ರಾಜ್ಯ ಮಟ್ಟದ ಪಂಜ ಕುಸ್ತಿ ಸ್ಪರ್ಧೆಯಲ್ಲಿ ನೂತನ ದಾಖಲೆ 

ದಾವಣಗೆರೆ.ಮಾ.೨೩: ಹಾಸನ ಜಿಲ್ಲೆಯಲ್ಲಿ  ನಡೆದ 2ನೇ, ರಾಜ್ಯಮಟ್ಟದ ಅರ್ಮ್ ರಜ್ ಲಿಂಗ್ ಸ್ಪರ್ಧೆಗಳಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದ ಬ್ರದರ್ಸ್ ಜಿಮ್ ಕ್ರೀಡಾಪಟುಗಳು ಚಿನ್ನ, ಬೆಳ್ಳಿ, ಕಂಚು ಸೇರಿದಂತೆ ಒಟ್ಟು 50 ಪದಕಗಳನ್ನು ಗೆಲ್ಲುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ.ಇಲ್ಲಿ ವಿಜೇತರಾದ ಕ್ರೀಡಾಪಟುಗಳು ಮುಂಬರುವ ಮೇ 22 ರಿಂದ 26ರವರೆಗೆ ಜಮ್ಮು ಕಾಶ್ಮೀರದಲ್ಲಿ ನಡೆಯಲಿರುವ  45ನೇ ರಾಷ್ಟ್ರೀಯ ಅರ್ಮ್ ರೆಸ್ಟಿಂಗ್ (ಪಂಜ ಕುಸ್ತಿ)  ಸ್ಪರ್ಧೆಗಳಿಗೆ ಆಯ್ಕೆ  ಆಗಿದ್ದಾರೆ.ಹಾಸನದಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮೈಸೂರು, ಬೆಂಗಳೂರು, ದಾವಣಗೆರೆ, ಹಾವೇರಿ, ಉಡುಪಿ, ಮಂಗಳೂರು, ಕಾರವಾರ, ಶಿವಮೊಗ್ಗ ಒಟ್ಟು 11 ಜಿಲ್ಲೆಗಳಿಂದ ಸುಮಾರು 465 ಜನ ಕ್ರೀಡಾ ಪಟುಗಳು ಭಾಗವಹಿಸಿದ್ದರು.ಇದರಲ್ಲಿ ಹರಿಹರ ಬ್ರದರ್ಸ್ ಜಿಮ್ ನಿಂದ ಒಟ್ಟು 51 ಜನ ಕ್ರೀಡಾ ಪಟುಗಳು ಭಾಗವಹಿಸಿ 25, ಚಿನ್ನ, 14 ಬೆಳ್ಳಿ, 11 ಕಂಚಿನ ಪದಕ ಒಟ್ಟು 50 ಪದಕಗಳನ್ನು ಗೆದ್ದಿದ್ದಾರೆ. ಇದಲ್ಲದೇ 3 ರಾಜ್ಯ ಪ್ರಶಸ್ತಿ, 1 ಕರ್ನಾಟಕ ಯೂತ್ ಸಬ್ ಜೂನಿಯರ್, 2 ಕರ್ನಾಟಕ ಅರ್ಜುನ ಜೂನಿಯರ್,  3 ಕರ್ನಾಟಕ ಭೀಮ, ಸೀನಿಯರ್, ಪ್ರಶಸ್ತಿಗಳನ್ನು ಗೆದ್ದು ಸಮಗ್ರ ರಾಜ್ಯ ಮಟ್ಟದ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿವೆ.ಈ ಮೂಲಕ ದಾವಣಗೆರೆಯ ಹಾಗು ಹರಿಹರ ನಗರದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಈ ವಿಜೇತ ಕ್ರೀಡಾ ಪಟುಗಳಿಗೆ ಬ್ರದರ್ಸ್ ಜಿಮ್ಮ ಸಂಚಾಲಕ ಅಕ್ರಂಬಾಷ, ಅಂತರ ರಾಷ್ಟ್ರೀಯ ದೇಹದಾರ್ಡ್ಯ ಕ್ರೀಡಾಪಟು ಹರಿಹರದ ಬ್ರದರ್ಸ್ ಜಿಮ್ ತರಬೇತುದಾರರಾದ ಮಹಮ್ಮದ್ ರಫೀಕ್, ಅಂತರ ರಾಷ್ಟ್ರೀಯ ದೇಹದಾರ್ಡ್ಯ ಪಟು, ನಗರಸಭೆ ಸದಸ್ಯ ಆರ್.ಸಿ.ಜಾವೀದ್, ಅತಾವುಲ್ಲಾ ಸೇರಿದಂತೆ ಜಿಮ್ಮಿನ ಎಲ್ಲಾ ಕ್ರೀಡಾ ಪಟುಗಳು ಶುಭ ಹಾರೈಸಿ, ಅಭಿನಂದನೆ ಸಲ್ಲಿಸಿದ್ದಾರೆ.