ರಾಜ್ಯ ಮಟ್ಟದ ದ್ವಿತೀಯ ವಿಶ್ವ ಕನ್ನಡ ಸಾಹಿತ್ಯೋತ್ಸವದ ಕವಿಗೋಷ್ಠಿಗೆ ಆಯ್ಕೆ

ಸುಳ್ಯ : ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಹಿರಿಯೂರು, ಚಿತ್ರದುರ್ಗ ಇವರು ಆಯೋಜಿಸಿದ್ದ ೨೦೨೦-೨೦೨೧ನೇ ಸಾಲಿನ ದ್ವಿತೀಯ ವಿಶ್ವ ಕನ್ನಡ ಸಾಹಿತ್ಯೋತ್ಸವ ಸಮಾರಂಭದ ಕವಿ ಗೋಷ್ಠಿಗೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಆಯ್ಕೆಯಾಗಿ ದ್ದಾರೆ. ಕಾರ್ಯಕ್ರಮ ಜ.೧೦ರಂದು ಬೆಂಗಳೂರಿನ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಜರುಗಲ್ಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಂಗೀತ ನಿರ್ದೇಶಕ ಮತ್ತು ಸಾಹಿತಿ ಡಾ. ಹಂಸಲೇಖ ನಿರ್ವಹಿಸಲಿದ್ದಾರೆ. ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲತಾಶ್ರೀ ಸುಪ್ರೀತ್ ಲೇಖಕಿ, ಕವಯತ್ರಿ, ಹವ್ಯಾಸಿ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಸುಪ್ರೀತ್ ಮೋಂಟಡ್ಕ ಅವರ ಪತ್ನಿ.