ರಾಜ್ಯ ಮಟ್ಟದ ನೀರಾವರಿ, ಹೆದ್ದಾರಿ ಅಭಿಯಂತರರ ಭೇಟಿ

ಹನೂರು:ಏ:02: ಶಾಸಕ ಆರ್.ನರೇಂದ್ರರವರು ಮುಖ್ಯಮಂತ್ರಿಗಳಿಗೆ ಮಾಡಿದ್ದ ಮನವಿಗೆ ಪೂರಕವಾಗಿ ಮಾರ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಹಾಲೇರಿ ಕೆರೆಗೆ ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆಯಡಿಯಲ್ಲಿ ನೀರು ತುಂಬಿಸುವ ದಿಸೆಯಲ್ಲಿ ರಾಜ್ಯಮಟ್ಟದ ನೀರಾವರಿ ಅಧಿಕಾರಿಗಳಾದ ಮುಖ್ಯ ಅಭಿಯಂತರರು ಕಾವೇರಿ ನಿಗಮದ ಶಂಕರೇಗೌಡ, ರಾಜ್ಯ ಹೆದ್ದಾರಿ ಮುಖ್ಯ ಅಭಿಯಂತರಾದ ವೀರಭದ್ರಯ್ಯ ಹಾಗೂ ಚಾಮರಾಜನಗರ ಪಂಚಾಯಿತ್ ರಾಜ್ ಕುಡಿಯುವ ನೀರು ಇ.ಇ. ಶಿವಶಂಕರಯ್ಯ, ಕರ್ನಾಟಕ ಪುಸ್ತಕ ಮತ್ತು ಮುದ್ರಣ ಪ್ರಾಧಿಕಾರದ ಅಂಚೆ ಅಧ್ಯಕ್ಷರಾದ ನಂದೀಶ್‍ರವರು ಹಾಲೇರಿ ಮತ್ತು ಕೀರಪಾತಿ ಕೆರೆಗೆ ಭೇಟಿ ನೀಡಿ ಕಾರ್ಯರೂಪಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾರ್ಟಳ್ಳಿ ಗ್ರಾ.ಪಂ. ಅಧ್ಯಕ್ಷೆ ಶಾಂತಿ, ಉಪಾಧ್ಯಕ್ಷ ರಾಮಲಿಂಗಂ ಗ್ರಾಮದ ಮುಖಂಡರುಗಳಾದ ಜಪಮಾಲೆ, ಸಮನ್ಸ್, ಮಣಿ, ಪಿಂಟೋ, ಶಿವು, ಇನ್ನಸಿಮುತ್ತು, ಪವುಲ್‍ರಾಜ್, ಅರುಸಾಮಿ, ವೇಲನ್, ಅಂಥೋನಿಸ್ವಾಮಿ.ಅರುಲ್ ಸೇಲ್ವಮ್ ಇತರರು ಹಾಜರಿದ್ದರು.