ್ಥಿ ಲಿಖಿತ ಪರೀಕ್ಷೆಯಲ್ಲಿ ವಿಜಯಪುರದ ಸೇಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿನಿ ಸೃಷ್ಟಿ ನ್ಯಾಮಣ್ಣವರ ರಾಜ್ಯ ಮಟ್ಟದ ವಿವೇಕ ವಿದ್ಯಾರ್ಥಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ವೇದ ಅಕಾಡೆಮಿಯ ಶ್ರೇಯಾ ಜಂಬಗಿ, ಮನಸ್ವಿ ತಳವಾರ, ಭಾವನಾ ಅಮರಶೆಟ್ಟಿ, ಪಿಡಿಜೆ ಎ ಶಾಲೆಯ ಲಕ್ಷ್ಮಿ ವಡ್ಡಿ, ನೀಲಗಂಗಮ್ಮ ಗೋಣಿ, ತುಂಗಳ ಶಾಲೆಯ ಸನ್ಮಿತಾ ತಿಗಣಿಬಿದರಿ, ರವೀಂದ್ರನಾಥ ಟ್ಯಾಗೋರ ಶಾಲೆಯ ಮಲ್ಲಿಕಾರ್ಜುನ ಬ್ಯಾಲ್ಯಾಳ, ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ರಕ್ಷಿತಾ ಪಟ್ಟಣಶೆಟ್ಟಿ, ಸಂಗನಬಸವ ಶಿಶುನಿಕೇತನ ಶಾಲೆಯ ದಿಯಾ ಕೋಟಿ ಆವರು ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿದ್ದಾರೆ.
ಕೃಪಾಮಯಿ ಶಾರದ ಆಶ್ರಮವು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳ ಮೂಲಕ ಮಕ್ಕಳಲ್ಲಿ ಮೌಲ್ಯವನ್ನು ಬೆಳೆಸುವುದು ಹಾಗೂ ನವಭಾರತದ ಶಿಲ್ಪಿಗಳನ್ನಾಗಿ ಮಾಡಲು ವಿವೇಕ ವಿದ್ಯಾರ್ಥಿ ಪರೀಕ್ಷೆ ಆಯೋಜಿಸಲಾಗಿತ್ತು. ಒಟ್ಟು 24 ಶಾಲೆಗಳ 1500 ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಭಾಗವಹಿಸಿದ್ದರು.
ಆಶ್ರಮದ ಅಧ್ಯಕ್ಷರಾದ ಪೂಜ್ಯಶ್ರೀ ಕೈವಲ್ಯಮಯಿ ಮಾತಾಜಿ ಅವರು ವಿಜೇತ ವಿದ್ಯಾರ್ಥಿನಿಯರಿಗೆ ಅಭಿನಂದಿಸಿದ್ದು, ಕೃಪಾಮಯಿ ಶಾರದ ಅಶ್ರಮವು ಜ. 30ರಂದು ಆಯೋಜಿಸಿರುವ ಯುವ ಸಮಾವೇಶದಲ್ಲಿ ವಿಜೇತ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಗುವುದು ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.