ರಾಜ್ಯ ಮಟ್ಟದ ಪುಸ್ತಕ ಮತ್ತು ಕನ್ನಡ ಕಥಾ ಸ್ಪರ್ಧಾ ವಿಜೇತರು

ಕಲಬುರಗಿ,ಜ.4:ಗುಲಬರ್ಗಾ ವಿಶ್ವವಿದ್ಯಾಲಯವು ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕಲಬುರ್ಗಿ ವಿಭಾಗ (ಕಲ್ಯಾಣ ಕರ್ನಾಟಕ ಪ್ರದೇಶದ)ದ ಕನ್ನಡ ಸೃಜನ, ಸೃಜನೇತರ ಲೇಖಕರ ಕೃತಿಗಳಿಗೆ, ಜೀವನ ಕಥನ ಹಾಗೂ ಕನ್ನಡ ಪುಸ್ತಕ ಪ್ರಕಾಶಕರಿಗೆ, ಅನುವಾದ ಲೇಖಕರ ಕೃತಿಗೆ, ಸಮಾಜ ವಿಜ್ಞಾನ, ಜನಪದ ಕಲಾವಿದರಿಗೆ, ಚಿತ್ರ/ಶಿಲ್ಪಕಲಾವಿದರಿಗೆ, ಹಿಂದಿ, ಮರಾಠಿ, ಇಂಗ್ಲಿಷ ಹಾಗೂ ಉರ್ದು ಭಾಷಾ ಲೇಖಕರಿಗೆ ಗೌರವಧನ ನೀಡಿ ಪೆÇ್ರೀತ್ಸಾಹಿಸುವುದಲ್ಲದೆ, ರಾಜ್ಯಮಟ್ಟದ ವಿಜ್ಞಾನ, ಅಂಬೇಡ್ಕರ್ ಪುಸ್ತಕ ಮತ್ತು ದಿ. ಜಯತೀರ್ಥ ರಾಜ ಪುರೋಹಿತ ಸ್ಮಾರಕ ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನೀಡುವ ಬಹÅಮಾನ ಫಲತಾಂಶ ಪ್ರಕಟಿಸಿದೆ ಎಂದು ಪ್ರಸಾರಾಂಗ ನಿರ್ದೇಶಕರು ತಿಳಿಸಿದ್ದಾರೆ.
ಜನವರಿ 13ರಂದು ವಿಶ್ವವಿದ್ಯಾಲಯದ ಕಾರ್ಯಸೌಧದ ‘ಮಹಾತ್ಮಾಗಾಂಧಿ ಸಭಾಂಗಣದಲ್ಲಿ’ ಆಚರಿಸಲಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕುಲಪತಿ ಪೆÇ್ರ. ದಯಾನಂದ್ ಅಗಸರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಕನ್ನಡ ಪುಸ್ತಕಗಳಿಗೆ ಸೃಜನ ವಿಭಾಗದಲ್ಲಿ ಶ್ರೀಮತಿ ಲಕ್ಷ್ಮೀ ಮುದೇನೂರು ಅವರ ಇಂತಿ ನಿನ್ನ ಹಕ್ಕಿ, ದಾದಾಪೀರ್ ಜೈಮನ್ ಅವರ ನೀಲಕುರಿಂಜಿ, ಬಸವರಾಜ್ ಐಗೋಳ್ ಅವರ ಭಾವದ ಬೆಳದಿಂಗಳು, ಬಸವರಾಜ್ ದಯಾಸಾಗರ್ ಅವರ ಸಾವಿರದ ನೋವುಗಳು, ಡಾ. ವಿಜಯಕುಮಾರ್ ಜಿ. ಪರುತೆ ಅವರ ಬೆಳಕಿನೆಡೆಗೆ ಹಾಗೂ ಸೃಜನೇತರ ವಿಭಾಗದಲ್ಲಿ ಡಾ. ಎಂ.ಬಿ. ಕಟ್ಟಿ ಅವರ ಆರೂಢ ಪಂಥ, ಡಾ. ಶ್ರೀಶೈಲ್ ನಾಗರಾಳ್ ಅವರ ಕಾಲದ ಕನ್ನಡಿ, ಶ್ರೀಮತಿ ಮಂಗಲಾ ವಿ. ಕಪರೆ ಅವರ ಸತ್ತವರಿಗಾಗಿ ಅತ್ತವರ್ಯಾರು, ಡಾ. ಲಕ್ಷ್ಮೀಕಾಂತ್ ಸಿ. ಪಂಚಾಳ್ ಅವರ ಅನುಶೀಲನ ಮತ್ತು ಜಾನಪದ, ವಚನ, ಜೀವನ ಕಥನ ಮತ್ತು ಸಮಾಜ ವಿಜ್ಞಾನ ವಿಭಾಗದಲ್ಲಿ ಡಾ. ವೇಷ್ಗಾರು ರಾಮಾಂಜನೇಯ್ ಅವರ ಅಲೆಮಾರಿಯ ಅನನ್ಯತೆ, ಸಂಗಮನಾಥ್ ರೇವತಗಾಂವ್ ಅವರ ಕೊರೋನಾ ಕನವರಿಸುವ ವಚನಗಳು, ಪ್ರೊ. ವ್ಹಿ.ಟಿ. ಕಾಂಬಳೆ ಅವರ ಲೈಫ್ ಆಂಡ್ ವರ್ಕ್ ಆಫ್ ಬಿ. ಶ್ಯಾಮಸುಂದರ್, ಡಾ. ಶರಣಪ್ಪ ಸೈದಾಪೂರ್ ಅವರ ಮುಲ್ತಿ ಡೆಮೆನಿಸಿಯನಲಿ ಇಸ್ಯೂಜ್ ಆಫ್ ಡೆವಲಪ್‍ಮೆಂಟ್ ಆಫ್ ಇಂಡಿಯಾ ಹಾಗೂ ವಿಜ್ಞಾನ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ವಿಭಾಗದಲ್ಲಿ ರಾಜಶೇಖರ್ ಬಸನಾಯಕ್ ಅವರ ಕೃಷಿ ಸಂಪದ, ಡಿ.ಎಸ್. ವೀರಯ್ಯ ಅವರ ಸಾಹಿತ್ಯಮುಖಿ ಹಾಗೂ ಅನುವಾದ, ಇಂಗ್ಲೀಷ್ ಮತ್ತು ಹಿಂದಿ ವಿಭಾಗದಲ್ಲಿ ಡಾ. ವಿಠಲರಾವ್ ಟಿ. ಗಾಯಕವಾಡ್ ಅವರ ಮಹಾಜಂಗಮ, ಡಾ. ಸುರೇಶ್ ಜಂಗೆ ಅವರ ಅಕ್ಯಾಡೆಮಿಕ್ ಲೈಬ್ರೀಸ್ ಆಂಡ್ ನ್ಯಾಕ್, ಸತೀಶಕುಮಾರ್ ಎಂ. ಡೊಂಗ್ರೆ ಅವರ ಹಿಸ್ಟ್ರಿ ಆಂಡ್ ಫೌಂಡೇಶನ್ ಆಫ್ ಪಿಜಿಕಲ್ ಎಜುಕೇಶನ್, ಡಾ. ಅಂಬುಜಾ ಮಳಖೇಡಕರ್ ಅವರ ಕೃತಿಗಳಿಗೆ, ವೇದನಕಿ ಸ್ವರ, ಪ್ರಕಾಶಕರು ಮತ್ತು ಜನಪದ ಕಲಾವಿದರ ವಿಭಾಗದಲ್ಲಿ ಜಗದೀಶ್ ಶರಣಪ್ಪ ಹೊನ್ಕಲ್ ಅವರ ಅಲ್ಲಮಪ್ರಭು ಪ್ರಕಾಶನಕ್ಕೆ ಹಾಗೂ ಶ್ರೀಮತಿ ಶರಣಮ್ಮ ಪಿ. ಸಜ್ಜನ್ ಅವರು ಪ್ರಶಸ್ತಿ ಪಡೆಯಲಿದ್ದಾರೆ.
ಚಿತ್ರಕಲಾವಿದರ ವಿಭಾಗದಲ್ಲಿ ಸಂಗಮೇಶ್ ಎಸ್. ಚಿಲ್ಲಶೆಟ್ಟಿ ಅವರ ವಿಲೇಜ್, ಸುರೇಶ್ ಸಿ. ಮ್ಯಾಳಗಿ ಅವರ ಶೀರ್ಷಿಕೆ ರಹಿತ, ಅಭಿಜಿತ್ ಎಸ್.ಕೆ., ಅವರ ದಿ. ಸಾಧು, ವಿಜಯಕುಮಾರ್ ಎಸ್. ಅವರ ಲ್ಯಾಂಡ್ ಸ್ಕೇಪ್ ಚಿತ್ರಗಳಿಗೆ ಹಾಗೂ ಚಿತ್ರಕಲಾವಿದರ ವಿಭಾಗದಲ್ಲಿ ಮಹೇಶಕುಮಾರ್ ತಳವಾರ್ ಅವರ ಠಗರು ಶಿಲ್ಪಕಲೆಗೆ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಡಾ. ಜೈಶೇನಪ್ರಸಾದ್ ರೇವಣಪ್ಪ ಅವರ ಬುದ್ದಿವಂತ ಮಂತ್ರಿಯ ಕಥೆ ಹಾಗೂ ಶರಣಬಸವ ಕೆ. ಗುಡದಿನ್ನಿ ಅವರ ಪುಲಾರ್ ಮತ್ತು ಆನಂದ್ ಎಸ್. ಗೊಬ್ಬಿ ಅವರ ಜೀವ ಕಥೆಗೆ ಪ್ರಶಸ್ತಿ ದೊರಕಿವೆ.