ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದ ಕುಮಾರಿ ರೇಷ್ಮಾ

ಬೀದರ:ಮೇ.20:ಸಮಗ್ರ ಶಿಕ್ಷಣ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಆಯೋಜಿಸಿರುವ ರಾಜ್ಯ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಎರಡನೇ ಸ್ಥಾನ ಪಡೆದ ಬೀದರ ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮೈಲೂರನ ಕುಮಾರಿ ರೇಷ್ಮಾ ಅಶೋಕ ವಿದ್ಯಾರ್ಥಿಗೆ ಶಾಲೆಯ ವತಿಯಿಂದ ಅಭಿನಂದಿಸಲಾಯಿತು.

ನಗರದ ಸರಕಾರಿ ಬಾಲಕಿಯರ ಪ್ರೌಢ ಶಾಲೆ ಮೈಲೂರಿನ ಕುಮಾರಿ ರೇಷ್ಮಾ ಅಶೋಕ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಬೀದರ ಜಿಲ್ಲೆಯಿಂದ ಕಲ್ಬುರ್ಗಿ ವಿಭಾಗವನ್ನು ಪ್ರತಿನಿಧಿಸಿ ರಾಜ್ಯ ಮಟ್ಟದಲ್ಲಿ 2ನೇ ಸ್ಥಾನ ಪಡೆದು ಶಾಲೆಗೆ ಹಾಗೂ ಬೀದರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಕುಮಾರಿ ರೇಷ್ಮಾ ಅಶೋಕ್ ನಮ್ಮ ಜಿಲ್ಲೆಯರಾಗಿರುವುದು ನಮಗೆ ಹೆಮ್ಮೆಯ ವಿಷಯ.

ಕುಮಾರಿ ರೇಷ್ಮಾ ಅಶೋಕ ಅವರಿಗೆ ಮುಖ್ಯ ಗುರುಗಳಾದ ರಾಘವೇಂದ್ರ ಕುಲಕರ್ಣಿ, ಶಿಕ್ಷಕರಾದ ಕಲಾಲ್ ದೇವಿ ಪ್ರಸಾದ, ಉಮೇಶ, ಬಾಲಾಜಿ ಜಾಧವ,ಶಿಕ್ಷಕಿಯರಾದ ತಬ್ಬಸಮ್,ಕರಿಮಾ ಸಿದ್ದಿಕಿ ಆಸ್ಮಾಬೇಗಂ,ನಸೀಮಾ ಸುಲ್ತಾನಾ,ಅನುಪಮ, ವಿಜಯಲಕ್ಷ್ಮಿ ,ಸಿಬ್ಬಂದಿ ಮತ್ತು ಎಸ್‍ಡಿಎಂಸಿ ಅಧ್ಯಕ್ಷರು ಹಾಗು ಸದಸ್ಯರುಗಳ ವತಿಯಿಂದ ಅಭಿನಂದಿಸಲಾಯಿತು.