ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ

ರಾಯಚೂರು ಮಾ ೨೭
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಕೃಷಿ ಸಾಲ ವಸೂಲಾತಿ ಪದ್ಧತಿ ವಿರೋಧಿಸಿ ರೈತ ಚೈತನ್ಯ ಯಾತ್ರೆ ಸಮಾರೋಪದ ಹೋರಾಟ ದಿನಾಂಕ ೨೯/೦೩/೨೦೨೩ರಂದು ಬೆಂಗಳೂರಿನ ಫ್ರಿಡಂಪಾರ್ಕ್ ನಲ್ಲಿ ನಡೆಯುತ್ತದೆ ಎಂದು ರಾಜ್ಯಾಧ್ಯಕ್ಷರಾದ ಆರ್ ಮಾಧವರೆಡ್ಡಿ ತಿಳಿಸಿದರು.
ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಕೃತಿ ವಿಕೋಪಗಳಿಂದ ಸತತ ಮೂರು ವರ್ಷಗಳಿಂದ ರಾಜ್ಯದ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದು, ಬೆಳಗ್ಗೆ ಉತ್ತಮವಾದ ಸಿಗಲಾರದೆ ರೈತರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ ರೈತರ ಆತ್ಮಹತ್ಯೆಗಳ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘದ ಸತ್ಯಶೋಧನೆಯಿಂದ ಬೆಳಕಿಗೆ ಬಂದಿರುವ ವಿಷಯ ಹಲವಾರು ಇವೆ,ಅದರಲ್ಲಿ ಪ್ರಮುಖವಾಗಿ ರೈತರು ತಾವು ಮಾಡಿದ ಸಾಲ ತೀರಿಸಲಾಗದೆ ಬ್ಯಾಂಕಿನವರ ಕಿರುಕುಳದಿಂದ ಆತ್ಮಹತ್ಯೆಯಂತಹ ಪ್ರಕರಣಗಳು ಆಗಿವೆ ಎಂದು ತಿಳಿಸಿದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ರೈತಸಂಘ ಹಾಗೂ ಹಸಿರು ಸೇನೆ ಕೃಷಿ ಸಾಲದ ಹೊರೆಯಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ಒಂದೇ ಪರಿಹಾರವಲ್ಲ ಇದಕ್ಕೆ ಹೋರಾಟ ಒಂದೇ ಪರಿಹಾರ ಎಂದು ತೀರ್ಮಾನಿಸಿ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಕೃಷಿ ಸಾಲ ವಸೂಲಾತಿ ಪದ್ಧತಿ ವಿರೋಧಿಸಿ ರೈತ ಚೈತನ್ಯ ಯಾತ್ರೆ ಹಮ್ಮಿಕೊಳ್ಳಲಾಗಿದೆ, SಃI ಬ್ಯಾಂಕಿನವರು ೧೦%ಕೆನರಾ ಬ್ಯಾಂಕಿನವರು ೧೫% ಮಾತ್ರ ರೈತರಿಂದ ಹಣ ಕಟ್ಟಿಸಿಕೊಂಡು ಉಳಿದ ಸಾಲವನ್ನು ಮನ್ನಾ ಮಾಡಿದೆ, ಆದರೆ ಕರ್ನಾಟಕ ಗ್ರಾಮೀಣ ಬ್ಯಾಂಕಿನವರು ಮಾತ್ರ ಖಃI ರೂಲ್ಸ್ ಪ್ರಕಾರ ಎಲ್ಲಾ ಹಣ ಬ್ಯಾಂಕಿಗೆ ನೀಡಬೇಕೆಂದು ಹೇಳುತ್ತಿದ್ದಾರೆ, ಆ ರೂಲ್ಸ್ ಕೇಳಲು ಹೋದರೆ ನಮ್ಮ ಹತ್ತಿರ ಇಲ್ಲಾ ಎಂದು ಹೇಳುತ್ತಾರೆ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧ್ಯಕ್ಷರಾದ ಜೋಷಿ ಯವರು ನಮ್ಮ ಮನವಿಯನ್ನು ತಿರಸ್ಕಾರ ಮಾಡುತ್ತಿದ್ದಾರೆ.
ಹಾಗಾಗಿ ರೈತ ಚೈತನ್ಯ ಯಾತ್ರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದೂ ಇಂದು ಜಿಲ್ಲೆಗೆ ಆಗಮಿಸಿದೆ, ಹೋರಾಟದ ಸಮಾರೋಪವೂ ದಿ ೨೯-೦೩-೨೦೨೩ರಂದು ಫ್ರಿಡಂ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.