ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮ

ಬಂಟ್ವಾಳ , ಏ.೧- ತಾಲೂಕಿನ ಗಡಿಯಾರ-ಜೋಗಿಬೆಟ್ಟು ಇತ್ತಿಫಾಕ್ ಮೀಲಾದ್ ಕಮಿಟಿ ಆಶ್ರಯದಲ್ಲಿ ಮಾ ೨೭ ರಂದು ರಾತ್ರಿ ಇಲ್ಲಿನ ಮಸೀದಿ ವಠಾರದಲ್ಲಿ ನಡೆದ ರಾಜ್ಯ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕಿನ ಕೃಷ್ಣಾಪುರ ಲಜಿನತುಲ್ ಅನ್ಸಾರಿಯ ದಫ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ಬಂಟ್ವಾಳ ತಾಲೂಕಿನ ಬಿ.ಸಿ.ರೋಡು-ಕೈಕಂಬದ ರಿಫಾಯಿಯ ದಫ್ ತಂಡ ದ್ವಿತೀಯ ಹಾಗೂ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರು-ಮಲ್ಲಾರ್ ಸಿರಾಜುಲ್ ಹುದಾ ದಫ್ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಕೃಷ್ಣಾಪುರ ದಫ್ ತಂಡದ ಹಾಡುಗಾರರಾದ ಮಾಸ್ಟರ್ ಸೈಫುದ್ದೀನ್ ಹಾಗೂ ಶರಫುದ್ದೀನ್ ಉತ್ತಮ ಹಾಡುಗಾರರಾಗಿ ಮೂಡಿಬಂದರು.
ಬೆಳ್ತಂಗಡಿ ದಾರುಸ್ಸಲಾಂ ಅಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದುವಾಶಿರ್ವಚನಗೈದರು. ಐಎಂಸಿ ಗೌರವಾಧ್ಯಕ್ಷ ಅಬ್ದುಲ್ ಸಲಾಂ ಬಾಖವಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಮದ್ರಸದ ಮುಖ್ಯೋಪಾಧ್ಯಾಯ ಮುಹಮ್ಮದ್ ಹನೀಫ್ ಮುಸ್ಲಿಯಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಹಾಜಿ ಮುಹಮ್ಮದ್ ಕುಕ್ಕುವಳ್ಳಿ, ಉದ್ಯಮಿ ರಫೀಕ್ ಎಂ.ಆರ್., ಸಿದ್ದೀಕ್ ಮುಸ್ಲಿಯಾರ್ ಗಡಿಯಾರ, ಯೂನುಸ್ ಸಅದಿ ಪೇರಮೊಗರು, ಉಸ್ಮಾನ್ ಫೈಝಿ ಗಡಿಯಾರ, ಆಶಿಕ್ ಕುಕ್ಕಾಜೆ, ಮನ್ಸೂರ್ ಬೆಳ್ಳಾರೆ ಯುಎಇ, ಅಬ್ಬು ಹಾಜಿ ಗಡಿಯಾರ, ಫಾರೂಕ್ ಸತ್ತಿಕಲ್ಲು, ನಝೀರ್ ಪೆರ್ಲಾಪು, ಅಬ್ದುಲ್ ರಶೀದ್ ಸಖಾಫಿ ಮೈಂದಗುರಿ, ರಿಯಾಝ್ ಕಲ್ಲಾಜೆ, ಇಬ್ರಾಹಿಂ ಗಡಿಯಾರ, ಮಜೀದ್ ದಾರಿಮಿ ಏನಾಜೆ, ಅಲಿ ಮದನಿ ಜೋಗಿಬೆಟ್ಟು, ಸಿರಾಜುದ್ದೀನ್ ಮದನಿ ಗಡಿಯಾರ, ಬಾತಿಷ್ ಪಾಟ್ರಕೋಡಿ, ಪಿ.ಕೆ. ಉಮರಬ್ಬ ಚೋಯಿಸ್ ಸತ್ತಿಕಲ್ಲು, ಝಕರಿಯಾ ದಾರಿಮಿ ಕಡಂಬು, ಮುಸ್ತಫಾ ಏನಾಜೆ ಯುಎಇ, ಅಬ್ದುಲ್ಲಾ ಅನಿತಾ, ಅಲ್ತಾಫ್ ಬುಡೋಳಿ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಹಾಗೂ ಉಸ್ಮಾನ್ ದಾರಿಮಿ ಪೆರ್ನೆ ಅವರನ್ನು ಸನ್ಮಾನಿಸಲಾಯಿತು. ಮಗ್ರಿಬ್ ನಮಾಝ್ ಬಳಿಕ ಮಿಶ್ಕಾತುಲ್ ಮದೀನಾ ಬುರ‍್ದಾ ತಂಡದಿಂದ ಬುರ‍್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
ದ.ಕ. ಹಾಗೂ ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ,
ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ. ಪಾಣೆಮಂಗಳೂರು, ಸದಸ್ಯ ಅಶ್ರಫ್ ನಾವೂರು ದಫ್ ಸ್ಪರ್ಧಾ ಕಾರ್ಯಕ್ರಮ ನಡೆಸಿಕೊಟ್ಟರು. ಎ.ಎಚ್.ದಾರಿಮಿ
ಮಿತ್ತಬೈಲು, ಅಶ್ರಫ್ ಹನೀಫಿ ಉಪ್ಪಿನಂಗಡಿ ಹಾಗೂ ಇರ್ಶಾದ್ ಕೂರ್ನಡ್ಕ ತೀರ್ಪಗಾರರಾಗಿ ಸಹಕರಿಸಿದರು.
ಐಎಂಸಿ ಕಾರ್ಯದರ್ಶಿ ಅಲ್ತಾಫ್
ವಿದ್ಯಾನಗರ ಸ್ವಾಗತಿಸಿ, ಅಧ್ಯಕ್ಷ ಅಬ್ದುಲ್ ರಶೀದ್ ಗಡಿಯಾರ ವಂದಿಸಿದರು. ಝೈನುದ್ದೀನ್ ಪಾಲಕ್ಕಾಡ್ ಕಾರ್ಯಕ್ರಮ ನಿರೂಪಿಸಿದರು.